ಹಿಂದೂ, ಸಿಖ್ ಪುರೋಹಿತರಿಗೆ ತಿಂಗಳಿಗೆ 18000 ರೂಪಾಯಿ ಘೋಷಿಸಿದ ಕೇಜ್ರಿವಾಲ್: ದೆಹಲಿಯಲ್ಲಿ ಬಿಜೆಪಿಗೆ ಹೊಸ ಆತಂಕ ಶುರು
ನವದೆಹಲಿ, ಡಿಸೆಂಬರ್ 30: ದೇಶದ ವಿವಿಧ ವಿಧಾನಸಭಾ ಚುನಾವಣೆಯಗಳಲ್ಲಿ ಗ್ಯಾರೆಂಟಿ ಯೋಜನೆಗಳು, ನಿರುದ್ಯೋಗಿ ಮಹಿಳೆಯರಿಗೆ ಮಾಸಿಕ ಸ್ಟೈಫಂಡ್ ಭರವಸೆ ನೀಡಿದ್ದರ ಮಧ್ಯೆ ದೆಹಲಿ ಆಮ್ ಆದ್ಮಿ ಪಕ್ಷವು ಹೊಸ ಯೋಜನೆ ಘೋಷಿಸಿದೆ. ಪುರೋಹಿತರಿಗೆ ಮಾಸಿಕ ಬೃಹತ್ ಮೊತ್ತದ ಗೌರವಧನ ನೀಡುವುದಾಗಿ ಎಎಪಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿಗೆ ಠಕ್ಕರ್ ಕೊಟ್ಟಿದ್ದಾರೆ.
ಹೌದು, ಎಎಪಿ ನೇತೃತ್ವದ ದೆಹಲಿ ರಾಜ್ಯ ಸರ್ಕಾರವು ಇನ್ನೇನು 2025ರಲ್ಲಿ ನೆಡೆಯಲಿರುವ ವಿಧಾನಸಭಾ ಚುನಾವಣೆ ಎದುರಿಸಲು ಸಜ್ಜಾಗಿದೆ. ನಿರುದ್ಯೋಗಿ ಮಹಿಳೆಯರಿಗೆ ಮಾಸಿಕ ಸ್ಟೈಫಂಡ್ ನೀಡುವುದಾಗಿ ಘೋಷಿಸಿದ್ದ ಎಎಪಿಯು ಬಿಜೆಪಿಗೆ ಶಾಕ್ ನೀಡಿದೆ. 'ಪೂಜಾರಿ ಗ್ರಂಥಿ ಸಮ್ಮಾನ್ ಯೋಜನೆ' ಘೋಷಣೆ ಮಾಡಿದೆ. ಹಿಂದೂ, ಸಿಖ್ ಪುರೋಹಿತರಿಗೆ ತಿಂಗಳಿಗೆ 18000 ರೂಪಾಯಿ ಘೋಷಿಸುವ ಮೂಲಕ ಮತ್ತೆ ಅಧಿಕಾರ ಗದ್ದುಗೆ ಏರಲು ಎಎಪಿ ಬಲವಾದ ಪ್ಲಾನ್ ಮಾಡಿಕೊಂಡಂತೆ ಕಾಣುತ್ತಿದೆ.

'ಪೂಜಾರಿ ಗ್ರಂಥಿ ಸಮ್ಮಾನ್ ಯೋಜನೆ'ಯಡಿ ಹಿಂದೂ, ಸಿಖ್ ಪುರೋಹಿತರಿಗೆ ಗೌರವಧನ ಪಡೆಯಲಿದ್ದಾರೆ. ಈ ಯೋಜನೆಗೆ ನೋಂದಣಿ ಮಂಗಳವಾರದಿಂದ ಆರಂಭವಾಗಲಿದೆ ಎಂದು ಸ್ವತಃ ಅರವಿಂದ್ ಕೇಜ್ರವಾಲ್ ಅವರು ಯೋಜನೆ ಘೋಷಣೆ ಸೇರಿದಂತೆ ಮಹತ್ವ ಮಾಹಿತಿಯನ್ನು ಮಂಗಳವಾರ ನೀಡಿದರು.
ಈ ನೂತನ ಯೋಜನೆ ಅಡಿಯಲ್ಲಿ ದೇವಾಲಯಗಳ ಅರ್ಚಕರು ಮತ್ತು ಗುರುದ್ವಾರದ 'ಗ್ರಂಥಿ'ಗಳಿಗೆ ಗೌರವಧನ ನೀಡಬಹುದಾಇಗದೆ. ಅವರೆಲ್ಲ ಮಾಸಿಕವಾಗಿ ರೂಪಾಯಿ 18,000 ಗೌರವಧನ ಪಡೆಯಬಹುದು. ಇಂತಹ ಯೋಜನೆ ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ಮಾಡಲಾಗುತ್ತಿದೆ.
ಪುರೋಹಿತರ ಪೀಳಿಗೆಯಿಂದ ಪೀಳಿಗೆಗೆ ವೃತ್ತಿ ಮುಂದುವರೆಸುವ ವರ್ಗವಾಗಿದೆ. ಹೀಗಾಗಿ ಅವರು ತಮ್ಮ ಕುಟುಂಬದ ಬಗ್ಗೆ ಯೋಚಿಸುವುದು, ಅವರ ಭವಿಷ್ಯದ ಕುರಿತು ಚಿಂತಿಸುವುದು ಕಡಿಮೆ ಎಂದು ಭಾವಿಸಿರುವ ಅವರು, ಪುರೋಹಿತರ ಬಗ್ಗೆ ಕಾಳಜಿ ಮೆರೆದಿದ್ದಾರೆ. ಸ್ಥಳೀಯ ಹನುಮಾನ್ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿ ಹೊಸ ಯೋಜನೆಯನ್ನು ಅಧಿಕೃತವಾಗಿ ಘೋಷಿಸಿದರು.
ಮಹಿಳಾ ಸಮ್ಮಾನ್ ಯೋಜನೆ ಏನಿದು?
ಡಿಸೆಂಬರ್ ಮೊದಲ ವಾರದ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ನಿರುದ್ಯೋಗಿ ಮಹಿಳೆಯರಿಗೆ ಮಾಸಿಕವಾಗಿ 2100 ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ. ಈ ಸಂಬಂಧ 'ಸ್ಟೈಫಂಡ್ ನೀಡುವ ಮಹಿಳಾ ಸಮ್ಮಾನ್ ಯೋಜನೆ' ಆರಂಭಿಸಿದ್ದಾರೆ. ಈ ಯೋಜನೆಗೆ ಹೆಚ್ಚು ಹೆಚ್ಚು ನೋಂದಣಿ ಆಗಬೇಕೆಂದು ಎಎಪಿ ನಾಯಕರು ಅಭಿಯಾನ ಆರಂಭಿಸಿದ್ದರು.
ನಂತರ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (WCD) ಇಲಾಖೆಯು "ಮಹಿಳಾ ಸಮ್ಮಾನ್" ಯೋಜನೆಯು ಅಸ್ತಿತ್ವದಲ್ಲಿ ಇಲ್ಲ ಎಂದಿತು. ಆ ಬಗ್ಗೆ ಜಾಹೀರಾತು ನೀಡಿ, ಯಾರು ಸಹ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು ಎಂದು ತಿಳಿಸಿತ್ತು.
ಇದೆಲ್ಲ ಬೆಳವಣಿಗೆ ನಡೆದ ಬೆನ್ನಲ್ಲೆ ಆಮ್ ಆದ್ಮಿ ಪಕ್ಷ (ಎಎಪಿ) ಕೆಲವು ನಾಯಕರು ಬಿಜೆಪಿಯ ಒತ್ತಡದಲ್ಲಿದ್ದಾರೆ ಎಂಬ ಆರೋಪ ಕೇಳೀ ಬಂತು. ಇಂತವ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ಪಕ್ಷ ಹೇಳಿತು. ಎಎಪಿ ಹೊಸ ಯೋಜನೆ ಘೋಷಣೆ ವಿಚಾರವಾಗಿ ದೆಹಲಿ ವಿಪಕ್ಷಗಳು ಇಲ್ಲ ಸಲ್ಲದ ಆರೋಪ ಮಾಡಿದವು. ಸುಳ್ಳು ಹೇಳಿ ಮಾಹಿ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.












Click it and Unblock the Notifications