Get Updates
Get notified of breaking news, exclusive insights, and must-see stories!

DA Hike: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಪರಿಷ್ಕರಣೆ: ಈ ಬಾರಿ ಎಷ್ಟು ಹೆಚ್ಚಳ? ಡಿಟೇಲ್ಸ್ ಇಲ್ಲಿದೆ

ಬೆಂಗಳೂರು, ಫೆಬ್ರವರಿ 17: ದೇಶದಲ್ಲಿ ನಿರಂತರವಾಗಿ ಹಣದುಬ್ಬರ ಹೆಚ್ಚಾಗುತ್ತಿದೆ. ಬಹುದಿನಗಳಿಂದ ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ನೌಕರರು ತುಟ್ಟಿಭತ್ಯೆ (Dearness Allowance hike)ಗೆ ಬೇಡಿಕೆ ಇಟ್ಟಿದ್ದರು. ಅದಕ್ಕಾಗಿ ಕಾಯುತ್ತಿರುವ ನೌಕರರಿಗೆ ಸಿಹಿ ಸುದ್ದಿಯೋಂದು ಸಿಕ್ಕಿದೆ. ಸರ್ಕಾರ ತುಟ್ಟಿ ಭತ್ಯೆ ಹೆಚ್ಚಿಸಲಿದೆ.

ಪ್ರತಿ ವರ್ಷ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಜನವರಿ ಹಾಗೂ ಜುಲೈನಲ್ಲಿ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಿಸುತ್ತದೆ. ಅದನ್ನು ಮಾರ್ಚ್ ತಿಂಗಳಲ್ಲಿ ಪ್ರಕಟಿಸಲಾಗಿದೆ. ಇದು ಜನವರಿ ತಿಂಗಳಿನಿಂದಲೇ ಅನ್ವಯವಾಗಿ ಮೂಲವೇತನ ಜತೆಗೆ ನೌಕರರಿಗೆ ಸಿಗಲಿದೆ. ಹಾಗಾದ್ರೆ ಕೇಂದ್ರ ಎಷ್ಟು ಪ್ರತಿಶತ ಏರಿಕೆಗೆ ಮುಂದಾಗಿದೆ? ಈ ವರ್ಷ ನೌಕರರ ತುಟ್ಟಿಭತ್ಯ ಎಷ್ಟು ಹೆಚ್ಚು ಸಿಗಲಿದೆ ಎಂಬ ಮಾಹಿತಿ ಇಲ್ಲಿದೆ.

DA Hike: Central Govt Employees-Pensioners will Get 4 Percent Dearness Allowance hike

ಶೇಕಡಾ 4 ರಷ್ಟು ಡಿಎ ಏರಿಕೆ

ಕೇಂದ್ರ ಸರ್ಕಾರವು ನೌಕರರಿಗೆ ತುಟ್ಟಿಭತ್ಯೆ ಯನ್ನು CPI-IW ಆಧಾರದಲ್ಲಿ ಒದಗಿಸುವುದಾಗಿ ಮಾಹಿತಿ ಲಭಿಸಿದೆ. ಕಾರ್ಮಿಕ ಸಚಿವಾಲಯದ ಪ್ರತಿ ಶಾಖೆಯ ಲೇಬರ್ ಬ್ಯೂರೋ ಸಿಪಿಐ-ಐಡಬ್ಲ್ಯೂ ಪ್ರಕಾಶನ ಬಿಡುಗಡೆ ಮಾಡುತ್ತಿದೆ. 7ನೇ ವೇತನ ಆಯೋಗದ ನಿಯಮ ಹಾಗೂ ನಿಬಂಧನೆಗಳ ಪ್ರಕಾರ ವೇತನ ಪಡೆಯುವ ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ತುಟ್ಟಿಭತ್ಯೆ ನೀಡುವ ಸೂತ್ರವು ಅನ್ವಯವಾಗುತ್ತದೆ.

ಕೇಂದ್ರ ಸರ್ಕಾರ ಈ ಭಾರಿ ಶೇಕಡಾ 4ರಷ್ಟು ತುಟ್ಟಿಭತ್ಯೆ (ಡಿಎ) ಏರಿಕೆ ಮಾಡಬಹುದು. ಇದರಿಂದ ನೌಕರರ ವೇತನ ಹೆಚ್ಚಾಗಲಿದೆ. ಎಲ್ಲಾ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಈ ತುಟ್ಟಿಭತ್ಯೆ ವೇತನದ ಒಂದು ಭಾಗವೇ ಆಗಿದೆ. ಇದನ್ನು ಕಾಲ ಕಾಲಕ್ಕೆ ನೀಡುವ ಮೂಲಕ ಹಣದುಬ್ಬರದ ಸಮಸ್ಯೆ ಉಲ್ಬಣವಾಗದಂತೆ ತಡೆಯಲಾಗುತ್ತಿದೆ. ಈ ಸಂಬಂಧ ಆಯಾ ಕಾಲಕ್ಕೆ ಸರ್ಕಾರ ಪರಿಷ್ಕರಣೆ ಮಾಡುತ್ತದೆ.

ಮೂಲವೇತನ-ತುಟ್ಟಿಭತ್ಯೆ ಹೆಚ್ಚಳದ ವಿವರ

ಸರ್ಕಾರಿ ನೌಕರರ ವೇತನ ಎಷ್ಟಿರಲಿದೆ, ತುಟ್ಟಿಭತ್ಯೆ ಎಷ್ಟು ಸಿಗಲಿದೆ ಎಂದು ಉದಾಹರಣೆ ಸಮೇತ ನೋಡುವುದಾದರೆ, ಕೇಂದ್ರ ಸರ್ಕಾರಿ ನೌಕರ ಮಾಸಿಕ 53,500 ರೂಪಾಯಿ ಮೂಲ ವೇತನ ಪಡೆಯುತ್ತಾನೆ. ಶೇಕಡಾ 46ರಷ್ಟು ಆತನ ತುಟ್ಟಿ ಭತ್ಯೆ ಏರಿಕೆ ಆದರೆ 24,610 ರೂಪಾಯಿ ಡಿಎ ಆಗಲಿದೆ. ಆದರೆ ಅದು ಈಗ ಶೇಕಡಾ 50ರಷ್ಟಕ್ಕೆ ಏರಲಿದೆ ಎನ್ನಲಾಗುತ್ತಿದೆ.

DA Hike: Central Govt Employees-Pensioners will Get 4 Percent Dearness Allowance hike

ಅಂದರೆ ಅವರ ತುಟ್ಟಿಭತ್ಯೆ ಈಗ 26,750 ರೂ.ಗೆ ಇದೆ ಎನ್ನಬಹುದು. ಅಂದರೆ ಅವರ ಮಾಸಿಕ ವೇತನವು 26750-24610 = 2140 ರೂಪಾಯಿಗಳು. ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಾಗಿ ಈ ಲೆಕ್ಕಾಚಾರ ಇಟ್ಟು ಮಾಡಲಾಗಿದೆ. ಅಂದರೆ ಅದು ಈ ಭಾರಿಯ ಪರಿಷ್ಕರಣೆ ಆಗಿದೆ. ಈ ಲೆಕ್ಕಾಚಾರವನ್ನು ವಾರ್ಷಿಕವಾಗಿ ಮಾಡಿದರೆ ವಾರ್ಷಿಕ ವೇತನ ಒಬ್ಬ ನೌಕರಿಗೆ 25,680 ರೂಪಾಯಿ ಹೆಚ್ಚಳದ ಹಣ ಸಿಗಲಿದೆ ಎನ್ನಬಹುದು.

ಹಿಂದಿನ ವರ್ಷ ಮಾರ್ಚ್‌ನಲ್ಲಿ ಘೋಷಣೆ

ಈ ಹಿಂದಿನ ವರ್ಷ 2023ರಲ್ಲಿ ಮಾರ್ಚ್ 24 ರಂದು ಕೇಂದ್ರ ನೌಕರರಿಗೆ ಸರ್ಕಾರ ಈ ಉಡುಗೊರೆ ನೀಡಲಾಗಿತ್ತು. ಅಂದರೆ ಆ ದಿನ ತುಟ್ಟಿಭತ್ಯೆ ಹೆಚ್ಚಳ ಕುರಿತು ಅಧಿಕೃತ ಮಾಹಿತಿ ನೀಡಲಾಗಿತ್ತು. ಸಾಮಾನ್ಯವಾಗಿ ಜವನರಿ ಮತ್ತು ಜುಲೈಗೆ ತುಟ್ಟಿಭತ್ಯೆ ಏರಿಕೆ ಆಗಬೇಕು. ಆದರೆ ಮಾರ್ಚ ತಿಂಗಳಲ್ಲಿ ಇದನ್ನು ಘೋಷಿಸಿದರೂ ಸಹಿತ ಅದು ನೌಕರರಿಗೆ ಜನವರಿ ಹೊಸ ವರ್ಷದ ದಿನದಿಂದಲೇ ಅನ್ವಯವಾಗುತ್ತದೆ. ಜನವರಿ ತಿಂಗಳಿನಿಂದಲೇ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ತುಟ್ಟಿಭತ್ಯೆ ಲಾಭ ಸಿಗಲಿದೆ.

ಪ್ರತಿ ವರ್ಷದಂತೆ ಈ ವರ್ಷವು ತುಟ್ಟಿ ಭತ್ಯೆಗೆ ಕಾಯುತ್ತಿದ್ದವರಿಗೆ ನಿರಾಸೆಯಾಗಿಲ್ಲ. ನಿಗದಿಯಂತೆ ಮಾರ್ಚ್‌ಗೆ ಘೋಷಣೆ ಆಗಲಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ಮತ್ತಷ್ಟು ಹುಮ್ಮಸ್ಸು ಸಿಗಲಿದೆ. ಫೆಬ್ರವರಿ 20: ಆದಷ್ಟು ಶೀಘ್ರವೇ ತುಟ್ಟಿಭತ್ಯೆ ಹೆಚ್ಚಳ ಬಗ್ಗೆ ಕೇಂದ್ರ ಸರ್ಕಾರವೇ ಅಧಿಕೃತ ಮಾಹಿತಿ ಹಂಚಿಕೊಳ್ಳಲಿದೆ.

ಸದ್ಯದ ಮಾಹಿತಿ ಪ್ರಕಾರ, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಹೆಚ್ಚಳ ಜತೆಗೆ ಸರ್ಕಾರವು ಮುಂದಿನ ಮಾರ್ಚ್ ನಲ್ಲಿ ಪ್ರಯಾಣ ಭತ್ಯೆ (ಟಿಎ) ಮತ್ತು ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಅನ್ನು ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+