Holiday: 'ಸರ್ಕಾರಿ ನೌಕರರಿಗೆ ಎರಡು ದಿನ ರಜೆ ಘೋಷಿಸಿ'

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಇದನ್ನು ಕಣ್ತಂಬಿಕಳ್ಳಲು ಬರೀ ದೇಶ ಅಲ್ಲದೆ ವಿದೇಶದಿಂದಲೂ ಭಕ್ತರ ದಂಡೇ ಹರಿದುಬರುತ್ತಲೇ ಇದೆ. ಆದರೆ, ನಮ್ಮ ದೇಶದಲ್ಲಿ ರಜೆ ಸಿಗದ ಕಾರಣ ಬಹತೇಕ ಸರ್ಕಾರಿ ಸರ್ಕಾರಿ ನೌಕರರು ಇಲ್ಲಿಗೆ ಭೇಟಿ ನೀಡಲು ಇಷ್ಟವಿದ್ದರೂ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಈ ಭಾಗದ ಶಾಸಕಿಯೊಬ್ಬರು ಸಿಎಂ ಗೆ ಮನವಿಯೊಂದನ್ನು ಇಟ್ಟಿದ್ದಾರೆ.

ರಜೆಯಿಲ್ಲದ ಹಿನ್ನೆಲೆ ಬಹುತೇಕ ಸರ್ಕಾರಿ ನೌಕಕರು ಕುಂಭಮೇಳದಲ್ಲಿ ಪಾಲ್ಗೊಳ್ಳಲು ಸಾಧ್ಯ ಆಗುತ್ತಿಲ್ಲ. ಈ ಬಗ್ಗೆ ಬಿಹಾರದ ಬರಚಟ್ಟಿ ಶಾಸಕಿ ಜ್ಯೋತಿ ಮಾಂಝಿ ಸಿಎಂ ನಿತೀಶ್ ಕುಮಾರ್ ಮುಂದೆ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಸಿಎಂ ನಿತೀಶ್ ಕುಮಾರ್‌ಗೆ ಲಿಖಿತ ಅರ್ಜಿ ಸಲ್ಲಿಕೆ ಮಾಡಿದ್ದು, ಇದರಲ್ಲಿ ಎರಡು ದಿನಗಳ ಕಾಲ ಸರ್ಕಾರಿ ರಜೆ ಘೋಷಣೆ ಮಾಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Declare Two-Day Holiday for Government Employees MLA request to Chief Minister

ಪ್ರಗತಿ ಯಾತ್ರೆ ಹಿನ್ನೆಲೆ ಗುರುವಾರ ಸಿಎಂ ನಿತೀಶ್ ಕುಮಾರ್ ಗಯಾಗೆ ಭೇಟಿ ನೀಡಿದ್ದರು. ಗಯಾದಲ್ಲಿ ಹಲವು ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದು, ಈ ವೇಳೆ, ಬರಚಟ್ಟಿ ಶಾಸಕಿ ಜ್ಯೋತಿ ಮಾಂಝಿ ಅವರು, ಸರ್ಕಾರಿ ನೌಕರರ ಪರ ಅರ್ಜಿ ಸಲ್ಲಿಸಿದರು. ಮಹಾಕುಂಭಮೇಳಕ್ಕೆ ಹೋಗಲು ಸರ್ಕಾರಿ ನೌಕರಿಯಲ್ಲಿರುವ ಶಿಕ್ಷಕರು ಹಾಗೂ ನೌಕರರಿಗೆ ಎರಡು ದಿನ ಸರ್ಕಾರಿ ರಜೆ ನೀಡುವಂತೆ ಮನವಿ ಮಾಡಿದರು.

ಸರ್ಕಾರಿ ಶಿಕ್ಷಕರು, ನೌಕರರು ಪ್ರತಿದಿನ ಕೆಲಸಕ್ಕೆ ಹೋಗುತ್ತಾರೆ. ಮಹಾಕುಂಭಕ್ಕೆ ರಜೆ ಘೋಷಣೆ ಮಾಡಬೇಕು ಎಂಬುದು ಜನರ ಆಗ್ರಹವಾಗಿದೆ. ಎಲ್ಲಾ ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೆ ಎರಡು ದಿನ ಸರ್ಕಾರಿ ರಜೆ ನೀಡಬೇಕೆಂದು ಸಿಎಂ ನಿತೀಶ್ ಕುಮಾರ್ ಅವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಬರಚಟ್ಟಿ ಶಾಸಕಿ ಜ್ಯೋತಿ ಮಾಂಝಿ ಹೇಳಿದರು. ಈ ಬೇಡಿಕೆ ಬಗ್ಗೆ ಮಾತನಾಡಿದ ಜ್ಯೋತಿ ಮಾಂಝಿ, ತಮ್ಮ ಬೇಡಿಕೆಗಳನ್ನು ನೌಕರರು ತಮ್ಮ ಮುಂದಿಟ್ಟರು. ಸರ್ಕಾರಿ ನೌಕರರು ನಿಯಮಗಳಿಗೆ ಬದ್ಧರಾಗಿರುತ್ತೇವೆ ಎಂದು ಹೇಳಿದರು.

ಅನೇಕ ಶಿಕ್ಷಕರು ಮತ್ತು ಇತರ ಇಲಾಖೆಗಳ ಸರ್ಕಾರಿ ನೌಕರರು ಬಿಹಾರದ ಸರ್ಕಾರಿ ನೌಕರರಿಗೆ ಮಹಾಕುಂಭ ಸ್ಥಳಕ್ಕೆ ಅವಕಾಶ ನೀಡುವಂತೆ ನನ್ನ ಬಳಿ ತಮ್ಮ ಅಹವಾಲು ಸಲ್ಲಿಕೆ ಮಾಡಿದರು, ನನಗೂ ಇದು ಸರಿ ಎನಿಸಿತು. ಆದ್ದರಿಂದ ಈ ಬಗ್ಗೆ ಸಿಎಂ ಬಳಿ ಮನವಿ ಮಾಡಿದೆ. ಮಹಾಕುಂಭ ಮೇಳೆಕ್ಕೆ ತೆರಳಲು ಎರಡು ದಿನ ಸರ್ಕಾರಿ ರಜೆ ಘೋಷಣೆ ಮಾಡುವಂತೆ ಅರ್ಜಿ ಕೊಟ್ಟಿದ್ದೇನೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+