Delhi Air Pollution: ಅಪಾಯಕಾರಿ ಹಂತ ತಲುಪಿದ ದೆಹಲಿ ಗಾಳಿ ಗುಣಮಟ್ಟ, GRAPಯ ಹಂತ-3 ಜಾರಿ
ಚಳಿಗಾಲ ಆರಂಭವಾಗುತ್ತಿದ್ದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹವಾಮಾನ ಅಪಾಯದ ಮಟ್ಟವನ್ನು ತಲುಪುತ್ತದೆ. ಸದ್ಯ ದೆಹಲಿ ಮತ್ತೆ ತೀವ್ರ ವಾಯುಮಾಲಿನ್ಯಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ನಗರದಲ್ಲಿ ಶಾಲೆಗಳಿಗೆ ಎರಡು ದಿನಗಳವರೆಗೆ ರಜೆ ಘೋಷಿಸಲಾಗಿದೆ.
ಗಾಳಿಯಲ್ಲಿನ ಕಲುಷಿತತೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವುದರಿಂದ ದೆಹಲಿಯಲ್ಲಿ ಜನ ಮನೆಯಿಂದ ಹೊರಬರಲು ಹಿಂದೇಟಾಕುವಂತಹ ಪರಿಸ್ಥಿತಿ ಎದುರಾಗಿದೆ. ದೆಹಲಿಯ ಹವಾಮಾನ ಅತ್ಯಂತ ಕೆಟ್ಟ ಮಟ್ಟವನ್ನು ತಲುಪಿದೆ. ಕಲುಷಿತ ಗಾಳಿಯ ಮಟ್ಟವು 'ಅತ್ಯಂತ ಕೆಟ್ಟ' ಅಂದರೆ ಅಪಾಯಕಾರಿ ಮಟ್ಟವನ್ನು ಮುಟ್ಟುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಗ್ರೇಡೆಡ್ ಆಕ್ಷನ್ ರೆಸ್ಪಾನ್ಸ್ ಸಿಸ್ಟಂ (ಜಿಆರ್ ಎಪಿ)ಯ ಮೂರನೇ ಹಂತವನ್ನು ಜಾರಿಗೆ ತಂದಿದೆ.

ಪ್ರಸ್ತುತ ಗಾಳಿಯ ಗುಣಮಟ್ಟದ ಪ್ರವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಗಾಳಿಯ ಗುಣಮಟ್ಟದಲ್ಲಿ ಮತ್ತಷ್ಟು ಹದಗೆಡುವುದನ್ನು ತಡೆಯುವ ಪ್ರಯತ್ನದಲ್ಲಿ IIIನೇ ಹಂತವನ್ನು ಅಳವಡಿಸಲಾಗಿದೆ ಎಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗ ಹೇಳಿದೆ. ಸಿಎಕ್ಯೂಎಂ ಸಭೆಯ ಬಳಿಕ ರಾಜಧಾನಿಯಲ್ಲಿ IIIನೇ ಹಂತ ಅನುಷ್ಠಾನಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ವಾಯು ಗುಣಮಟ್ಟ ನಿರ್ವಹಣಾ ಆಯೋಗ ಪ್ರಸ್ತುತ ಗಾಳಿಯ ಗುಣಮಟ್ಟದ ಪ್ರವೃತ್ತಿಯನ್ನು ಗಮನಿಸುತ್ತಿದೆ. ಗಾಳಿಯ ಗುಣಮಟ್ಟ ಕಾಪಾಡುವ ಪ್ರಯತ್ನದಲ್ಲಿದೆ. ಗಾಳಿಯ ಗುಣಮಟ್ಟ ತೀವ್ರ ಕಳಪೆಯಾದಲ್ಲಿ (ದೆಹಲಿ AQI 401) CAQM ಗ್ರಾಪ್‌ನ ಹಂತ IIIನ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅದು ತಿಳಿಸಿದೆ.
ಆನ್‌ಲೈನ್‌ನಲ್ಲಿ ತರಗತಿ ಮಾಡಲು ಸೂಚನೆ
ಗಾಳಿಯ ಗುಣಮಟ್ಟ ಕಡಿಮೆಯಾಗುತ್ತಿರುವ ಬೆನ್ನಲ್ಲೆ ರಾಜ್ಯ ಸರ್ಕಾರ ದೆಹಲಿ ಮತ್ತು ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್ ಮತ್ತು ಗೌತಮ್ ಬುದ್ಧ ನಗರ ಜಿಲ್ಲೆಗಳಲ್ಲಿ BS III ಪೆಟ್ರೋಲ್ ಮತ್ತು BS IV ಡೀಸೆಲ್ LMV ಗಳ 4 ಚಕ್ರದ ವಾಹನಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ. ಜೊತೆಗೆ ಈ ಪ್ರದೇಶದಲ್ಲಿನ ಐದನೇ ತರಗತಿವರೆಗಿನ ಶಾಲೆಗಳಿಗೆ ರಾಜ್ಯ ಸರ್ಕಾರ ಎರಡು ದಿನ ರಜೆಯನ್ನು ಘೋಷಿಸಿದೆ. ಸಾಧ್ಯವಾದಷ್ಟು ಆನ್‌ಲೈನ್‌ನಲ್ಲಿ ತರಗತಿ ಮಾಡಲು ಶಾಲಾ ಆಡಳಿತಗಳಿಗೆ ಸೂಚನೆ ನೀಡಿದೆ.
In light of the rising pollution levels, all govt and private primary schools in Delhi will remain closed for the next 2 days
— Arvind Kejriwal (@ArvindKejriwal) November 2, 2023
ಈಗ ನಿರ್ಬಂಧಗಳೇನು ಗೊತ್ತಾ?
GRAP ಹಂತ-III ನಿರ್ಬಂಧಗಳಲ್ಲಿ ಸ್ಟೋನ್ ಕ್ರಷರ್‌ಗಳ ಕಾರ್ಯಾಚರಣೆಗಳನ್ನು ನಿಲ್ಲಿಸುವುದು, NCR ನಲ್ಲಿನ ಎಲ್ಲಾ ಗಣಿಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಬಂದ್ ಮಾಡುವುದು ಮತ್ತು ಸಂಪೂರ್ಣ NCR ನಲ್ಲಿ (ಕೆಲವು ವರ್ಗದ ಯೋಜನೆಗಳನ್ನು ಹೊರತುಪಡಿಸಿ) ನಿರ್ಮಾಣ ಮತ್ತು ಉರುಳಿಸುವಿಕೆಯ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಹೇರುವುದಾಗಿದೆ.

ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲೆಯಲ್ಲಿ ವಾಯು ಮಾಲಿನ್ಯವನ್ನು ಎದುರಿಸಲು ಕ್ರಿಮಿನಲ್ ಪ್ರೊಸೀಜರ್ ಆಕ್ಟ್, 1973 ರ ಸೆಕ್ಷನ್ 144 ರ ಅಡಿಯಲ್ಲಿ ಗುರುಗ್ರಾಮ್‌ನ ಎಲ್ಲಾ ಪ್ರದೇಶಗಳಲ್ಲಿ ಕಸ, ಎಲೆಗಳು, ಪ್ಲಾಸ್ಟಿಕ್ ಮತ್ತು ರಬ್ಬರ್‌ನಂತಹ ತ್ಯಾಜ್ಯ ವಸ್ತುಗಳನ್ನು ಸುಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ದೆಹಲಿ ಪ್ರದೇಶವಾರು ಗಾಳಿ ಗುಣಮಟ್ಟ
ದೆಹಲಿಯ ಕೆಲ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಹೀಗಿದೆ. ಆನಂದ್ ವಿಹಾರ್ (AQI 450), ಬವಾನಾ (AQI 452), ಬುರಾರಿ ಕ್ರಾಸಿಂಗ್ (AQI 408), ದ್ವಾರಕಾ ಸೆಕ್ಟರ್ 8 (AQI 445), ಜಹಾಂಗೀರ್ಪುರಿ (AQI 433), ಮುಂಡ್ಕಾ (AQI 460), NSIT ದ್ವಾರಕಾ (AQI 406) , ನಜಾಫ್‌ಗಢ್ (AQI 414), ನರೇಲಾ (AQI 433), ನೆಹರು ನಗರ (AQI 400), ನ್ಯೂ ಮೋತಿ ಬಾಗ್ (AQI 423), ಓಖ್ಲಾ ಹಂತ 2 (AQI 415), ಪತ್ಪರ್‌ಗಂಜ್ (AQI 412), ಪಂಜಾಬಿ ಬಾಗ್ (AQI 445), ಆರ್ ಕೆ ಪುರಂ (AQI 417), ರೋಹಿಣಿ (AQI 454), ಶಾದಿಪುರ (AQI 407) ಮತ್ತು ವಜೀರ್‌ಪುರ (AQI 435).
0 ಮತ್ತು 50 ರ ನಡುವಿನ ಗಾಳಿಯ ಗುಣಮಟ್ಟವನ್ನು (AQI) ಉತ್ತಮ ಎಂದು ಪರಿಗಣಿಸಲಾಗುತ್ತದೆ. 51 ಮತ್ತು 100 "ತೃಪ್ತಿದಾಯಕ", 101 ಮತ್ತು 200 "ಮಧ್ಯಮ", 201 ಮತ್ತು 300 "ಕಳಪೆ", 301 ಮತ್ತು 400 "ಅತ್ಯಂತ ಕಳಪೆ" ಮತ್ತು 401 ಮತ್ತು 500 "ತೀವ್ರ" ತೀವ್ರ ಕಳಪೆ ಎಂದು ಪರಿಗಣಿಸಲಾಗುತ್ತದೆ.
ದೆಹಲಿಯಲ್ಲಿ ಗಾಳಿಮಟ್ಟ ಹದಗೆಡಲು ಇದೂ ಒಂದು ಕಾರಣ..
ಭಾನುವಾರ ಪಂಜಾಬ್‌ನ ಕೃಷಿ ಭೂಮಿಯಲ್ಲಿ ಒಣ ಹುಲ್ಲು ಸುಡುವುದು ಶೇ.740 ರಷ್ಟು ಹೆಚ್ಚಳವಾಗಿದೆ. ರಾಜ್ಯದಾದ್ಯಂತ 1,068 ಕಡೆ ಒಣ ಹುಲ್ಲು ಅಥವಾ ಬೆಳೆ ಕಸ ಸುಡುವುದು ವರದಿಯಾಗಿವೆ. ಪ್ರಸ್ತುತ ಕೊಯ್ಲು ಋತುವಿನಲ್ಲಿ ಒಂದೇ ದಿನದಲ್ಲಿ ಇದು ಅತಿ ಹೆಚ್ಚಾಗಿದೆ. ಇದು ಉಪಗ್ರಹ ಚಿತ್ರಗಳಲ್ಲಿಯೂ ಸಹ ಕಾಣಿಸಿಕೊಂಡಿದೆ.
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Summer Walking: ಬೇಸಿಗೆಯಲ್ಲಿ ವಾಕಿಂಗ್ ಮಾಡುವವರು ಈ ನಿಯಮ ತಪ್ಪದೇ ಪಾಲಿಸಿ.. -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್












Click it and Unblock the Notifications