ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಜೋಡಣೆ ಮಾರ್ಚ್ 31ಕ್ಕೆ ಮುಂದೂಡಿಕೆ? ಷರತ್ತುಗಳು ಅನ್ವಯ!

|
Google Oneindia Kannada News

Recommended Video

ಆಧಾರ್ ಜೋಡಣೆಯ ಕೊನೆಯ ದಿನಾಂಕ ಮುಂದೂಡಿಕೆ,ಆದರೆ ಷರತ್ತುಗಳು ಅನ್ವಯ | Oneindia Kannada

ನವದೆಹಲಿ, ಡಿಸೆಂಬರ್ 7: ಬ್ಯಾಂಕ್ ಖಾತೆಗೆ ಮತ್ತು ವಿವಿಧ ಸರ್ಕಾರಿ ಯೋಜನೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವುದಕ್ಕೆ ಡಿಸೆಂಬರ್ 31 ಕಡೆಯ ದಿನಾಂಕ ಎಂದು ಈ ಮೊದಲು ಭಾರತ ಸರ್ಕಾರ ಹೇಳಿತ್ತು.

ಆಧಾರ್ ಜೋಡಣೆ: ಈ ನಾಲ್ಕು ಡೆಡ್ ಲೈನ್ ನೆನಪಿರಲಿ ಆಧಾರ್ ಜೋಡಣೆ: ಈ ನಾಲ್ಕು ಡೆಡ್ ಲೈನ್ ನೆನಪಿರಲಿ

ಆದರೆ ಈ ದಿನಾಂಕವನ್ನು ಮಾರ್ಚ್ 31 ಕ್ಕೆ ಮುಂದೂಡಲು ನಿರ್ಧರಿಸಿದೆ. ಆದರೆ ಇದಕ್ಕೆ ಕೆಲವು ಷರತ್ತುಗಳು ಅನ್ವಯಿಸುತ್ತವೆ. ಆಧಾರ್ ಕಾರ್ಡ್ ಅನ್ನು ಹೊಂದಿರದಿರುವವರಿಗೆ ಮಾರ್ಚ್ ಅಂತ್ಯದವರೆಗೂ ಸಮಯಾವಕಾಶ ನೀಡುವ ಸಲುವಾಗಿ ಸರ್ಕಾರ ಈ ನಿರ್ಧಾರ ಕೈಗೊಳ್ಳುತ್ತಿದೆ.

Deadline to link aadhaar to be extended to march?

ಆದರೆ ಮೊಬೈಲ್ ಸಂಖ್ಯೆಯನ್ನು ಆಧಾರ್ ಜೊತೆ ಜೋಡಿಸಲು ಫೆಬ್ರವರಿ 6 ಕೊನೆಯ ದಿನಾಂಕ. ಈ ದಿನಾಂಕವನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ.

ಕುಷ್ಠರೋಗಿಯ ಅನ್ನ, ಪಿಂಚಣಿ ಕಿತ್ತುಕೊಂಡ ಆಧಾರ್!ಕುಷ್ಠರೋಗಿಯ ಅನ್ನ, ಪಿಂಚಣಿ ಕಿತ್ತುಕೊಂಡ ಆಧಾರ್!

ಆದರೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿರುವ ಹಲವರು, ಈ ಷರತ್ತುಬದ್ಧ ಮುಂದೂಡಿಕೆಯನ್ನೂ ವಿರೋಧಿಸಿದ್ದಾರೆ. "ಯಾರ್ಯಾರು ಈಗಾಗಲೇ ಆಧಾರ್ ಕಾರ್ಡ್ ಅನ್ನು ಹೊಂದಿದ್ದಾರೋ, ಅವರೂ ಬ್ಯಾಂಕ್ ಖಾತೆ ಅಥವಾ ಇತರೆ ಸೌಲಭ್ಯಕ್ಕೆ ಆಧಾರ್ ಅನ್ನು ಜೋಡಿಸಬೇಡಿ ಎಂದು ನಾನು ಕೇಳಿಕೊಳ್ಳುತ್ತೇನೆ. ಏಕೆಂದರೆ ಇದು ದುರುಪಯೋಗವಾಗುವ ಎಲ್ಲಾ ಸಾಧ್ಯತೆಯೂ ಇದೆ" ಎಂದು ಆಧಾರ್ ಜೋಡಣೆಯನ್ನು ವಿರೋಧಿಸುವವರು ಹೇಳಿದ್ದಾರೆ.

English summary
The deadline to link aadhaar number with bankaccounts and various government schemes can be postponed from December 31st to March 31st. Central government of India told this to Supreme court on Dec 7th. But this some conditions are applied for this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X