ಆಮ್ ಆದ್ಮಿ ಪಕ್ಷ ಸೇರಲಿರುವ ಕಪಿಲ್ ದೇವ್, ಬೇಡಿ
ನವದೆಹಲಿ, ಫೆ. 5: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲಾ ನೇತೃತ್ವದ ಆಮ್ ಆದ್ಮಿ ಪಕ್ಷವು ಸಿಕ್ಸರ್ ಬಾರಿಸುವ ಲಕ್ಷಣಗಳು ಗೋಚರಿಸುತ್ತಿವೆ. ಈಗಾಗಲೇ ಖ್ಯಾತ ುದ್ಯಮಿಗಳು, ಚಿಂತಕರು, ಪತ್ರಕರ್ತರು ಆಮ್ ಆದ್ಮಿ ಪಕ್ಷ ಸೇರಿಕೊಂಡಿರುವುದರ ಬೆನ್ನಿಗೆ ಇದೀಗ ಇನ್ನೂ ಒಂದಷ್ಟು ಖ್ಯಾತ ನಾಮರು ಪಕ್ಷದ ಆಶಯಗಳನ್ನು ಮೆಚ್ಚಿ ಅದಕ್ಕೆ ಅಂಕಿತರಾಗಲು ಬಯಸುತ್ತಿದ್ದಾರೆ.
ಖಚಿತ ಮೂಲಗಳ ಪ್ರಕಾರ ಹೆಸರಾಂತ ಮಾಜಿ ಕ್ರಿಕೆಟ್ ಆಟಗಾರರಾದ ಕಪಿಲ್ ದೇವ್, ಬಿಷನ್ ಸಿಂಗ್ ಬೇಡಿ, ಮಾಜಿ ಮಹಾಲೇಖಪಾಲರಾದ ವಿನೋದ್ ರೈ ಮತ್ತು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್ ವೈ ಖುರೇಶಿ ಅವರುಗಳು AAP ಸೇರಲು ಕ್ಯೂನಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಹೀಗೆ ಸಾರ್ವಜನಿಕ ಕ್ಷೇತ್ರದ ಗಣ್ಯ ವ್ಯಕ್ತಿಗಳು ರಾಜಕೀಯದತ್ತ ಒಲವು ತೋರುತ್ತಿರುವುದು ದೇಶದಲ್ಲಿ ರಾಜಕೀಯ ಮಹಾ ಬದಲಾವಣೆಗೆ ದಿಕ್ಸೂಚಿಯಾಗಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
ಈ ಮಧ್ಯೆ, ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರನ್ನು ಪಕ್ಷದ ವತಿಯಿಂದ ಗಾಂಧಿ ನಾಡಿನಲ್ಲೇ ನರೇಂದ್ರ ಮೋದಿ ಅವರ ವಿರುದ್ಧ ನಿಲ್ಲಿಸುವ ಆಲೋಚನೆಯೂ ನಡೆದಿದೆ.












Click it and Unblock the Notifications