ವಾಹನ ಸವಾರರಿಗೆ ಶಾಕ್, ಪೆಟ್ರೋಲ್ ಬಂಕ್ ಗಳಲ್ಲಿ ಕಾರ್ಡ್ ಬಳಕೆ ಇಲ್ಲ

Written By: Ramesh
Subscribe to Oneindia Kannada

ಬೆಂಗಳೂರ, ಜನವರಿ. 08 : ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಹಾಕಿಸಿಕೊಳ್ಳುತ್ತಿದ್ದ ವಾಹನ ಸವಾರರಿಗೆ ಪೆಟ್ರೋಲ್ ಬಂಕ್ ಮಾಲೀಕರ ಸಂಘ ಶಾಕ್ ಯೊಂದನ್ನು ನೀಡಿದೆ.

ಇನ್ಮುಂದೆ ಪೆಟ್ರೋಲ್ ಬಂಕ್ ಗಳಲ್ಲಿ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಸ್ವೀಕರಿಸುವುದಿಲ್ಲವೆಂದು ಪೆಟ್ರೋಲ್ ಬಂಕ್ ಮಾಲೀಕರ ಸಂಘ ತಿಳಿಸಿದೆ. ಇದರಿಂದ ಈ ಮೊದಲೇ ಹಣ ಸಿಗದೆ ಕಂಗಾಲಾಗಿರುವ ವಾಹನ ಸವಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಭಾನುವಾರ ಮಧ್ಯರಾತ್ರಿಯಿಂದಲೇ ಭಾರತದಾದ್ಯಂತ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಕೆಯನ್ನು ಸ್ಥಗಿತಗೊಳಿಸಲಿದ್ದಾರೆ. ಕಾರ್ಡ್ ಬಳಿಕೆ ಮೇಲೆ ಸರ್ವಿಸ್ ಚಾರ್ಜ್ ಜಾರಿ ಹಿನ್ನೆಲೆಯಲ್ಲಿ ಪೆಟ್ರೋಲ್ ಮಾಲೀಕರು ಗ್ರಾಹಕರಿಂದ ಕಾರ್ಡ್ ಪಡೆಯದಿರಲು ತೀರ್ಮಾನಿಸಿದ್ದಾರೆ.

Credit and debit card will not accepted in petrol bunks from jan 8 midnight

ಈ ಬಗ್ಗೆ ಕರ್ನಾಟಕ ಪೆಟ್ರೋಲ್ ಬಂಕ್​​ ಮಾಲೀಕರ ಅಧ್ಯಕ್ಷ ರವೀಂದ್ರನಾಥ್​ ಈ ಕುರಿತಾಗಿ ಹೇಳಿಕೆ ನೀಡಿದ್ದು, ಡೆಬಿಟ್​​, ಕ್ರೆಡಿಟ್ ಕಾರ್ಡ್​ ಬಳಕೆ ಮೇಲೆ ಶೇ.1ರಷ್ಟು ಸರ್ವೀಸ್ ಟ್ಯಾಕ್ಸ್ ಹಾಕುವುದಾಗಿ ಹೇಳಲಾಗಿದೆ.

ಹೀಗಾಗಿ ಪೆಟ್ರೋಲ್​ ಬಂಕ್​'ಗಳಲ್ಲಿ ಗ್ರಾಹಕರಿಂದ ಕಾರ್ಡ್​ ಪಡೆಯದಿರಲು ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Petrol pump owners are protesting against banks' charging 1% transaction fee on every transaction made via card, and have decided to stop accepting card payments from Monday.
Please Wait while comments are loading...