ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಿ

ಅಲಿಗಢ, ಸೆ.27: ಭಾರತದ ಮೇಲೆ ಕಾಲುಕೆರೆದುಕೊಂಡು ಜಗಳಕ್ಕೆ ಬರುವ/ಸತತವಾಗಿ ಭಯೋತ್ಪಾದನೆ ಸೃಷ್ಟಿಸುತ್ತಿರುವ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸುವಂತೆ ಪ್ರಜ್ಞಾವಂತ ಸ್ಥಳೀಯ ಮುಸ್ಲಿಮರು ವಿಶ್ವಸಂಸ್ಥೆಗೆ ಮನವಿ ಸಲ್ಲಿಸಿದ್ದಾರೆ.

'ಜಮ್ಮುವಿನಲ್ಲಿ ಗುರುವಾರ ನಡೆದ ಅಪ್ರಚೋದಿತ ದಾಳಿ ಅದಕಲ್ಕೂ ಮುನ್ನ ಪೇಶಾವರದಲ್ಲಿ ಐತಿಹಾಸಿಕ ಚರ್ಚ್ ಮೇಲೆ ನಡೆದ ಬರ್ಬರ ದಾಳಿಯ ಸಮ್ಮುಖದಲ್ಲಿ ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರ ಎಂಬುದು ಪ್ರಪಂಚಕ್ಕೆ ಮತ್ತೊಮ್ಮೆ ಮನವರಿಕೆಯಾಗಿದೆ. ವಿಶ್ವ ಶಾಂತಿಗೆ ಪಾಕಿಸ್ತಾನ ನಿಜಕ್ಕೂ ಮಾರಕವಾಗಿದೆ' ಎಂದು ಪ್ರೊಫೆಸರ್ ರಝಾಉಲ್ಲಾ ಖಾನ್ ವಿಷಾದ ವ್ಯಕ್ತಪಡಿಸಿದ್ದಾರೆ.

Declare Pakistan a terror state demand FMSA Muslim intellectuals

Forum for Muslim Studies & Analysis (FMSA) ಸಂಸ್ಥೆ ಆಯೋಜಿಸಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ರಝಾಉಲ್ಲಾ, 'ಪಾಕಿಸ್ತಾನದ ಈ ಚರ್ಯೆಗಳನ್ನು (ಪೇಶಾವರ ದಾಳಿ) ಕೇವಲ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿ ಎನ್ನಲಾಗುವುದಿಲ್ಲ.'

'ಇದು ವಿಶ್ವ ಭ್ರಾತೃತ್ವ/ ಮಾನವತಾವಾದದ ಮೇಲೆ ನಡೆದ ದಾಳಿ. ಪಾಕಿಸ್ತಾನ ಕೇವಲ ಭಾರತದ ಮೇಲಷ್ಟೇ ಭಯೋತ್ಪಾದಕತೆಯನ್ನು ಸೃಷ್ಟಿಸುತ್ತಿಲ್ಲ. ಅದು ತನ್ನದೇ ನೆಲದಲ್ಲಿ ಅಲ್ಪಸಂಖ್ಯಾತ ಶಿಯಾ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಮೇಲೆ ತನ್ನ ಅಟ್ಟಹಾಸ ತೋರುತ್ತಿದೆ. ಹಾಗಾಗಿ ಪಾಕಿಸ್ತಾನ ಉಗ್ರ ರಾಷ್ಟ್ರವಾಗಿದೆ' ಎಂದು ವ್ಯಾಖ್ಯಾನಿಸಿದರು.

ನೈರೋಬಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಮುಖ್ಯಸ್ಥನೂ ಪಾಕಿಸ್ತಾನದವನೇ ಎಂಬುದು ಗೊತ್ತಾಗಿದೆ. ಹಾಗಾಗಿ ವಿಶ್ವ ಶಾಂತಿಗೆ ಮಾರಕವಾಗಿರುವ ಪಾಕಿಸ್ತಾನವನ್ನು ಉಗ್ರ ರಾಷ್ಟ್ರವೆಂದು ಸಾರುವಂತೆ ಪ್ರೊಫೆಸರ್ ರಝಾಉಲ್ಲಾ ಖಾನ್ ಆಗ್ರಹಿಸಿದರು.

ಇಡೀ ಜಗತ್ತು ಪಾಕ್ ಮೇಲೆ ಆರ್ಥಿಕ ದಿಗ್ಬಂಧನ ಹೇರಿ, ಅದಕ್ಕೆ ಉಗ್ರ ರಾಷ್ಟ್ರ ಪಟ್ಟ ಕಟ್ಟಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಸ್ಕಿಂ ನಾಯಕರು ವಿಶ್ವಸಂಸ್ಥೆಗೆ ಒಕ್ಕೊರಲ ಮನವಿ ಸಲ್ಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+