• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
LIVE

Cyclone Amphan Live Updates : ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ಮೋದಿ ಭೇಟಿ

|

ನವದೆಹಲಿ, ಮೇ.22: ಅಂಫಾನ್ ಚಂಡ ಮಾರುತವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪಶ್ಚಿಮ ಬಂಗಾಳ ಹಾಗೂ ಒಡಿಶಾಗೆ ಮಳೆಯ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಅಂಫಾನ್ ಚಂಡ ಮಾರುತವು ಪಶ್ಚಿಮ ಬಂಗಾಳ ಕಡೆಗೆ ಚಲಿಸುತ್ತಿದ್ದು ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಎಚ್ಚರಿಕೆ ನೀಡಿದೆ.

   Cyclone Kyarr : Red alert sounded for Karnataka coast | Oneindia Kannada

   ಅಂಫಾನ್ ಚಂಡಮಾರುತ ಭೀತಿಯಲ್ಲಿ ಕರಾವಳಿ ಪ್ರದೇಶದ ಜನ ಶಿಫ್ಟ್!

   ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಮೇ 20ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಒಟ್ಟು ಆರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

   Cyclone Amphan Live Updates News Forecast And Tracker In Kannada

   ಅಸ್ಸಾಂ ಹಾಗೂ ಮೇಘಾಲಯದಲ್ಲಿ ಮೇ 21 ರಂದು ಧಾರಾಕಾರ ಮಳೆ ಸುರಿಯಲಿದೆ. ಒಡಿಶಾದ ಕೇಂದ್ರಪರ, ಭದ್ರಕ್, ಜಾಜ್‌ಪುರ, ಮಯ್ಯೂರ್ ಭಂಜ್, ಪುರಿ ಸೇರಿ ಹಲವು ಕಡೆಗಳಲ್ಲಿ ಮಂಗಳವಾರ ಮಳೆಯಾಗಲಿದೆ.

   Newest First Oldest First
   1:03 PM, 22 May
   ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಮಮತಾ ಬ್ಯಾನರ್ಜಿ ಅಂಫಾನ್ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.
   12:49 PM, 22 May
   ''ನನ್ನ ಜೀವನದಲ್ಲೇ ಅಂಫಾನ್ ನಂತಹ ಚಂಡಮಾರುತವನ್ನು ನಾನು ನೋಡಿಲ್ಲ. ನನಗೆ ಆಘಾತವಾಗಿದೆ. ಯಾರೊಂದಿಗೂ ಕರೆ ಮಾಡಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಅಂಫಾನ್ ಚಂಡಮಾರುತ ಪೀಡಿತ ಪ್ರದೇಶಗಳಿಗೆ ಭೇಟಿ ಮಾಡಿ, ಪರಿಶೀಲನೆ ನಡೆಸುತ್ತೇವೆ'' ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
   12:43 PM, 22 May
   ಅಂಫಾನ್ ಚಂಡಮಾರುತದಿಂದಾಗಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
   11:46 AM, 22 May
   ಅಂಫಾನ್ ಚಂಡಮಾರುತದಿಂದ ಇಲ್ಲಿಯವರೆಗೂ 80 ಮಂದಿ ಮೃತಪಟ್ಟಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಹಿತಿ ನೀಡಿದ್ದಾರೆ.
   11:36 AM, 22 May
   ಪ್ರಧಾನಿ ಮೋದಿಯ ವೈಮಾನಿಕ ಸಮೀಕ್ಷೆಯಲ್ಲಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಬಾಬುಲ್ ಸುಪ್ರಿಯೋ, ಪ್ರತಾಪ್ ಚಂದ್ರ ಸಾರಂಗಿ, ದೇಬಶ್ರೀ ಚೌಧರಿ ಕೂಡ ಸಾಥ್ ಕೊಡಲಿದ್ದಾರೆ.
   11:29 AM, 22 May
   ಕೋಲ್ಕತಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬರಮಾಡಿಕೊಂಡರು. ಚಂಡಮಾರುತ ಅಂಫಾನ್ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಪ್ರಧಾನಿ ಮೋದಿ ನಡೆಸಲಿದ್ದಾರೆ.
   8:15 AM, 22 May
   ಅಂಪಾನ್ ಚಂಡಮಾರುತದಿಂದ ಪಶ್ಚಿಮ ಬಂಗಾಳದಲ್ಲಿ 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ನಷ್ಟ ಆಗಿರುವ ಬಗ್ಗೆ ಅಂದಾಜಿಸಲಾಗಿದೆ.
   7:46 AM, 22 May
   83 ದಿನಗಳ ನಂತರ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳದಲ್ಲಿ ಪರಿಸ್ಖಿತಿ ಅವಲೋಕನ ನಡೆಸಲಿದ್ದಾರೆ.
   7:45 AM, 22 May
   ಅಂಫಾನ್ ಚಂಡಮಾರುತಕ್ಕೆ ಸಿಕ್ಕು ನಲುಗಿರುವ ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
   4:25 PM, 21 May
   ಅಂಫಾನ್ ಚಂಡಮಾರುತಕ್ಕೆ ಪಶ್ಚಿಮ ಬಂಗಾಳದಲ್ಲಿ 72 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ 17 ಮಂದಿ ಕೊಲ್ಕತ್ತದವರು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಜೊತೆಗೆ ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
   1:48 PM, 21 May
   ಅಂಫಾನ್ ಚಂಡಮಾರುತವು ಬುಧವಾರ ರಾತ್ರಿಯೇ ಬಾಂಗ್ಲಾದೇಶದ ಕರಾವಳಿಯನ್ನು ಪ್ರವೇಶಿಸಿತ್ತು. ಆರು ಮಂದಿ ಮೃತಪಟ್ಟಿದ್ದರು, ಸಾವಿರಾರು ಮನೆಗಳು ಜಲಾವೃತವಾಗಿದ್ದವು. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
   11:11 AM, 21 May
   ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತಕ್ಕೆ 12 ಮಂದಿ ಬಲಿಯಾಗಿದ್ದಾರೆ.ಇದೀಗ ಮೇಘಾಲಯ ಅಸ್ಸಾಂ ಕಡೆಗೆ ಚಂಡಮಾರುತ ಗಾಳಿ ವೇಗವಾಗಿ ಬೀಸುತ್ತಿದೆ. ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರದಲ್ಲಿ ಭಾರಿ ಮಳೆಯಾಗಲಿದೆ. ಕೊಲ್ಕತ್ತ ವಿಮಾನ ನಿಲ್ದಾಣ ನೀರಿನಿಂದ ತುಂಬಿ ಹೋಗಿದೆ.
   8:55 AM, 21 May
   ಕೋಲ್ಕತ್ತಾದ ಏರ್ ಪೋರ್ಟ್ ರಸ್ತೆಯಲ್ಲಿ ಧರೆಗುರುಳಿದ ಮರಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ತೆರವುಗೊಳಿಸಿದರು.
   8:54 AM, 21 May
   ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಅಂಫಾನ್ ಚಂಡಮಾರುತದಿಂದ ಭಾರಿ ಮಳೆಯಾಗಿದ್ದು ಮರಗಳೆಲ್ಲ ಧರೆಗುರುಳಿವೆ.
   8:53 AM, 21 May
   ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶದಿಂದ ಬಾಂಗ್ಲಾದೇಶದತ್ತ ಬೀಸಿದ ಚಂಡಮಾರುತದ ವೇಗ ಮೊದಲಿಗಿಂತ ಕಡಿಮೆಯಾಗಿದೆ. 30 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಮುಂದಿನ ಆರು ಗಂಟೆಗಳಲ್ಲಿ ವಾಯುವ್ಯ ಭಾಗದಲ್ಲಿ ಚಂಡಮಾರುತ ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
   11:34 PM, 20 May
   ಅಂಫಾನ್ ಚಂಡಮಾರುತದ ಭಯಾನಕ ನೋಟ
   11:10 PM, 20 May
   ಅಂಪೆನ್‌ನಿಂದ ಹಾನಿಯ ಬಗ್ಗೆ ಲೆಕ್ಕ ಹಾಕು ಕನಿಷ್ಠ ಒಂದು ವಾರ ಬೇಕು. ಈಗಾಗಲೇ ಕೋವಿಡ್ 19 ನಿಂದ ನಮಗೆ ತೀವ್ರ ತೊಂದರೆಯಾಗಿತ್ತು. ಈಗ ಮತ್ತೆ ಚಂಡಮಾರುತ ಮಾಡಿರುವ ಹಾನಿ ಕೋವಿಡ್ 19 ಗಿಂತ ಹತ್ತು ಪಟ್ಟು ದೊಡ್ಡದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಕಲ್ಕತ್ತಾದಲ್ಲಿ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
   10:47 PM, 20 May
   ಕೊಲ್ಕತ್ತದ ಹೌರಾ ಬ್ರಿಡ್ಜ್ ಬಳಿ ಅಂಪೇನ್ ಚಂಡಮಾರುತದ ಪ್ರಭಾವ
   10:40 PM, 20 May
   ಆಂಪೆನ್ ಚಂಡಮಾರುತ ಕಲ್ಕತ್ತಾದಲ್ಲಿ ಅಟ್ಟಹಾಸ ಮೆರೆಯುತ್ತಿದೆ, ವಿದ್ಯುತ್ ಟ್ರಾನ್ಸಪಾರ್ಮರ್ ಗೆ ಬೆಂಕಿ ತಗುಲಿರುವ ನೋಟ
   9:52 PM, 20 May
   ಆಂಫಾನ್ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳದಲ್ಲಿ 10-12 ಜನರು ಸಾವನ್ನಪ್ಪಿದ್ದಾರೆ ಎಂದು ಸಿಎಂ ಮಮತಾ ಬ್ಯಾನರ್ಜಿ ಮಾಹಿತಿ ನೀಡಿದ್ದಾರೆ
   9:48 PM, 20 May
   ಪಶ್ಚಿಮ ಬಂಗಾಳದಲ್ಲಿ ಅಂಪೇನ್ ಚಂಡಮಾರುತಕ್ಕೆ ಸಂಭವಿಸಿದ ಭೂಕುಸಿತಕ್ಕೆ ಇಬ್ಬರು ಬಲಿಯಾಗಿದ್ದಾರೆ
   8:58 PM, 20 May
   ಅಂಪೆನ್ ಚಂಡಮಾರುತದ ಹಿನ್ನೆಲೆಯಲ್ಲಿ ಕೊಲ್ಕತ್ತದ ವಿಕ್ಟೋರಿಯ ಮೆಮೋರಿಯಲ್ ಕಟ್ಟಡ ಕಂಡು ಬಂದಿರುವುದು ಹೀಗೆ
   8:38 PM, 20 May
   ಬಂಗಾಳದಲ್ಲಿ ಅಂಪಾನ್ ಚಂಡಮಾರುತದ ಹಾವಳಿಗೆ ಅಲ್ಲಲ್ಲಿ ಭೂಕುಸಿತ ಉಂಟಾಗುತ್ತಿದೆ
   8:17 PM, 20 May
   ಆಂಪೆನ್ ಚಂಡಮಾರುತಕ್ಕೆ ಸಿಲುಕಿ ಪಶ್ಚಿಮ ಬಂಗಾಳದಲ್ಲಿ ಇಬ್ಬರು ಮೃತಪಟ್ಟಿದ್ದಾರೆ
   8:17 PM, 20 May
   ಅಂಪೆನ್ ಚಂಡಮಾರುತ ನಾಳೆಯವರೆಗೂ ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಹಾವಳಿ ನಡೆಸಲಿದೆ, ಮಳೆ ಇರಲಿದೆ ಎಂದು ವರದಿಗಳು ಹೇಳಿವೆ
   7:44 PM, 20 May
   ಅಂಪಾನ್ ಚಂಡಮಾರುತ ರಕ್ಷಣಾ ಕಾರ್ಯಕ್ಕೆ ಸಿದ್ದವಾಗಿರುವ ದಿದಿ
   7:38 PM, 20 May
   ಅಂಪಾನ್ ಚಂಡಮಾರುತದ ರೌದ್ರನರ್ತನದ ಡಿಜಿಟಲ್ ನೋಟ
   7:26 PM, 20 May
   ಅಂಪಾನ್ ಚಂಡಮಾರುತದ ರೌದ್ರನರ್ತನದ ಡಿಜಿಟಲ್ ನೋಟ
   7:08 PM, 20 May
   ಅಂಪಾನ್ ಚಂಡಮಾರುತ ಬರುತ್ತಿರುವುದು ಹಾಲಿವುಡ್ ಸೂಪರ್ ಹಿರೋ ಥೋರ್ ಬರುತ್ತಿರುವ ಹಾಗಿದೆ ಎಂದು ಟ್ವಿಟ್ಟಿಗರೊಬ್ಬರು ಟ್ವಿಟ್ ಮಾಡಿದ್ದಾರೆ
   6:35 PM, 20 May
   ಇಂದು ಸಂಜೆ 7 ಕ್ಕೆ ಅಂಪಾನ್ ಚಂಡಮಾರುತ ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾ ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ
   READ MORE

   English summary
   Amphan Cyclone Live Updates in Kannada: Here are the latest updates, news, photos and videos on super cyclone wind speed, affected areas, forecast and current situation.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X