59 ರು ಗಳಿಗೆ ಕೊವಿಡ್ 19 ಮಾತ್ರೆ ಮಾರಾಟಕ್ಕೆ ಅನುಮತಿ
ಬೆಂಗಳೂರು, ಜುಲೈ 24: ಕೊರೊನಾವೈರಸ್ ಚಿಕಿತ್ಸೆಗೆ ನೀಡಲಾಗುವ antiviral ಡ್ರಗ್ ಮಾರಾಟ ಮಾಡಲು ಬ್ರಿಂಟನ್ ಫಾರ್ಮಾ ಕಂಪನಿಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ(ಡಿಜಿಸಿಐ) ಅನುಮತಿ ನೀಡಿದೆ.
Recommended Video
Favipiravir ಆಧಾರಿತ ಔಷಧ ಫಾವಿಟನ್ ಮಾರಾಟ ಮಾಡಲು ಬ್ರಿಂಟನ್ ಫಾರ್ಮಾ ಕಂಪನಿ ಮುಂದಾಗಿದೆ. 200 ಎಂಜಿ ಮಾತ್ರೆಗಳಿಗೆ 59 ರು ರೀಟೈಲ್ ದರ ನಿಗದಿ ಮಾಡಲಾಗಿದೆ ಎಂದು ಸಂಸ್ಥೆ ಹೇಳಿದೆ.
ಸಾಧಾರಣ ಹಾಗೂ ಮಧ್ಯಮ ರೋಗಲಕ್ಷಣಗಳಿರುವವರ ಚಿಕಿತ್ಸೆಗೆ ಫಾವಿಪಿರಾವಿರ್ ಸೂಕ್ತವಾದ ಮಾತ್ರೆ ಎಂದು ತಿಳಿದು ಬಂದಿದೆ. ಜೂನ್ 2020ರಲ್ಲೇ ಕೊವಿಡ್ 19 ಚಿಕಿತ್ಸೆಗೆ ಫಾವಿಪಿರಾವಿರ್ ನೀಡಲು ಅನುಮತಿ ಸಿಕ್ಕಿದೆ ಎಂದು ಬ್ರಿಂಟನ್ ಫಾರ್ಮಾ ಸಿಎಂಡಿ ರಾಹುಲ್ ಕುಮಾರ್ ದಾರ್ದಾ ಹೇಳಿದ್ದಾರೆ.
ಜಪಾನ್ ಮೂಲದ ಫ್ಯೂಜಿಫಿಲಂ ಕಾರ್ಪೊರೇಷನ್ ಫ್ಯೂಜಿಫಿಲಂ ಟೊಯಾಮಾ ಕೆಮಿಕಲ್ ಕೊ ಲಿಮಿಟೆಡ್ ನ ಅವಿಗಾನ್ ಮಾತ್ರೆಯ ಇನ್ನೊಂದು ರೂಪವೇ ಫಾವಿಟಾನ್ ಎಲ್ಲೆಡೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಸಂಸ್ಥೆ ಹೇಳಿದೆ.
ಬಾಯಿ ಮೂಲಕ ಸೇವಿಸಬಹುದಾದ ಈ antiviral ಡ್ರಗ್ ವಿಶೇಷತೆಯಂದರೆ ಇಲ್ಲಿ ತನಕ ಈ ಡ್ರಗ್ ಬಳಸಿದವರಲ್ಲಿ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ.
ಭಾರತದಲ್ಲಿ favipiravir ಡ್ರಗ್ ಗ್ಲೆನ್ ಮಾರ್ಕ್ ಸಂಸ್ಥೆಯಿಂದ FabiFlu ಹೆಸರಿನಲ್ಲಿ ದೊರೆಯಲಿದೆ. favipiravir ಹಾಗೂ umifenovir ಸಂಯೋಜಿಸಿ ಹೊಸ ಡ್ರಗ್ ತಯಾರಿಸಿ ಕೂಡಾ ಮಾರುಕಟ್ಟೆಗೆ ತರುವ ಯೋಜನೆಯನ್ನು ಸಂಸ್ಥೆ ಹಾಕಿಕೊಂಡಿದೆ.

ಜಪಾನಿಯರು ಮೊದಲಿಗೆ ಅವಿಫಾವಿರ್ ಮಾತ್ರೆ
2014ರಲ್ಲಿ ಜಪಾನಿಯರು ಮೊದಲಿಗೆ ಅವಿಫಾವಿರ್ ಮಾತ್ರೆಯನ್ನು ಕಂಡು ಹಿಡಿದು ಜ್ವರ ನಿವಾರಣೆಗಾಗಿ ಬಳಸತೊಡಗಿದರು. ಅಂದಿನಿಂದ ಇಲ್ಲಿ ತನಕ ಯಾವುದೇ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ ಹೀಗಾಗಿ, ಕೊವಿಡ್ 19 ರೋಗಿಗಳ ಕ್ಲಿನಿಕಲ್ ಟ್ರಯಲ್ ಬಳಕೆಗೂ ಸುರಕ್ಷಿತ ಹಾಗೂ ತ್ವರಿತಗತಿಯಲ್ಲಿ ಟ್ರಯಲ್ ಮುಗಿಸಬಹುದು ಎಂದು ಜಪಾನಿ ತಜ್ಞರು ಸೂಚನೆ ನೀಡಿದ ಬಳಿಕ ರಷ್ಯನ್ನರು ಟ್ರಯಲ್ ಆರಂಭಿಸಿದರು. ರಷ್ಯಾ ಹಾಗೂ ಜಪಾನ್ ಜಂಟಿ ಸಹಯೋಗದಲ್ಲಿ ಕೊವಿಡ್ 19ಗೆ ಈ ಡ್ರಗ್ ಹೇಗೆ ಉಪಯುಕ್ತ ಎಂಬುದರ ಬಗ್ಗೆ ಸಂಶೋಧನೆ, ಟ್ರಯಲ್ ನಡೆಸಲಾಗಿದೆ.

ಮಾತ್ರೆ ಬಳಕೆ ಮಾಡುವ ಮೊದಲು ನಿಬಂಧನೆ ತಿಳಿಯಿರಿ
ಗ್ಲೆನ್ ಮಾರ್ಕ್ ಸಂಸ್ಥೆ ಲಸಿಕೆ/ಮಾತ್ರೆ ಬಳಕೆ ಮಾಡುವ ಮೊದಲು ಸೋಂಕಿತ ವ್ಯಕ್ತಿಯಿಂದ ಲಿಖಿತ ಒಪ್ಪಿಗೆ ಪಡೆದುಕೊಂಡಿರಬೇಕು. ಸೋಂಕಿತ ವ್ಯಕ್ತಿಗೆ 14ದಿನಗಳವರೆಗೆ ಮಾತ್ರ ಡ್ರಗ್ ನೀಡಬಹುದು. ಮೊದಲ ದಿನ 3600 mg, ಎರಡನೇ ದಿನ 1600 mg ಈ ರೀತಿ ಇಳಿಕೆ ಕ್ರಮದಲ್ಲೇ ನೀಡಬೇಕು. ಗರ್ಭಿಣಿ, ಬಾಣಂತಿ, ಕರುಳುಬೇನೆಯುಳ್ಳವರು, ಯೂರಿಕ್ ಆಮ್ಲ ಅಸಮತೋಲನವುಳ್ಳವರು.. ಹೀಗೆ ಮುಂತಾದ ದೇಹ ಪರಿಸ್ಥಿತಿಯುಳ್ಳವರಿಗೆ ನೀಡುವಂತಿಲ್ಲ.

ಯಾವುದೇ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ
favipiravir ಮೂಲ Anti viral ಡ್ರಗ್ ಆಧಾರ ಮೇಲೆ ಅವಿಫಾವಿರ್ ತಯಾರಾಗುತ್ತಿದ್ದು, 2014ರಿಂದ ಮುಖ್ಯವಾಗಿ ವಿಷಯ ಶೀತ ಜ್ವರಕ್ಕೆ ಬಳಸಲಾಗುತ್ತಿದೆ. ಸದ್ಯ ರಷ್ಯಾದಲ್ಲಿ ಕೊವಿಡ್ 19ಗೆ ಬಳಸಲು ಆರಂಭಿಸಿ ತಿಂಗಳು ಕೂಡಾ ಕಳೆದಿಲ್ಲ. ಸೈಡ್ ಎಫೆಕ್ಟ್ ಇಲ್ಲದಿರುವುದರಿಂದ 10 ದಿನಗಳ ಕ್ಲಿನಿಕಲ್ ಟ್ರಯಲ್ ಮಾತ್ರ ಮಾಡಲಾಗಿದೆ. ಈ ಡ್ರಗ್ ಪಡೆದ ರೋಗಿಗೆ 4 ದಿನಗಳಲ್ಲೇ ಸೋಂಕು ತೊಲಗಿದೆ. ಶೇ 80ರಷ್ಟು ಕಾರ್ಯಕ್ಷಮತೆಯನ್ನು ಇದು ಹೊಂದಿದೆ ಎಂದು ಮಾಸ್ಕೋ ವಿವಿಯಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಿದ ಐಎಂ ಶೆಕೆನೊವ್ ಮೆಡಿಕಲ್ ವಿವಿ, ಲೊಮೊನೊಸೊವ್ ಮಾಸ್ಕೋ ವಿವಿ ವಿಜ್ಞಾನಿಗಳ ತಂಡ ಹೇಳಿದೆ. 10 ದಿನಗಳ ತನಕದ ಡೋಸೆಜ್ ಪೂರ್ಣಗೊಳಿಸಿದ ರೋಗಿಗಳಿಗೆ ಯಾವುದೇ ಸೋಂಕು, ಯಾವುದೇ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ.

ಬಯೋಫರ್ ಇಂಡಿಯಾಕ್ಕೂ ಅನುಮತಿ
ಹೈದ್ರಾಬಾದ್ ಮೂಲದ ಬಯೋಫರ್ ಇಂಡಿಯಾ ಫಾರ್ಮಾಸಿಟಿಕಲ್ಸ್ ತನ್ನ ಫೆವಿಪಿರಾವಿರ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದನ್ನು ಸಣ್ಣ ಪ್ರಮಾಣದಿಂದ ಮಧ್ಯಮ ಪ್ರಮಾಣದ ಕೋವಿಡ್-19 ಪ್ರಕರಣಗಳಿಗೆ ರೋಗನಿರೋಧಕವನ್ನಾಗಿ ಬಳಸಲು ಭಾರತೀಯ ಪ್ರಧಾನ ಔಷಧ ನಿಯಂತ್ರಣ (ಡಿಸಿಜಿಐ) ಅನುಮತಿ ನೀಡಿದೆ.
ಫೆವಿಪಿರಾವಿರ್ ಒಂದು ಸಕ್ರಿಯ ಫಾರ್ಮಾಸಿಟಿಕಲ್ ಇನ್ ಗ್ರೆಡಿಯೆಂಟ್ (ಎಪಿಐ) ಆಗಿದ್ದು ಮತ್ತು ಅದರ ಉತ್ಪಾದನೆಯನ್ನು ಹೆಚ್ಚು ಮಾಡಿರುವುದಾಗಿ ಬಯೋಫರ್ ಇಂಡಿಯಾ ಫಾರ್ಮಾಸಿಟಿಕಲ್ಸ್ ಘೋಷಿಸಿದೆ. ಭಾರತದಲ್ಲಿ ಎಪಿಐಯನ್ನು ಉತ್ಪಾದಿಸಲು ಬಯೋಫರ್ ಡಿಸಿಜಿಐನಿಂದ ಪರವಾನಗಿ ಪಡೆದುಕೊಂಡಿದೆ ಮತ್ತು ರಫ್ತು ಮಾಡಲು ಸಹ ಅನುಮತಿ ಪಡೆದುಕೊಂಡಿದೆ.












Click it and Unblock the Notifications