ಅಡ್ಡ ಮತದಾನದಿಂದ ಕೋವಿಂದ್ ಗೆ ದೊಡ್ಡ ಗೆಲುವು: ಬಿಜೆಪಿ
ವಿರೋಧ ಪಕ್ಷಗಳ ಅಡ್ಡ ಮತದಾನದಿಂದಲೇ ರಾಷ್ಟ್ರಪತಿ ಚುನಾವಣೆಯಲ್ಲಿ ರಾಮ್ ನಾಥ್ ಕೋವಿಂದ್ ಅವರಿಗೆ ಭರ್ಜರಿ ಜಯ ಎಂದ ಬಿಜೆಪಿ. ಜುಲೈ 17ರಂದು ನಡೆದಿದ್ದ ರಾಷ್ಟ್ರಪತಿ ಚುನಾವಣೆಯ ಮತದಾನ.
ನವದೆಹಲಿ, ಜುಲೈ 21: ಇದೇ ತಿಂಗಳ 17ರಂದು ನಡೆದಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ಕೆಲ ವಿರೋಧ ಪಕ್ಷಗಳ ಶಾಸಕರು ಚಲಾಯಿಸಿದ ಅಡ್ಡ ಮತದಾನದಿಂದಾಗಿ ಬಿಜೆಪಿಯ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಗೆ ದೊಡ್ಡ ಗೆಲುವು ಸಿಗಲು ಸಾಧ್ಯವಾಗಿದೆ ಎಂದು ಬಿಜೆಪಿ ಹೇಳಿದೆ.
ಜುಲೈ 20ರಂದು ನಡೆದಿದ್ದ ಮತ ಎಣಿಕೆಯಲ್ಲಿ ಕೋವಿಂದ್ ಅವರಿಗೆ, 2,930 ಮತಗಳು ಬಂದಿದ್ದು, ಇವುಗಳ ಮೌಲ್ಯ 7,02,044 ಆಗಿದೆ. ಮೀರಾ ಅವರು, 3, 67, 314 ಮತ ಮೌಲ್ಯ ಗಳಿಸಿದ್ದಾರೆ.

ರಾಮ್ ನಾಥ್ ಅವರು ಗಳಿಸಿದ್ದ ಒಟ್ಟು ಮತಗಳಲ್ಲಿ ಸುಮಾರು 116 ಮತಗಳು ವಿರೋಧ ಪಕ್ಷದಿಂದಲೇ ಬಂದವು ಎಂದು ಅಂದಾಜಿಸಲಾಗಿದೆ ಎಂದು ಬಿಜೆಪಿ ಹೇಳಿದೆ.
ಕಾಂಗ್ರೆಸ್ ನ ಸಹವರ್ತಿಯಾದ ಮಮತಾ ಬ್ಯಾನರ್ಜಿ ಅವರ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ, ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯ ಪ್ರದೇಶ ಹಾಗೂ ಗೋವಾದಲ್ಲಿನ ವಿರೋಧ ಪಕ್ಷಗಳ ಕೆಲ ಶಾಸಕರು ಬಿಜೆಪಿ ಅಭ್ಯರ್ಥಿಗೇ ಮತ ಹಾಕಿರುವ ಮಾಹಿತಿಯು ಲಭ್ಯವಾಗಿದೆ ಎಂದು ಪಕ್ಷದ ಮಹಾ ಕಾರ್ಯದರ್ಶಿ ಭೂಪೇಂದ್ರ ಯಾದವ್ ತಿಳಿಸಿದ್ದಾರೆ.












Click it and Unblock the Notifications