Cyclone Biparjoy: 'ಬಿಪರ್‌ಜಾಯ್'ಚಂಡಮಾರುತ: ಜೂನ್ 18 ರವರೆಗೆ ಗುಜರಾತ್‌ನಲ್ಲಿ 99 ರೈಲುಗಳನ್ನು ರದ್ದು

ಗುಜರಾತ್‌, ಜೂನ್‌ 16: ಬಿಪರ್‌ಜಾಯ್‌ ಚಂಡಮಾರುತವು ರೈಲು ಸೇವೆಯ ಮೇಲೆ ಪರಿಣಾಮ ಬೀರಿದ್ದು, ಸುಮಾರು 99 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ.

ತೀವ್ರ ಚಂಡಮಾರುತ ಗುರುವಾರ ಸಂಜೆ ಗುಜರಾತ್‌ನ ಕಚ್ ಕರಾವಳಿಗೆ ಅಪ್ಪಳಿಸಿತು. 23 ರೈಲುಗಳನ್ನು ರದ್ದುಗೊಳಿಸಿದೆ ಎಂದು ಪಶ್ಚಿಮ ರೈಲ್ವೆ ಹೇಳಿದೆ. ಬಿಪರ್‌ಜಾಯ್' ಅಬ್ಬರಕ್ಕೆ ಗುಜರಾತ್ ತತ್ತರಿಸಿ ಹೋಗಿರುವ ನಡುವೆ ರೇಲ್ವೇ ಇಲಾಖೆ ಕೂಡ ಶಾಕ್ ಕೊಟ್ಟಿದೆ. ಭೀಕರವಾಗಿ ಬೀಸುತ್ತಿರುವ ಗಾಳಿಗೆ ಅರಬ್ಬಿ ಸಮುದ್ರದ ಕರಾವಳಿ ಪ್ರದೇಶದ ರಾಜ್ಯಗಳು ತತ್ತರಿಸಿ ಹೋಗಿವೆ. ಈ ವೇಳೆ ದಿಢೀರ್ ರೈಲು ಓಡಾಟ ರದ್ದು ಮಾಡಿರುವುದು ಪ್ರಯಾಣಿಕರಿಗೆ ಶಾಕ್ ಕೊಟ್ಟಿದೆ.

Cyclone Biparjoy Landfall

ಬಿಪರ್‌ಜಾಯ್ ಚಂಡಮಾರುತದಿಂದ ಕಟ್ಟೆಚ್ಚರ ವಹಿಸಲಾಗಿದೆ. ಹೀಗಾಗಿ ಪಶ್ಚಿಮ ರೈಲ್ವೆ ಒಟ್ಟು 99 ರೈಲುಗಳ ಸಂಚಾರವನ್ನು ರದ್ದು ಮಾಡಿದೆ. ಹಾಗೇ 33 ರೈಲುಗಳ ಸಂಚಾರದ ಮಾರ್ಗ ಮೊಟಕುಗೊಂಡಿದೆ. ಸೈಕ್ಲೋನ್ ಅಬ್ಬರ ಹೆಚ್ಚಾಗಿರುವಾಗ ಕೆಲ ರೈಲುಗಳ ಓಡಾಟ ಕ್ಯಾನ್ಸಲ್ ಮಾಡಿ ಮುನ್ನೆಚ್ಚರಿಕೆ ಕೈಗೊಳ್ಳಬೇಕಿತ್ತು. ಹೀಗಾಗಿ 69 ರೈಲುಗಳ ಸಂಚಾರವನ್ನ ಪಶ್ಚಿಮ ರೈಲ್ವೆಯು ರದ್ದು ಮಾಡಿದೆ.

23 ರೈಲುಗಳನ್ನು ರದ್ದುಗೊಳಿಸಲಾಗಿದೆ, 3 ರೈಲುಗಳನ್ನು ಅಲ್ಪಾವಧಿಗೆ ಕೊನೆಗೊಳಿಸಲಾಗಿದೆ. ಇದರೊಂದಿಗೆ, 99 ರೈಲುಗಳನ್ನು ರದ್ದುಗೊಳಿಸಲಾಗಿದೆ, 39 ರೈಲುಗಳನ್ನು ಅಲ್ಪಾವಧಿಗೆ ಕೊನೆಗೊಳಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ರೈಲು ಕಾರ್ಯಾಚರಣೆಯ ದೃಷ್ಟಿಯಿಂದ ಜೂನ್ 18 ರವರೆಗೆ ಮುನ್ನೆಚ್ಚರಿಕೆ ಕ್ರಮವಾಗಿ 38 ರೈಲುಗಳನ್ನು ಕಡಿಮೆ ಮಾಡಲಾಗಿದೆ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ.

ಬಿಪರ್‌ಜಾಯ್ ಚಂಡಮಾರುತ ಗಂಟೆಗೆ 115 ರಿಂದ 125 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತದೆ ಮತ್ತು ಗಂಟೆಗೆ 140 ಕಿ.ಮೀ ವೇಗದಲ್ಲಿ ಬೀಸಬಹುದು ಎಂದು ಹವಾಮಾನ ಇಲಾಖೆ ನಿರ್ದೇಶಕಿ ಮನೋರಮಾ ಮೊಹಂತಿ ತಿಳಿಸಿದ್ದಾರೆ. ಪ್ರಸ್ತುತ, ಗಾಳಿಯ ವೇಗ ಗಂಟೆಗೆ 115 ರಿಂದ 125 ರ ನಡುವೆ ಇದೆ, ಇದು ಗಂಟೆಗೆ 140 ಕಿಮೀ ವರೆಗೆ ಹೋಗಬಹುದು. ಮಧ್ಯರಾತ್ರಿಯ ವೇಳೆಗೆ ಗಾಳಿಯ ವೇಗ ಕಡಿಮೆಯಾಗಬಹುದು" ಎಂದು MET ನಿರ್ದೇಶಕರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+