ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಪತ್ತೆ ಹಾಗೂ ನಿರ್ವಹಣೆ ಬಗ್ಗೆ ಉಪಯುಕ್ತ ಮಾಹಿತಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 29: ಕೊರೊನಾವೈರಸ್ ಪತ್ತೆ ಹಾಗೂ ನಿರ್ವಹಣೆ ಹೇಗೆ ಎಂಬುದರ ಕುರಿತು ಉಪಯುಕ್ತ ಮಾಹಿತಿ ಇಲ್ಲಿದೆ.

ಯಾವುದೇ ಔಷಧವನ್ನು ಅನುಸರಿಸಬೇಕಾದರೆ ವೈದ್ಯರ ಸಲಹೆ ಪಡೆದುಕೊಳ್ಳಲೇಬೇಕು. ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಸ್ಯಾನಿಟೈಸರ್ ಬಳಕೆ ಮಾಡಿ. ರೋಗದ ಲಕ್ಷಣ ಸೌಮ್ಯವಾಗಿದೆಯೇ ಅಥವಾ ತೀವ್ರವಾಗಿದೆಯೇ ಎಂದು ಗಮನಿಸಿ ಅದರ ಮೇರೆಗೆ ವೈದ್ಯರ ಸಲಹೆ ಪಡೆಯಿರಿ.

ನಿಮ್ಮ ಧ್ವನಿ ಬದಲಾವಣೆಯೂ ಕೊರೊನಾ ಸೋಂಕಿನ ಒಂದು ಲಕ್ಷಣ ನಿಮ್ಮ ಧ್ವನಿ ಬದಲಾವಣೆಯೂ ಕೊರೊನಾ ಸೋಂಕಿನ ಒಂದು ಲಕ್ಷಣ

ನಿಂಬೆ ರಸ, ಅರಿಶಿನ ಬೆರೆಸಿರುವ ಹಾಲು, ದಾಳಿಂಬೆ ರಸ, ನೀರು, ಬಿಸಿ ಸೂಪ್, ನೀರಿನಲ್ಲಿ ಮೆಂತ್ಯೆ ಬೀಜವನ್ನು ನೆನೆಹಾಕಿ ಸ್ವೀಕರಿಸುವುದು, ಕಷಾಯ, ಎಳನೀರು ಸೇವಿಸಬೇಕು.

ಕೊರೊನಾ ಸೋಂಕಿನ ಲಕ್ಷಣಗಳು

ಕೊರೊನಾ ಸೋಂಕಿನ ಲಕ್ಷಣಗಳು

ಜ್ವರ, ಮೈಕೈನೋವು, ಒಣಕೆಮ್ಮು, ಸಾಮಾನ್ಯ ಲಕ್ಷಣಗಳು ಅತಿಸಾರ, ರುಚಿ ಕಳೆದುಕೊಳ್ಳುವುದು, ಗಂಟಲು ಕೆರೆತ ಉಂಟಾಗುತ್ತದೆ.

ಪ್ರತ್ಯೇಕವಾಗಿರಿ

ಪ್ರತ್ಯೇಕವಾಗಿರಿ

ಯಾವುದೇ ರೋಗ ಲಕ್ಷಣಗಳು ಕಂಡು ಬಂದರೂ, ಮೊದಲ ಕೆಲಸ ಮನೆಯಲ್ಲಿಯೇ ಬಂಧಿಯಾಗಿರಿ, ಯಾರೊಂದಿಗೂ ಹತ್ತಿರದಿಂದ ಮಾತನಾಡಬೇಡಿ, ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ, ವಿನಾಕಾರಣ ಮನೆಯಲ್ಲಿ ಓಡಾಡಬೇಡಿ.

ಪಲ್ಸ್ ಆಕ್ಸಿಮೀಟರ್ ಬಳಕೆ ಮಾಡಿ

ಪಲ್ಸ್ ಆಕ್ಸಿಮೀಟರ್ ಬಳಕೆ ಮಾಡಿ

ಪಲ್ಸ್ ಆಕ್ಸಿಮೀಟರ್ ಬಳಕೆ ಮಾಡಿ, ನಿಮ್ಮ ಉಸಿರಾಟದ ಏರಿಳಿತವನ್ನು ಗಮನಿಸಿ, ಥರ್ಮೋಮೀಟರ್ ಕೂಡ ಮನೆಯಲ್ಲಿರಿಸಿಕೊಳ್ಳುವುದು ಉತ್ತಮ. ಪಲ್ಸ್ ಆಕ್ಸಿಮೀಟರ್‌ನಲ್ಲಿ 45 ಸೆಕೆಂಟುಗಳ ಬೆರಳಿರಿಸಬೇಕು.

ಉಸಿರಾಟದ ತೊಂದರೆ ಇರುವವರು ಅನುಸರಿಸಬೇಕಾದ ಕ್ರಮ

ಉಸಿರಾಟದ ತೊಂದರೆ ಇರುವವರು ಅನುಸರಿಸಬೇಕಾದ ಕ್ರಮ

-30 ನಿಮಿಷಗಳಿಂದ 1 ಗಂಟೆಯ ಕಾಲ ಹೊಟ್ಟೆಯನ್ನು ಕೆಳಭಾಗ ಮಾಡಿ ಮಲಗುವುದು
-30ರಿಂದ 2 ಗಂಟೆಗಳ ಕಾಲ ನಿಮ್ಮ ಬಲಭಾಗಕ್ಕೆ ತಿರುಗಿ ಮಲಗುವುದು
-30 ರಿಂದ 2 ಗಂಟೆಗಳ ಕಾಲ ಕುಳಿತುಕೊಳ್ಳುವುದು
-30 ನಿಮಿಷಗಳಿಂದ 2 ಗಂಟೆಗಳ ಕಾಲ ನಿಮ್ಮ ಎಡ ಭಾಗಕ್ಕೆ ತಿರುಗಿ ಮಲಗುವುದು
-ಕೊನೆಯದಾಗಿ ಮತ್ತೆ ಹೊಟ್ಟೆ ಕೆಳಭಾಗಕ್ಕೆ ಹಾಕಿ ಮಲಗಿಕೊಳ್ಳಬೇಕು

English summary
Covid-19 Testing, Management And Other Useful Information are here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X