ಕೈ ಪಡೆಯಲ್ಲಿ ಅಸಮಾಧಾನದ ಕಿಚ್ಚು; ಹಿರಿಯ ಸಚಿವರ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚನೆ?‌

ಬೆಂಗಳೂರು, ಜುಲೈ 31: ವಿಧಾನಸಭಾ ಚುನಾವಣೆಯಲ್ಲ 135 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಅಧಿಕಾರ ಹಿಡಿದು ಎರಡು ತಿಂಗಳು ಕಳೆದಿದ್ದು, ಪಕ್ಷದದಲ್ಲಿ ಆಂತರಿಕ ಭಿನ್ನಮತ ಜೋರಾಗಿದೆ.

ಸಚಿವರು, ಶಾಸಕರ ನಡುವಿನ ಸಮನ್ವಯತೆ ಕೊರತೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪಕ್ಷದಲ್ಲೇ ಬಹಿರಂಗ ಹೇಳಿಕೆಗೂ ಜೋರಾಗಿದ್ದು, ಈ ಎಲ್ಲಾ ಅಸಮಾಧಾನಕ್ಕೆ ಬ್ರೇಕ್‌ ಹಾಕಲು ಕಾಂಗ್ರೆಸ್‌ ಹೈಕಮಾಂಡ್‌ ಪ್ಲಾನ್‌ ಮಾಡಿದ್ದು, ಆಗಸ್ಟ್‌ 2 ರಂದು 37 ಜನ ಕಾಂಗ್ರೆಸ್‌ ನಾಯಕರಿಗೆ ದೆಹಲಿಗೆ ಬರುವಂತೆ ಬುಲಾವ್‌ ನೀಡಿದೆ.

Debate For Formation Congress Coordinating Committee In Karnataka

ಈಗಾಗಲೇ ಹೈಕಮಾಂಡ್‌ ಸೂಚನೆಯಂತೆ ಸಿದ್ದರಾಮಯ್ಯ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆದಿದ್ದು, ಸದ್ಯ ಶಾಸಕರ ಅಸಮಾಧಾನ ಇನ್ನೂ ಶಮನವಾದಂತೆ ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ಹೈಕಮಾಂಡ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌ ಸೇರಿದಂತೆ 37 ಜನ ನಾಯಕರಿಗೆ ಬುಲಾವ್‌ ನೀಡಿದೆ.

ಇನ್ನೂ ಲೋಕಸಭಾ ಚುನಾವಣೆಯ ಹಿನ್ನೆಲೆ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿರುವ ಕಾಂಗ್ರೆಸ್‌ ಹೈಕಮಾಂಡ್‌, ರಾಜ್ಯ ನಾಯಕರಲ್ಲಿನ ಅಸಮಾಧಾನ ಶಮನಗೊಳಿದಲು, ಸರ್ಕಾರ ಹಾಗೂ ಪಕ್ಷದ ನಡುವೆ ಸಮನ್ವಯ ಸಾಧಿಸಲು ಸಮನ್ವಯ ಸಮಿತಿ ರಚನೆ ಬಗ್ಗೆ ಚರ್ಚೆ ಶುರುವಾಗಿದ್ದು, ಆಗಸ್ಟ್‌ 2 ರಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ಸರ್ಕಾರ ರಚನೆಯ ಆರಂಭದಿಂದಲೂ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಸರ್ಕಾರದ ವಿರುದ್ದ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಕೆಲ ಶಾಸಕರಿಗೂ ಸಹ ಹೈಕಮಾಂಡ್‌ ಬುಲಾವ್‌ ನೀಡಿದೆ. ಇನ್ನೂ ಅನುದಾನದ ಆಕ್ರೋಶ, ವರ್ಗಾವಣೆ ಸಮರ. ಸರಿಯಾಗು ಸಚಿವರು ಸ್ಪಂದಿಸುತ್ತಿಲ್ಲವೆಂಬ ಎಂಬ ಸಿಟ್ಟು ಈಗಾಗಲೇ ಜೋರಾಗಿದ್ದು, ಈ ಎಲ್ಲಾ ಸಮಸ್ಯೆಗೂ ಬ್ರೇಕ್‌ ಹಾಕಲು ಹೈಕಮಾಂಡ್‌ ಪ್ಲಾನ್‌ ನಡೆಸಿದೆ.

Debate For Formation Congress Coordinating Committee In Karnataka

ಇನ್ನೂ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚನೆಯಾಗುವ ಸಾಧ್ಯತೆ ಎಂದು ಹೇಳಲಾಗಿದ್ದು, ಸರ್ಕಾರದ ಪ್ರಮುಖ ನೀತಿ ನಿರ್ಧಾರಗಳನ್ನ ರಚಿಸುವುದು ನಾಮನಿರ್ದೇಶನ, ನಿಗಮ ಮಂಡಳಿ ನೇಮಕಾತಿ ವಿಚಾರದಲ್ಲಿ ಸಂಘಟಿತ ತೀರ್ಮಾನ ಕೈಗೊಳ್ಳುವುದು. ಶಾಸಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಕಾಂಗ್ರೆಸ್ ಈ ಪ್ಲಾನ್‌ ಗೆ ಮುಂದಾಗಿದೆ.

ಇತ್ತ ಸರ್ಕಾರ ರಚನೆಯಾಗಿ ಎರಡು ತಿಂಗಳಲ್ಲೇ ಶಾಸಕರ ಹಾಗೂ ಸಚಿವರ ನಡುವೆ ಸಾಕಷ್ಟು ಅಸಮಾಧಾನ ಹೆಚ್ಚಾಗಿದ್ದು, ಇದೀಗ ಸಮನ್ವಯ ಸಮಿತಿಯನ್ನ ರಚನೆ ಮಾಡುವ ಮೂಲಕ ಕೊಂಡಿಯಾಗಿ ಕೆಲಸ ಮಾಡಲು ಈ ಸಮಿತಿ ಸಹಕಾರಿ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನೂ ಸಿಎಂ, ಡಿಸಿಎಂ ಹಾದಿಯಾಗಿ 37 ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಸಚಿವರು ಸೇರಿ ಬಸವರಾಜ ರಾಯರೆಡ್ಡಿ, ರಮೇಶ್ ಕುಮಾರ್, ಆರ್.ವಿ.ದೇಶಪಾಂಡೆ, ಬಿ.ಎಲ್.ಶಂಕರ್, ಬಿ.ಕೆ.ಹರಿಪ್ರಸಾದ್, ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಅವರಿಗೂ ಆಹ್ವಾನ ನೀಡಿದೆ. ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಕಂಡಂತೆ ಲೋಕಸಭಾ ಚುನಾವಣೆಯಲ್ಲೂ ಹೆಚ್ಚು ಸ್ಥಾನವನ್ನು ಗೆಲ್ಲುವ ಪ್ಲಾನ್‌ ಹಾಕಿಕೊಂಡಿರುವ ಹೈಕಮಾಂಡ್‌, ಸರ್ಕಾರದ ವಿರುದ್ದ ಶಾಸಕರ ಅಸಮಾಧಾನವನ್ನ ಶಮನಗೊಳಿಸಿ ಲೋಕಸಮರಕ್ಕೆ ಸಿದ್ದತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸಲಿದೆ.

ಒಟ್ನಲಿ ಮುಂದಿನ ವರ್ಷ ಲೋಕಸಭಾ ಚುನಾವಣೆ ಇರುವ ಹಿನ್ನೆಲೆ ಸರ್ಕಾರ ಹಾಗೂ ಪಕ್ಷದ ಮಧ್ಯೆ ಹೆಚ್ಚಿನ ಸಮನ್ವಯ ಅಗತ್ಯವಿದೆ. ಅಲ್ಲದೇ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಹೋಗಲು ನಿರ್ಧಾರಿಸಿದ್ದು, ಲೋಕಸಭಾ ಚುನಾವಣೆಯ ಮೇಲೆ ಹೆಚ್ಚಿನ ಗಮನಹರಿಸಬೇಕಿದೆ. ಇನ್ನೂ ಸರ್ಕಾರ ಟೇಕ್‌ಆಫ್‌ ಆಗಿ ಎರಡು ತಿಂಗಳು ಕಳೆದಿದೆಯಷ್ಟೇ ಈಗಾಗಲೇ ಹಲವು ಸಚಿವರ ವಿರುದ್ಧ ಪಕ್ಷದ ಕೆಲವು ಶಾಸಕರು ಮುನಿಸಿಕೊಂಡಿದ್ದು, ಇದು ಹೀಗೆ ಮುಂದುವರೆದರೇ ಪಕ್ಷ ಹಾಗೂ ಸರ್ಕಾರಕ್ಕೂ ದೊಡ್ಡ ಡ್ಯಾಮೇಜ್‌ ಆಗಲಿದೆ ಎಂದು ಹೈಕಮಾಂಡ್‌ ಚಿಂತನೆ ನಡೆಸಿದ್ದು, ಹಿರಿಯ ಸಚಿವರೊಬ್ಬರ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚಿಸಲು ಚರ್ಚೆ ನಡೆಯಲಿ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+