ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈನಿಕರು ಪಬ್‌-ಜಿ ಆಡುವಂತಿಲ್ಲ: ಸಿಆರ್‌ಪಿಎಫ್‌ ಆದೇಶ

|
Google Oneindia Kannada News

ನವದೆಹಲಿ, ಮೇ 14: ಭಾರಿ ಜನಪ್ರಿಯತೆ ಗಳಿಸಿರುವ ಮೊಬೈಲ್ ಗೇಮ್ ಪಬ್‌-ಜಿಯನ್ನು ಯೋಧರು ಆಡುವಂತಿಲ್ಲವೆಂದು ಸಿಆರ್‌ಪಿಎಫ್ ಆದೇಶ ಹೊರಡಿಸಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಮಿಲಿಟರಿ ಆಪರೇಷನ್‌ ಮಾದರಿಯ ಗೇಮ್ ಇದಾಗಿದ್ದು, ಇದನ್ನು ಆಡುವುದರಿಂದ ಸೈನಿಕರಿಗೆ ಕಲಿಸಲಾಗಿರುವ ಸಮರಕಲೆಗಳ ಮೇಲೆ ಈ ಗೇಮ್ ವ್ಯತಿರಿಕ್ತ ಪರಿಣಾಮ ಬೀರುತ್ತದೆ, ಸೈನಿಕರ ಸಮರಕಲೆ ನಶಿಸುತ್ತದೆ ಎಂಬ ಕಾರಣಕ್ಕೆ ಈ ಆದೇಶವನ್ನು ಹೊರಡಿಸಲಾಗಿದೆ.

ಪಬ್‌ಜಿ ಆಡುವುದು ಹೇಗೆ, ಇದಕ್ಕೆ ಉತ್ತರ ಪಿಯು ಉತ್ತರ ಪತ್ರಿಕೆಯಲ್ಲಿತ್ತು ಪಬ್‌ಜಿ ಆಡುವುದು ಹೇಗೆ, ಇದಕ್ಕೆ ಉತ್ತರ ಪಿಯು ಉತ್ತರ ಪತ್ರಿಕೆಯಲ್ಲಿತ್ತು

ಪಬ್‌-ಜಿ ಮಿಲಿಟರಿ ಆಪರೇಷನ್ ರೀತಿಯ ಗೇಮ್ ಆಗಿದ್ದು, ಆಟಗಾರನು ವೈರಿಗಳನ್ನು ಹೊಡೆದುರುಳಿ ಮುಂದಿನ ಹಂತಕ್ಕೆ ಹೋಗುತ್ತಾನೆ. ಇದೊಂದು ಕೊನೆ ಇಲ್ಲದ ಗೇಮ್ ಆಗಿದ್ದು, ಯುವಕರಿಗೆ ಗೀಳು ಹತ್ತಿಸಿದೆ.

CRPF ban troops playing mobile game PUBG

ಪಬ್‌ಜಿ ಆಡುತ್ತಿರುವುದರಿಂದ ಸೈನಿಕರು , ತಮ್ಮ ಸಹೋದ್ಯೋಗಿಗಳ ಜೊತೆ ಹೆಚ್ಚು ಬೆರೆಯುತ್ತಿಲ್ಲ, ನಿದ್ದೆಗೆಟ್ಟು ರಾತ್ರಿ ಸಮಯ ಸಹ ಪಬ್‌ಜಿ ಆಡುತ್ತಿರುವ ಕಾರಣ ಅವರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ಸಿಆರ್‌ಪಿಎಫ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಬ್‌ಜಿ ಆಡುವುದರಿಂದ ಸೈನಿಕರ ಮಾನಸಿಕ ಸ್ಥಿಮತೆ ತಪ್ಪುವ ಸಾಧ್ಯತೆಯೂ ಇದೆ, ಸೈನಿಕರು ಹೆಚ್ಚು ಆಕ್ರಮಣಶೀಲರಾಗುತ್ತಾರೆ, ಸಂಯಮ ಕಳೆದುಕೊಳ್ಳುತ್ತಾರೆ, ಗೇಮ್‌ನ ಮಾದರಿಯಲ್ಲಿಯೇ ಯೋಚನೆ ಮಾಡಲು ಯತ್ನಿಸುತ್ತಾರೆ ಎಂಬ ಆತಂಕವೂ ಇರುವ ಕಾರಣ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಆನ್ ಲೈನ್ ಗೇಮ್ ಚಟಕ್ಕೆ ಪಾಲಕರನ್ನೇ ಕೊಂದ ಮಗ! ಆನ್ ಲೈನ್ ಗೇಮ್ ಚಟಕ್ಕೆ ಪಾಲಕರನ್ನೇ ಕೊಂದ ಮಗ!

ಸಿಆರ್‌ಪಿಎಫ್‌ನ ಎಲ್ಲಾ ಡಿಐಜಿಗಳು ತಮ್ಮ ಅಧೀನ ಸೈನಿಕ ಗುಂಪುಗಳಿಗೆ ಈ ಆದೇಶ ಹೊರಡಿಸುವಂತೆ ಹೇಳಲಾಗಿದ್ದು, ಕಂಪೆನಿ ಕಮಾಂಡ್‌ಗಳು ಎಲ್ಲಾ ಸೈನಿಕರ ಮೊಬೈಲ್‌ಗಳಲ್ಲಿ ಪಬ್‌-ಜಿ ಸೇರಿದಂತೆ ಅದೇ ಮಾದರಿಯ ಗೇಮ್‌ಗಳನ್ನು ಡಿಲಿಟ್ ಮಾಡಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಆದೇಶಿಸಲಾಗಿದೆ.

ಪಬ್‌-ಜಿ ಗೇಮ್‌ ಭಾರಿ ಗೀಳು ಹತ್ತಿಸುವ ಮೊಬೈಲ್ ಗೇಮ್‌ ಆಗಿದ್ದು, ಈ ಗೇಮ್ ಆಡುವುದನ್ನು ತಡೆದ್ದಿದ್ದರಿಂದ 19 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜಾಮಾಬಾದ್‌ನಿಂದ ಇತ್ತೀಚೆಗಷ್ಟೆ ವರದಿ ಆಗಿತ್ತು.

English summary
CRPF ban its soldiers palaying mobile game PUBG. A officers said it may affect on soldiers combat skills. playing PUBG affecting on soldiers social activity and their health also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X