ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ತಾಲೀಮು: 83 ಕೋಟಿ ಸಿರಿಂಜ್ ಖರೀದಿಗೆ ಮುಂದಾದ ಭಾರತ

|
Google Oneindia Kannada News

ನವದೆಹಲಿ,ಜನವರಿ 01: ದೇಶಾದ್ಯಂತ ಕೊರೊನಾ ಲಸಿಕೆ ತಾಲೀಮು ನಡೆಯುತ್ತಿರುವ ಹಿನ್ನೆಲೆಯಲ್ಲಿ 83 ಕೋಟಿ ಸಿರಿಂಜ್ ಖರೀದಿಗೆ ಭಾರತ ಮುಂದಾಗಿದೆ.

ಸ್ಟೋರೇಜ್ ವಿತರಣಾ ಕೇಂದ್ರಕ್ಕೆ ಲಸಿಕೆ ಸಾಗಾಟ ಪ್ರಕ್ರಿಯೆ, ಲಸಿಕೆ ನೀಡಿಕೆ, ಕೋ-ವಿನ್ ಅಪ್ಲಿಕೇಷನ್‌ನಲ್ಲಿ ನೋಂದಣಿ, ಬೂತ್‌ಗಳಲ್ಲಿ ಜನಸಂದಣಿ ನಿಯಂತ್ರಣ ಸಾಮಾಜಿಕ ಅಂತರ ಕಾಪಾಡುವ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತದೆ.

ಭಾರತದಲ್ಲಿ ಹೊಸದಾಗಿ 20,036 ಕೊರೊನಾ ಸೋಂಕಿತರು ಪತ್ತೆಭಾರತದಲ್ಲಿ ಹೊಸದಾಗಿ 20,036 ಕೊರೊನಾ ಸೋಂಕಿತರು ಪತ್ತೆ

ಲಸಿಕೆಗೆ ಕೌಂಟ್‌ಡೌನ್ ಶುರುವಾಗಿರುವಾಗಲೇ 83 ಕೋಟಿ ಸಿರಿಂಜ್ ಖರೀದಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತು 35 ಕೋಟಿ ಸಿರಿಂಜ್ ಖರೀದಿಗೆ ಬಿಡ್ ಕೂಡಾ ಕರೆದಿದೆ. ಜತೆಗೆ ಬಳಸಿದ ಸಿರಿಂಜ್ ನಿಷ್ಕ್ರಿಯಕ್ಕೂ ಯೋಜನೆ ರೂಪಿಸಲಾಗಿದೆ.

COVID-19 Vaccination In India: Central Govt Orders 83 Crore Syringes, Releases Guidelines For Usage

ಲಸಿಕೆಯ ಜಾರಿಗೆ ಪರಿಣಾಮಕಾರಿ ಸಿದ್ಧತೆ ಖಚಿತಪಡಿಸಿಕೊಳ್ಳುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಸರ್ಕಾರ ಸೂಚಿಸಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಈ ಚಟುವಟಿಕೆಯನ್ನು ಎಲ್ಲಾ ರಾಜ್ಯ ರಾಜಧಾನಿಗಳಲ್ಲಿ ಕನಿಷ್ಠ ಮೂರು ಸೆಷನ್ ಸ್ಥಳಗಳಲ್ಲಿ ತಾಲೀಮು ನಡೆಸಲು ಉದ್ದೇಶಿಸಲಾಗಿದೆ. ಕಠಿಣ ಪ್ರದೇಶದಲ್ಲಿ ನೆಲೆಗೊಂಡ ಕೆಲವು ರಾಜ್ಯಗಳು ಹಾಗೂ ಕಳಪೆ ಲಾಜಿಸ್ಟಿಕ್ ಹೊಂದಿರುವ ಜಿಲ್ಲೆಗಳು ಸಹ ಒಳಗೊಂಡಿವೆ.

ಕೊವಿಡ್​-19 ಲಸಿಕೆಯ ಸಿದ್ಧತೆಯನ್ನು ಸೆಷನ್​ ಸೈಟ್​ಗಳಲ್ಲಿ ಪರಾಮರ್ಶಿಸಲು ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಅಧಿಕಾರಿಗಳು (ಆರೋಗ್ಯ), ಎನ್​ಎಚ್​ಎಂ ಮತ್ತು ಇತರ ಆರೋಗ್ಯ ನಿರ್ವಾಹಕರು ಭಾಗವಹಿಸಿದ್ದರು.

ದೇಶದಾದ್ಯಂತ ಲಸಿಕೆಯನ್ನು ಜಾರಿಗೆ ತರಲು ಸಿದ್ಧತೆ ಮಾಡುವ ಉದ್ದೇಶಸಲಾಗಿದೆ. ಕೇಂದ್ರವು 83 ಕೋಟಿ ಸಿರಿಂಜ್​ ಸಂಗ್ರಹಿಸುತ್ತಿದೆ.

Recommended Video

ಬೆಂಗಳೂರು: ಇಂದಿನಿಂದ ಶಾಲೆಗಳು ಆರಂಭ, ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಸ್ವಾಗತಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ | Oneindia Kannada

English summary
The central government has ordered 83 crore syringes for COVID-19 vaccination drive in India. A set of guidelines for safer disposal of used injections has also been prepared, according to reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X