ಜಾರ್ಖಂಡ್: ಹಸು ಸತ್ತಿದ್ದಕ್ಕೆ ಮನೆಗೆ ಬೆಂಕಿ ಇಟ್ಟ ಜನ
ಗಿರಿದಿಹ್(ಜಾರ್ಖಂಡ್), ಜೂನ್ 28: ವ್ಯಕ್ತಿಯೊಬ್ಬರ ಮನೆಯ ಮುಂದೆ ಹಸು ಸತ್ತಿರುವುದನ್ನು ಕಂಡು, ಜನರೆಲ್ಲ ಸೇರಿ ವ್ಯಕ್ತಿಯನ್ನು ಚೆನ್ನಾಗಿ ಥಳಿಸಿ, ಆತನ ಮನೆಗೆ ಬೆಂಕಿ ಇಟ್ಟ ಘಟನೆ ಜಾರ್ಖಂಡ್ ರಾಜ್ಯದ ಗಿರಿದಿಹ್ ಎಂಬ ಪ್ರದೇಶದಲ್ಲಿ ನಡೆದಿದೆ.
ಉಸ್ಮಾನ್ ಅನ್ಸಾರಿ ಎಂಬುವವರ ಮನೆಯ ಮುಂದೆ ಹಸು ಸತ್ತುಬಿದ್ದಿದ್ದನ್ನು ಕಂಡು ಸ್ಥಳೀಯರು ಆತನನ್ನು ಚೆನ್ನಾಗಿ ಥಳಿಸಿ, ಆತನ ಮನೆಯ ಒಂದು ಭಾಗಕ್ಕೆ ಬೆಂಕಿಹಚ್ಚಿದ್ದರು. ಘಟನೆಯ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಲಕ್ಕೆ ಧಾವಿಸುವಷ್ಟರಲ್ಲಿ ಆತನ ಮನೆ ಅರ್ಧ ಭಸ್ಮವಾಗಿತ್ತು. ಇದೀಗ ಉಸ್ಮಾನ್ ಮತ್ತು ಕುಟುಂಬಸ್ಥರನ್ನು ಆಸ್ಪತ್ರೆಗೆ ನ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಕುರಿತು ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.












Click it and Unblock the Notifications