ದಾವೂದ್ ಶರಣಾಗತಿ ತಪ್ಪಿಸಿದ್ದು ಪವಾರ್: ಜೇಠ್ಮಲಾನಿ

ನವದೆಹಲಿ, ಜುಲೈ. 04: ಬಿಜೆಪಿ ಮುಖಂಡ, ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ 90ರ ದಶಕದಲ್ಲೇ ಶರಣಾಗತನಾಗಲು ಬಯಸಿದ್ದ ಅದರೆ, ಶರದ್ ಪವಾರ್ ಅವರು ಅಡ್ಡಗಾಲು ಹಾಕಿದರು ಎಂದಿದ್ದಾರೆ.

"ಭಾರತಕ್ಕೆ ಬರಲು ನಾನು ಸಿದ್ಧನಾಗಿದ್ದೇನೆ. ಆದರೆ, ಅಲ್ಲಿ ನನ್ನ ಜೀವಕ್ಕೆ ಅಪಾಯವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದ. ಅಲ್ಲದೆ, ತಾನು 1993ರ ಮುಂಬೈ ಸರಣಿ ಸ್ಫೋಟದಲ್ಲಿ ನನ್ನ ಪಾತ್ರವಿಲ್ಲ ಎಂದು ದಾವೂದ್ ಹೇಳಿದ್ದ. ಆಗ ನಾನು ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಶರದ್ ಪವಾರ್ ಅವರು ದಾವೂದ್ ಇಬ್ರಾಹಿಂ ಆಫರ್ ತಿರಸ್ಕರಿಸಿದ್ದರು.[ದಾವೂದ್ ಎಲ್ಲಿದ್ದಾನೋ ನಮಗೆ ಗೊತ್ತಿಲ್ಲ: ಮೋದಿ ಸರ್ಕಾರ್]

ಭಾರತಕ್ಕೆ ಮರಳಲು ಸರ್ಕಾರ ಅವಕಾಶ ನೀಡಲಿಲ್ಲ ಎಂಬ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಛೋಟಾ ಶಕೀಲ್ ಹೇಳಿಕೆಯನ್ನು ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಪುಷ್ಟೀಕರಿಸಿದ್ದಾರೆ. 1990ರ ದಶಕದಲ್ಲಿ ನಾನು ದಾವೂದ್ ಜತೆ ಮಾತನಾಡಿದ್ದು ನಿಜ ಮತ್ತು ಭಾರತಕ್ಕೆ ಬಂದು ಇಲ್ಲಿಯೇ ವಿಚಾರಣೆ ಹಾಜರಾಗುವುದಾಗಿ ಒಲವು ತೋರಿದ್ದ.

Underworld don Dawood Ibrahim offered to surrender: Ram Jethmalani

ಅದರೆ, ಆತನನ್ನು ಭೇಟಿಯಾಗಲಿಲ್ಲ. ಲಂಡನ್ ನಲ್ಲಿ ದಾವೂದ್ ನ ಆಪ್ತ ಸಹಚರ ಛೋಟಾ ಶಕೀಲ್ ನನ್ನು ಭೇಟಿಯಾಗಿದ್ದೆ. ವಿಚಾರಣೆ ವೇಳೆ ಇಬ್ಬರನ್ನು ಗೃಹಬಂಧನದಲ್ಲಿರಿಸಲು ಬೇಕಾದ ವ್ಯವಸ್ಥೆ ಕಲ್ಪಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಕೇಳಿಕೊಳ್ಳಲಾಗಿತ್ತು. ಆದರೆ, ಅಂದಿನ ಪವಾರ್ ಸರ್ಕಾರ ಒಪ್ಪಿಕೊಳ್ಳಲಿಲ್ಲ. [ದಾವೂದ್‌ಗೆ ಕೊಟ್ಟಿದ್ದೇಕೆ ವೀಸಾ : ಕಾಂಗ್ರೆಸ್ಸಿಗೆ ನಳೀನ್ ಗೂಸಾ!]

1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ದಾವೂದ್ ಇಬ್ರಾಹಿಂ ದೂರವಾಣಿಯಲ್ಲಿ ಮಾತನಾಡಿದ ಸಂದರ್ಭದಲ್ಲಿ ಹೇಳಿದ್ದರು.

ಒಂದು ವೇಳೆ ಬಂಧನವಾದರೆ ಪೊಲೀಸರು ಹಿಂಸೆ ನೀಡಬಾರದು, ಕೋರ್ಟ್ ವಿಚಾರಣೆಗೆ ಸಿದ್ದ ಎಂದಿದ್ದ. ಆದರೆ, ಯುಪಿಎ ಮತ್ತು ಪವಾರ್ ನೇತೃತ್ವದ ಸರ್ಕಾರ ಸರಿಯಾದ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾದ ಕಾರಣ ದಾವೂದ್ ಶರಣಾಗತಿ ಸಾಧ್ಯವಾಗಲಿಲ್ಲ ಎಂದು ರಾಮ್ ಜೇಠ್ಮಲಾನಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+