Cyclone Biporjoy Effect: ಕರ್ನಾಟಕ ಸೇರಿ ಮುಂದಿನ 3-4 ದಿನ ಐದು ರಾಜ್ಯಗಳಲ್ಲಿ ಮಳೆ- ಐಎಂಡಿ

ಮುಂಗಾರು ಗುರುವಾರ ಕೇರಳಕ್ಕೆ ಆಗಮಿಸಿದ್ದು, ಮುಂಗಾರು ನಿರೀಕ್ಷೆಗೆ ತೆರೆ ಬಿದ್ದಿದೆ. ಇದು ರೈತರಿಗೆ ಬಿಗ್ ರಿಲೀಫ್ ನೀಡಿದೆ. ಮಂಗಾರು ಏಳು ದಿನ ತಡವಾಗಿ ತಲುಪಿದ್ದರೂ ಸಹ ಇದು ಶೀಘ್ರದಲ್ಲೇ ವೇಗವನ್ನು ಪಡೆಯುತ್ತದೆ ಎಂದು ಹವಾಮಾನಶಾಸ್ತ್ರಜ್ಞರು ಹೇಳಿದ್ದಾರೆ. ಅರಬ್ಬಿ ಸಮುದ್ರದಲ್ಲಿ ಬಿಪೊರ್​ಜೊಯ್​​ ಚಂಡಮಾರುತದ ಆರ್ಭಟ ತೀವ್ರ ಸ್ವರೂಪ ಪಡೆದ ಹಿನ್ನೆಲೆ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದೇಶದ ರಾಜಧಾನಿ ದೆಹಲಿ, ಕರ್ನಾಟಕ ಸೇರಿದಂತೆ ಹಲವೆಡೆ ಇಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇಂದು ಮಳೆಯಾದರೂ ಬಿಸಿಯೂ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ದೆಹಲಿ, ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಿ ಇಂದು ಮಳೆಯಾಗಲಿದೆ. ಅದರೊಂದಿಗೆ ಶಾಖವೂ ಹೆಚ್ಚಾಗುತ್ತದೆ ಮತ್ತು ಮುಂಬರುವ ದಿನಗಳಲ್ಲಿ ತಾಪಮಾನ ಇತ್ತಷ್ಟು ಹೆಚ್ಚಾಗುತ್ತದೆ ಎಂದು ಐಎಂಡಿ ಹೇಳಿದೆ. ಬಿಸಿಗಾಳಿ ಮುಂದುವರಿಯುವ ಸಾಧ್ಯತೆಗಳು ಸದ್ಯಕ್ಕೆ ಕಡಿಮೆ ಇದೆ. ಇಂದು ದೆಹಲಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಇರುತ್ತದೆ.

Cyclone Biporjoy Effect

ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಚಂಡಮಾರುತವಾಗಿ ಬದಲಾಗಿತ್ತು. ಇದರಿಂದಾಗಿ ಇಂದು ದೆಹಲಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಎಂದು ನಿರೀಕ್ಷಿಸಲಾಗಿದೆ. ಅಂದಹಾಗೆ ಸತತ ಮಳೆಯಿಂದಾಗಿ ದೆಹಲಿಯ ವಾತಾವರಣ ಸುಧಾರಿಸಿದೆ.

ಇನ್ನೂ ಕರ್ನಾಟಕದ ದಕ್ಷಿಣ ಒಳನಾಡು, ಕೇರಳ, ಲಕ್ಷದೀಪ ಸಮೂಹಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಉತ್ತರ ಒಳನಾಡು, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಲಘು ಮಳೆಯಾಗಲಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮಿಜೋರಾಂ, ಮೇಘಾಲಯ, ರಾಜಸ್ಥಾನ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಿಪೊರ್​ಜೊಯ್​​ ಚಂಡಮಾರುತ ಮುಂದಿನ 48 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ. ಈ ಹಿನ್ನೆಲೆ ಮುಂದಿನ 3-4 ದಿನಗಳಲ್ಲಿ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಂಭವ ಇದೆ.

ಮುಂದಿನ 48 ಗಂಟೆಗಳಲ್ಲಿ ಕೇರಳದಲ್ಲಿ ಭಾರಿ ಮಳೆಯಾಗುವದ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ. ನೈಸರ್ಗಿಕ ವಿಕೋಪಗಳ ಸಾಧ್ಯತೆಯನ್ನು ಎದುರಿಸಲು ಸಂಪೂರ್ಣ ಸನ್ನದ್ಧವಾಗಿದೆ ಎಂದು ಗುಜರಾತ್ ಸರ್ಕಾರ ಹೇಳಿದೆ. ಜೂನ್ 14 ರವರೆಗೆ ಅರಬ್ಬಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

Cyclone Biporjoy Effect

ಹಿಂದೂ ಮಹಾಸಾಗರದಲ್ಲಿ ಮೂರು ವಾರಗಳಲ್ಲಿ ಇದು ಎರಡನೇ ಚಂಡಮಾರುತವಾಗಿದೆ. ಬಂಗಾಳಕೊಲ್ಲಿಯಲ್ಲಿ ರೂಪುಗೊಂಡ ಮೋಚಾ ಚಂಡಮಾರುತವು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗೆ ನುಗ್ಗಿ ಭಾರಿ ವಿನಾಶಕ್ಕೆ ಕಾರಣವಾಗಿತ್ತು. 2021 ರಲ್ಲಿ ಮಾನ್ಸೂನ್ ಆರಂಭದ ಸಮಯದಲ್ಲಿ ಯಾಸ್ ಚಂಡಮಾರುತವು ಕೂಡ ಇದೇ ರೀತಿ ರೂಪುಗೊಂಡಿತ್ತು.

ಇಂದು ಇಲ್ಲಿಯೂ ಮಳೆ

ಮತ್ತೊಂದೆಡೆ ಯುಪಿ, ಎಂಪಿ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಇಂದು ಶುಷ್ಕ ವಾತಾವರಣವಿದ್ದು, ಇಲ್ಲಿಯೂ ಪಾದರಸ ನಲವತ್ತು ಡಿಗ್ರಿ ದಾಟಬಹುದು. ಮತ್ತೊಂದೆಡೆ, ಜೂನ್ 10 ರ ನಡುವೆ ಬಿಹಾರದಲ್ಲಿ ಬಿಸಿಗಾಳಿಯ ಸ್ಥಿತಿ ಚಾಲ್ತಿಯಲ್ಲಿ ಇರಲಿದೆ.

ಭಾರೀ ಮಳೆಯ ಎಚ್ಚರಿಕೆ

ಮಾನ್ಸೂನ್ ಮತ್ತು ಬೈಪರ್‌ಜಾಯ್ ಚಂಡಮಾರುತದಿಂದಾಗಿ ಇಂದು ಮಣಿಪುರ, ಮಿಜೋರಾಂ, ತ್ರಿಪುರಾ, ಕೇರಳ ಮತ್ತು ಮಾಹೆ, ಲಕ್ಷದ್ವೀಪ, ಅಂಡಮಾನ್-ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಗುಜರಾತ್, ಕೊಂಕಣ ಮತ್ತು ಗೋವಾದಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಇಂದು ಹಲವೆಡೆ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಗಳಿದ್ದು, ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+