ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೇಳಾಪಟ್ಟಿ ನಕಲಿ: ಸಿಬಿಎಸ್‌ಇ ಸ್ಪಷ್ಟನೆ
ನವದೆಹಲಿ, ಅಕ್ಟೋಬರ್ 18: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ನ (ಸಿಬಿಎಸ್‌ಇ) ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಬಿಡುಗಡೆ ಮಾಡಿದ ಬೋರ್ಡ್ ಶೀಟ್ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೇಳಾಪಟ್ಟಿ ನಕಲಿ ಎಂದು ಸಿಬಿಎಸ್‌ಇ ಸ್ಪಷ್ಟನೆ ನೀಡಿದೆ.
ಸಿಬಿಎಸ್‌ಇ ಡೇಟ್‌ಶೀಟ್ ಬಿಡುಗಡೆಗೂ ಮುನ್ನವೇ, ಕೆಲವು ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ಮಾಡುವಂತೆ ಒತ್ತಾಯ ಮಾಡಿದ್ದರು. ಈ ನಡುವೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಬಿಡುಗಡೆ ಮಾಡಿದ ಡೇಟ್‌ಶೀಟ್ ಎಂದು ಹೇಳಿ, ನಕಲಿ ವೇಳಾಪಟ್ಟಿ ಹರಿದಾಡುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ಸಿಬಿಎಸ್‌ಇ, "ನಕಲಿ ಡೇಟ್‌ಶೀಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸಿಬಿಎಸ್‌ಇ ಗಮನಕ್ಕೆ ಬಂದಿದೆ," ಎಂದು ಹೇಳಿದೆ.

"ಮುಂಬರುವ ನವೆಂಬರ್‌ನಲ್ಲಿ ಹತ್ತು ಹಾಗೂ ಹನ್ನೆರಡನೇ ತರಗತಿ ವಿದ್ಯಾರ್ಥಿಗಳಿಗೆ ನಡೆಯಲಿರುವ ಟರ್ಮ್ ಒಂದರ ಪರೀಕ್ಷೆಯ ನಕಲಿ ಡೇಟ್‌ಶೀಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಬೋರ್ಡ್ ಯಾವುದೇ ಡೇಟ್‌ಶೀಟ್ ಅನ್ನು ಬಿಡುಗಡೆ ಮಾಡಿಲ್ಲ ಎಂದು ನಾವು ಈ ಮೂಲಕ ನಿಮಗೆ ಸ್ಪಷ್ಟನೆ ನೀಡಲು ಬಯಸುತ್ತೇವೆ," ಎಂದು ತಿಳಿಸಿದೆ.
ಇನ್ನು ಇಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಬಹುನಿರೀಕ್ಷಿತ 10 ನೇ ತರಗತಿ ಮತ್ತು 12 ನೇ ತರಗತಿಯ ಡೇಟ್‌ಶೀಟ್ ಬಿಡುಗಡೆ ಮಾಡಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ವೇಳಾಪಟ್ಟಿ ವೈರಲ್ ಆಗಿದೆ.
ಇದೇ ಮೊದಲ ಬಾರಿಗೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ನ (ಸಿಬಿಎಸ್‌ಇ) 10 ನೇ ತರಗತಿ ಮತ್ತು 12 ನೇ ತರಗತಿಯ ಪರೀಕ್ಷೆಯು ವರ್ಷದಲ್ಲಿ ಎರಡು ಬಾರಿ ನಡೆಯಲಿದೆ. 10 ನೇ ತರಗತಿ ಮತ್ತು 12 ನೇ ತರಗತಿಯ ಟರ್ಮ್ -1 ಪರೀಕ್ಷೆಯಲ್ಲಿ, 50 ಶೇಕಡಾ ಪಠ್ಯಕ್ರಮದಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ವಿದ್ಯಾರ್ಥಿಗಳು ಈ ಡೇಟ್‌ಶೀಟ್ ಅನ್ನು ವೆಬ್‌ಸೈಟ್ cbse.nic.in ಮೂಲಕ ಡೌನ್‌ಲೋಡ್ ಮಾಡಬಹುದಾಗಿದೆ.
It has come to the notice of CBSE that a fake date sheet is being circulated on social media for the forthcoming term 1 exams in Nov 2021, to confuse students of class X and XII. It is clarified that the board has not released any official notification in this regard till now. pic.twitter.com/Vwv0N3KMaQ
— CBSE HQ (@cbseindia29) October 18, 2021
ಸಿಬಿಎಸ್‌ಇ ಪರೀಕ್ಷಾ ಡೇಟ್‌ಶೀಟ್ ಡೌನ್‌ಲೋಡ್ ಮಾಡುವುದು ಹೇಗೆ?
* ವಿದ್ಯಾರ್ಥಿಗಳು ಅಥವಾ ಪೋಷಕರು ಪರೀಕ್ಷಾ ಡೇಟ್‌ಶೀಟ್ ಡೌನ್‌ಲೋಡ್ ಮಾಡಲು ಮೊದಲು ಅಧಿಕೃತ ವೆಬ್‌ಸೈಟ್ cbse.nic.in ಗೆ ಭೇಟಿ ನೀಡಬೇಕು.
* ವೇಳಾಪಟ್ಟಿ ಬಿಡುಗಡೆ ಆದ ಬಳಿಕ ವೆಬ್‌ಸೈಟ್‌ನಲ್ಲಿ ಕಾಣಸಿಗುವ ಡೇಟ್‌ಶೀಟ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು
* ಬಳಿಕ 10 ನೇ ತರಗತಿ ಅಥವಾ 12 ನೇ ತರಗತಿ ಡೇಟ್‌ಶೀಟ್‌ಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಬೇಕು
* ನಂತರ ಪಿಡಿಎಫ್ ಲಭ್ಯವಾಗಲಿದೆ, ಅದನ್ನು ಡೌನ್‌ಲೋಡ್ ಮಾಡಿಕೊಳ್ಳಿ
(ಒನ್‌ಇಂಡಿಯಾ ಸುದ್ದಿ)












Click it and Unblock the Notifications