ಸಿಪಿಎಂ ಕಾರ್ಯಕರ್ತನ ಕೊಲೆ, ಆರ್ ಎಸ್ ಎಸ್ ಕಾರ್ಯಕರ್ತರಿಗೆ ಜೀವಾವಧಿ

By: ಅನುಷಾ ರವಿ
Subscribe to Oneindia Kannada

ತಿರುವನಂತಪುರಂ, ಡಿಸೆಂಬರ್ 19: ಸಿಪಿಎಂ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ್ ಸಂಘದ ಹನ್ನೊಂದು ಮಂದಿಗೆ ಇಲ್ಲಿನ ಹೆಚ್ಚುವರಿ ಸೆಷನ್ಸ್ ಕೋರ್ಟ್ ಸೋಮವಾರ ದುಪ್ಪಟ್ಟು ಜೀವಾವಧಿ ಶಿಕ್ಷೆ ವಿಧಿಸಿ, ಆದೇಶಿಸಿದೆ. ಸಿಪಿಎಂ ಕಾರ್ಯಕರ್ತರಾಗಿದ್ದ ವಿಷ್ಣು ಎಂಬುವರ ಕೊಲೆ ಏಪ್ರಿಲ್ 1, 2008ರಲ್ಲಿ ಆಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಈ ಆದೇಶ ಬಂದಿದೆ.

ಆರೋಪಿಗಳು ತಲೆ ತಪ್ಪಿಸಿಕೊಳ್ಳಲು ನೆರವಾದ ಆರೋಪದಲ್ಲಿ ವ್ಯಕ್ತಿಯೊಬ್ಬರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ, ಕೋರ್ಟ್ ಆದೇಶಿಸಿದೆ. ಐವತ್ತು ಸಾವಿರ ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಿದೆ. ಶುಕ್ರವಾರದ ದಿನ ಹದಿಮೂರು ಆರೋಪಿಗಳ ತಪ್ಪು ರುಜುವಾತಾಗಿದೆ ಎಂದು ಕೋರ್ಟ್ ತಿಳಿಸಿತ್ತು. ಸೋಮವಾರ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ.[ನೂರು ಬಗೆ ಖಾದ್ಯ, 20 ಸಾವಿರ ಅತಿಥಿಗಳು: ಕೇರಳದಲ್ಲಿ ಮದುವೆ ವೈಭೋಗ]

ಒಬ್ಬ ಆರೋಪಿಯನ್ನು ಖುಲಾಸೆ ಮಾಡಿದ್ದು, ವಿಚಾರಣೆ ವೇಳೆಯೇ ರೆಂಜಿತ್ ಎಂಬತ ಮೃತಪಟ್ಟಿದ್ದ. ಬಿಜೆಪಿ ಮುಖಂಡ ಅಜಂ ಅನಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆರ್ ಎಸ್ ಎಸ್ ಕಾರ್ಯಕರ್ತರಾದ ಸಂತೋಷ್, ಮನೋಜ್, ಬಿಜು ಕುಮಾರ್, ಹರಿಲಾಲ್, ರೆಂಜಿತ್ ಕುಮಾರ್, ಬಿಬಿನ್, ಸತೀಶ್, ಬೋಸ್, ವಿನೋದ್ ಕುಮಾರ್, ಸುಭಾಷ್, ಸತೀಶ್ ಮತ್ತು ಶಿವಲಾಲ್ ಎಂಬುವರಿಗೆ ಶಿಕ್ಷೆಯಾಗಿದೆ.

CPM activist murder: Double life sentence for 11 RSS activists

ಕೈತಮುಕ್ಕುವಿನ ಪಾಸ್ ಪೋರ್ಟ್ ಕಚೇರಿ ಹೊರಭಾಗದಲ್ಲಿ 2008ರ ಏಪ್ರಿಲ್ ನಲ್ಲಿ ಹಾಡಹಗಲೇ ವಿಷ್ಣು ಹತ್ಯೆ ಮಾಡಲಾಗಿತ್ತು. ಮೊದಲಿಗೆ ಹದಿನಾರು ಮಂದಿ ಬಿಜೆಪಿ ಸದಸ್ಯರ ಹೆಸರು ಕೇಳಿಬಂದಿತ್ತು. 2001ರಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಮೇಲೆ ದಾಳಿ ಪ್ರಕರಣದಲ್ಲಿ ವಿಷ್ಣು ಆರೋಪಿಯಾಗಿದ್ದ. ಇದು ಪ್ರತೀಕಾರದ ಹತ್ಯೆಯಾಗಿತ್ತು ಎಂದು ವಿಚಾರಣಾಧಿಕಾರಿಗಳು ಅಭಿಪ್ರಾಯಪಟ್ಟಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Thiruvananthapuram additional sessions court on Monday awarded double life sentences to 11 Rashtriya Swayamsevak Sangh members in connection with the Vishnu murder case. Vishnu, a Communist Party of India-Marxist activist, was murdered on 1 April 2008.
Please Wait while comments are loading...