ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ ಚುನಾವಣೆಯಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ಸ್ಪರ್ಧೆ?

|
Google Oneindia Kannada News

ನವೆಂಬರ್ 9: ಮೂರು ವರ್ಷಗಳ ಹಿಂದೆ ಬಿಜೆಪಿ ಸೇರಿದ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಗುಜರಾತ್ ವಿಧಾನಸಭಾ ಚುನಾವಣೆಗೆ ಪಕ್ಷದ ಟಿಕೆಟ್ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಇಂದು ಸಭೆ ಸೇರಲಿದೆ.

27 ವರ್ಷಗಳಿಂದ ಗುಜರಾತ್‌ನಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರಂತಹ ಕೆಲವು ಹಿರಿಯ ನಾಯಕರನ್ನು ಕಣಕ್ಕಿಳಿಸಲು ಸಾಧ್ಯವಿಲ್ಲ. 75 ವರ್ಷ ದಾಟಿದವರು ಸಂಸದರು ಮತ್ತು ಶಾಸಕರ ಸಂಬಂಧಿಕರು ಅನರ್ಹರಾಗುತ್ತಾರೆ ಎಂದು ಬಿಜೆಪಿ ಹೇಳಿದೆ.

Recommended Video

Gujarat Election 2022: ಜಡೇಜಾ ಕುಟುಂಬದ ನಡುವೆ ರಾಜಕೀಯ ಪೈಪೋಟಿ ನಡೆಯಲಿದೆ | Oneindia Kannada

ಗುಜರಾತ್ ಚುನಾವಣೆ: ಬಿಜೆಪಿ ಟಿಕೆಟ್‌ಗಾಗಿ 40 ಪಕ್ಷಾಂತರ ಅಭ್ಯರ್ಥಿಗಳು ಪೈಪೋಟಿ ಗುಜರಾತ್ ಚುನಾವಣೆ: ಬಿಜೆಪಿ ಟಿಕೆಟ್‌ಗಾಗಿ 40 ಪಕ್ಷಾಂತರ ಅಭ್ಯರ್ಥಿಗಳು ಪೈಪೋಟಿ

ರಿವಾಬಾ ಜಡೇಜಾ ಅವರು ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾರೆ. ಅವರು 2016 ರಲ್ಲಿ ರವೀಂದ್ರ ಜಡೇಜಾ ಅವರನ್ನು ವಿವಾಹವಾದರು. ಅವರು ರಜಪೂತ ಸಮುದಾಯದ ಸಂಘಟನೆಯಾದ ಕರ್ಣಿ ಸೇನೆಯ ನಾಯಕಿರಾಗಿದ್ದರು.

ಸಂಭಾವ್ಯ ಪಟ್ಟಿ ಸಿದ್ಧತೆಗೆ ಬಿಜೆಪಿ ಉನ್ನತ ಮಟ್ಟದ ಸಭೆ

ಸಂಭಾವ್ಯ ಪಟ್ಟಿ ಸಿದ್ಧತೆಗೆ ಬಿಜೆಪಿ ಉನ್ನತ ಮಟ್ಟದ ಸಭೆ

ಇನ್ನೂ ಕಾಂಗ್ರೆಸ್ ತೊರೆದ ಹಾರ್ದಿಕ್ ಪಟೇಲ್ ಮತ್ತು ಅಲ್ಪೇಶ್ ಠಾಕೂರ್ ಬಿಜೆಪಿ ಟಿಕೆಟ್ ಪಡೆಯುವ ಯುವ ನಾಯಕರಲ್ಲಿ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಹೆಚ್ಚಿನ ಸಂಖ್ಯೆಯ ಹಾಲಿ ಶಾಸಕರು ಈ ಬಾರಿ ಪಟ್ಟಿಯಲ್ಲಿ ಇರುವುದಿಲ್ಲ ಎಂದು ತಿಳಿದು ಬಂದಿದೆ. ಸಮಿತಿಯು ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಲಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವರು ಪಾಲ್ಗೊಳ್ಳಲಿದ್ದಾರೆ.

ಪಿಎಂ ಮೋದಿ ಮತ್ತು ಅಮಿತ್ ಶಾ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಹಿಮಾಚಲ ಪ್ರದೇಶದೊಂದಿಗೆ ಫಲಿತಾಂಶಗಳು ಹೊರಬೀಳಲಿವೆ. ಅಲ್ಲಿಯೂ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಪ್ರಚಾರ ಚುರುಕುಗೊಳಿಸಿದ ಮೂರು ಪ್ರಬಲ ಪಕ್ಷಗಳು

ಪ್ರಚಾರ ಚುರುಕುಗೊಳಿಸಿದ ಮೂರು ಪ್ರಬಲ ಪಕ್ಷಗಳು

ಗುಜರಾತ್‌ಗಾಗಿ ಪಕ್ಷದ ಪ್ರಮುಖ ಗುಂಪು ಮಂಗಳವಾರ ದೆಹಲಿಯಲ್ಲಿ ಜೆಪಿ ನಡ್ಡಾ ಅವರ ಮನೆಯಲ್ಲಿ ಮೂರು ಗಂಟೆಗಳ ಕಾಲ ಸಭೆ ನಡೆಸಿತು. ಆ ಗುಂಪಿನ ಸದಸ್ಯರು ಅಮಿತ್ ಶಾ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ರಾಜ್ಯ ಘಟಕದ ಅಧ್ಯಕ್ಷ ಸಿಆರ್ ಪಾಟೀಲ್ ಮತ್ತು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಸೇರಿದಂತೆ ಇತರರು ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಕೆಯ ಬಗ್ಗೆ ಚರ್ಚೆ ನಡೆದಿದೆ.

ಚುನಾವಣೆ ತ್ರಿಕೋನ ಸ್ಪರ್ಧೆಯಾಗಿ ನಡೆಯಲಿದೆ. ಕಳೆದ ಬಾರಿ ತನ್ನ ಮತ ಹಂಚಿಕೆ ಮತ್ತು ಸ್ಥಾನಗಳನ್ನು ಹೆಚ್ಚಿಸಿಕೊಂಡಿದ್ದ ಕಾಂಗ್ರೆಸ್ ತನ್ನ ಪ್ರಚಾರವನ್ನು ಚುರುಕುಗೊಳಿಸಿದೆ. ಇನ್ನು ಆಮ್ ಆದ್ಮಿ ಪಕ್ಷವು ಒಂದು ಮೆಗಾ ಪ್ರಚಾರವನ್ನು ಆರಂಭಿಸಿದೆ. ಇತ್ತ ಬಿಜೆಪಿಯೂ ಮತಬೇಟೆ ಶುರು ಮಾಡಿದೆ.

ಬಿಜೆಪಿಯಿಂದ ಭರ್ಜರಿ ತಯಾರಿ

ಬಿಜೆಪಿಯಿಂದ ಭರ್ಜರಿ ತಯಾರಿ

ಬಿಜೆಪಿ ಇಂದು ತನ್ನ ಸಭೆಯಲ್ಲಿ ಎಲ್ಲಾ 182 ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ. ಆ ಪಟ್ಟಿಯಲ್ಲಿರುವ ಅಭ್ಯರ್ಥಿಗಳನ್ನು ಮುಂದಿನ ಕೆಲವು ದಿನಗಳಲ್ಲಿ ಬಿಜೆಪಿ ಪಕ್ಷ ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ. 2017 ರಲ್ಲಿ ಬಿಜೆಪಿ 99 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ 77 ಸ್ಥಾನಗಳನ್ನು ಪಡೆದುಕೊಂಡಿತು. ಪ್ರಸ್ತುತ ವಿಧಾನಸಭೆಯಲ್ಲಿ ಬಿಜೆಪಿಯ ಬಲ 111 ಇದೆ.

ಬಿಜೆಪಿಯಲ್ಲಿ ಪಕ್ಷಾಂತರ ಅಭ್ಯರ್ಥಿಗಳ ಪೈಪೋಟಿ

ಬಿಜೆಪಿಯಲ್ಲಿ ಪಕ್ಷಾಂತರ ಅಭ್ಯರ್ಥಿಗಳ ಪೈಪೋಟಿ

ಗುಜರಾತ್ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಕದನವಾಗಿದೆ. ಇದು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾಗಿದ್ದರೂ, ಎಎಪಿ ಶತ ಪ್ರಯತ್ನದಿಂದ ಬಿಜೆಪಿ ಬಲ ಕಳೆದುಕೊಳ್ಳುವ ಹಾಗೆ ಮಾಡುವ ಸಾಧ್ಯತೆಯಿದೆ. ಹೀಗಿರುವಾಗ ರಾಜಕೀಯದ ಚದುರಂಗದಾಟದಲ್ಲಿ ಒಂಟೆ ಯಾವ ಕಡೆ ಕೂರುತ್ತದೆ ಎಂಬುದನ್ನು ಚುನಾವಣೆಯಲ್ಲಿ ಸಾರ್ವಜನಿಕರು ನಿರ್ಧರಿಸುತ್ತಾರೆ. ಈ ನಡುವೆ ಚುನಾವಣೆಗೂ ಮುನ್ನ ಪಕ್ಷಾಂತರಿ ನಾಯಕರ ಪ್ರಸ್ತಾಪವೂ ಮುನ್ನೆಲೆಗೆ ಬರುತ್ತಿದೆ. ಈ ನಾಯಕರಲ್ಲಿ ಈಗ ಬಿಜೆಪಿಯಲ್ಲಿ ಹಾರ್ದಿಕ್ ಪಟೇಲ್ ಮತ್ತು ಅಲ್ಪೇಶ್ ಠಾಕೋರ್ ಅವರಂತಹ ಕಾಂಗ್ರೆಸ್ಸಿಗರು ಸೇರಿದ್ದಾರೆ. ಕಾಂಗ್ರೆಸ್ ತೊರೆದಿರುವ ಈ ನಾಯಕರಿಗೆ ಬಿಜೆಪಿಯಲ್ಲಿ ಟಿಕೆಟ್ ಸಿಗುವ ನಿರೀಕ್ಷೆ ಇದೆ. ಆದರೆ ಸಾಧ್ಯತೆ ಎಷ್ಟಿದೆ ಅನ್ನೋ ಕುತೂಹಲ ಮೂಡಿದೆ.

ಪಕ್ಷ ಬದಲಿಸಿದ ನಾಯಕರು ಬಿಜೆಪಿಯ ಚಿಹ್ನೆಯ ಮೇಲೆ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನು ಪಡೆಯುತ್ತಾರೆ ಎಂಬ ಸಂಪೂರ್ಣ ಭರವಸೆ ಹೊಂದಿದ್ದಾರೆ. ಅಂತಹ ನಾಯಕರ ಪೈಕಿ ಕಾಂಗ್ರೆಸ್ಸಿಗರ ಪಟ್ಟಿ ಉದ್ದವಾಗುತ್ತಿದೆ. 2017 ರ ವಿಧಾನಸಭಾ ಚುನಾವಣೆಯ ನಂತರ 35 ಕ್ಕೂ ಹೆಚ್ಚು ಕಾಂಗ್ರೆಸ್ ಸದಸ್ಯರು ಪಕ್ಷ ಬದಲಾಯಿಸಿದರು ಮತ್ತು ಈಗ 2022 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಅಂತಹ ಪಕ್ಷಾಂತರಿ ನಾಯಕರಿಗೆ ಟಿಕೆಟ್ ನೀಡುವಂತೆ ಪಕ್ಷದ ನಾಯಕತ್ವದ ಮೇಲೆ ಒತ್ತಡ ಹೇರುತ್ತಿದ್ದಾರೆ. ಗುಜರಾತ್‌ನಲ್ಲಿ ಪಕ್ಷ ಬದಲಿಸಿದ ನಂತರ ಟಿಕೆಟ್‌ಗಾಗಿ ಒತ್ತಡ ಹೇರುವ ನಾಯಕರ ಸಂಖ್ಯೆ 40 ಆಗಿದೆ. ಹೀಗಾಗಿ ಬಿಜೆಪಿಗೆ ಟಿಕೆಟ್ ಹಂಚಿಕೆ ಸವಾಲಾಗಿ ಪಡಿಣಮಿಸಿದೆ.

English summary
Ravindra Jadeja, wife of cricketer Ravindra Jadeja, who joined the BJP three years ago, is likely to get the party's ticket for the Gujarat assembly elections, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X