ಏ‍ಷ್ಯಾ ಮಾರ್ಕೆಟ್‌ನಲ್ಲಿ ಬ್ಯಾರಲ್ ಕಚ್ಚಾ ತೈಲಕ್ಕೆ 39 ಡಾಲರ್!

ನವದೆಹಲಿ, ಆಗಸ್ಟ್.27: ಭಾರತ ಮತ್ತು ಚೀನಾ ಷೇರು ಮಾರುಕಟ್ಟೆಯಲ್ಲಿ ಉಂಟಾದ ತಲ್ಲಣಗಳ ನಂತರ ಈಗ ತೈಲ ಬೆಲೆಯೂ ಕುಸಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ತೈಲ ದರ ಗಣನೀಯ ಇಳಿಕೆಯಾಗಿದೆ.

ಏಷ್ಯಾ ಮಾರುಕಟ್ಟೆಯಲ್ಲಿ ಕಚ್ಚಾ ತೈಲ 6 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಬುಧವಾರದ ವಹಿವಾಟಿನಲ್ಲಿ ಬ್ಯಾರೆಲ್‌ ಕಚ್ಚಾತೈಲದ 13 ಸೆಂಟ್‌ ಗಳಷ್ಟು ಕಡಿಮೆಯಾಗಿದೆ.[ಜೀವನದಲ್ಲಿ ನಾವು ಎಷ್ಟು ಸೈಕಲ್ ಹೊಡೆದರೂ ಸಾಲದು!]

india

ಅಮೆರಿಕ ಬೆಂಚ್‌ಮಾರ್ಕ್‌ ವೆಸ್ಟ್‌ ಟೆಕ್ಸಾಸ್ ಇಂಟರ್‌ಮಿಡಿಯೇಟ್ (ಡಬ್ಲ್ಯುಟಿಐ) ದರ್ಜೆ ಕಚ್ಚಾತೈಲ ಬ್ಯಾರೆಲ್‌ಗೆ 39.18 ಡಾಲರ್‌ಗೆ ಇಳಿಯಿತು. 2009ರ ನಂತರ ದಾಖಲಾಗಿರುವ ಕಚ್ಚಾತೈಲದ ಅತಿ ಕನಿಷ್ಠ ಧಾರಣೆ ಇದಾಗಿದ್ದು ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಇಳಿಕೆಯಾಗದರೆ ಆಶ್ಚರ್ಯವಿಲ್ಲ.

ಅಂತಾರಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಿಂದ ಕೇಂದ್ರಕ್ಕೆ 3,716 ಕೋಟಿ ರೂ. ಉಳಿತಾಯವಾಗಿದೆ ಎಂದು ಇಂಡಿಯಾ ರೇಟಿಂಗ್ ಮತ್ತು ಸಂಶೋಧನಾ ವರದಿ ತಿಳಿಸಿದೆ. ಹೆಚ್ಚುವರಿ ಸಂಪನ್ಮೂಲ ಹೊಂದಿಸಿಕೊಳ್ಳಲು ಇದು ನೆರವಾಗಲಿದೆ.

ಚೀನಾ ಅರ್ಥ ವ್ಯವಸ್ಥೆಯ ಮಂದಗತಿ, ಇರಾನ್ ಪರಮಾಣು ಒಪ್ಪಂದ, ಅಮೆರಿಕ ಡಾಲರ್ ಬಲವರ್ಧನೆ ಕಚ್ಚಾತೈಲ ಬೆಲೆ ಇಳಿಕೆಗೆ ಕಾರಣವಾಗಿದೆ. ಈ ಪ್ರಮಾಣದ ಉಳಿತಾಯವನ್ನು ಕೇಂದ್ರ ಸರ್ಕಾರ ಜನರಿಗೆ ಯಾವ ರೀತಿ ನೀಡುತ್ತದೆ ಎಂಬುದನ್ನು ನೋಡಬೇಕಿದೆ.

ಇಳಿಕೆ ಹಾದಿ ಹಿಡಿದ ಚಿನ್ನ
ಏರಿಕೆಯ ದಾರಿಯಲ್ಲಿದ್ದ ಚಿನ್ನ 10 ಗ್ರಾಂಗೆ 410 ರೂ. ಇಳಿಕೆಯಾಗಿದೆ. ಮುಂಬೈನಲ್ಲಿ 10 ಗ್ರಾಂ ಸ್ಟಾಂಡರ್ಡ್ ಗೋಲ್ಡ್ ಬೆಲೆ 26,800 ಆಗಿದ್ದು, 10 ಗ್ರಾಂ ಶುದ್ಧ ಚಿನ್ನದ ದರ 26,950 ರೂ. ಇದ್ದರೆ. ಬೆಳ್ಳಿ ಕೆಜಿಗೆ 570 ರೂ. ಇಳಿಕೆಯಾಗಿದ್ದು, 35,830 ರೂ. ಆಗಿದೆ.

ನಿಮ್ಮ ನಗರದ ಇಂದಿನ ಚಿನ್ನದ ದರ ನೋಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+