ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷಣವಿಲ್ಲದೆ ಕೊರೊನಾ ಸೋಂಕು ಕುಟುಂಬಕ್ಕೆ ಸುಲಭವಾಗಿ ಹರಡಬಲ್ಲದು

|
Google Oneindia Kannada News

ನವದೆಹಲಿ, ಜೂನ್ 19:ಕೊರೊನಾ ಸೋಂಕಿತನಿಗೆ ರೋಗದ ಯಾವುದೇ ಲಕ್ಷಣಗಳಿಲ್ಲದಿದ್ದರೂ ಕುಟುಂಬದಲ್ಲಿ ಒಬ್ಬರಿಂದೊಬ್ಬರಿಗೆ ಸುಲಭವಾಗಿ ಹರಡಬಲ್ಲದು ಎಂಬ ವರದಿ ಲಭ್ಯವಾಗಿದೆ. ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ವ್ಯಕ್ತಿಯಲ್ಲಿ ಕರೊನಾ ಸೋಂಕು ಇರುತ್ತದೆ. ಬಳಿಕ ಆತ ರೋಗಕ್ಕೆ ಒಳಗಾಗುವ ಮುಂಚೆಯೇ ಕುಟುಂಬದಲ್ಲಿಯೂ ವೈರಸ್​ ವೇಗವಾಗಿ ಹರಡಿರುತ್ತದೆ.

Recommended Video

ದಾಖಲೆ ಪ್ರಮಾಣದಲ್ಲಿ ಏರಿಕೆ ಆಯಿತು ಪೆಟ್ರೋಲ್, ಡೀಸೆಲ್ ಬೆಲೆ | Oneindia Kannada

ಸಂಶೋಧಕರು 13 ಮಿಲಿಯನ್​ ಜನರಿರುವ ಚೀನಾದ ಗೌಂಗ್​ಜೌ ನಗರದ 349 ಕೋವಿಡ್​ -19 ರೋಗಿಗಳು ಹಾಗೂ ಅವರ ಸಂಪರ್ಕದಲ್ಲಿದ್ದ 1964 ಮಂದಿಯ ಡೇಟಾವನ್ನು ಅಧ್ಯಯನ ಮಾಡಿದ್ದಾರೆ. ಹೀಗಾಗಿ ಮನೆಯಲ್ಲಿ ಇರುವಾಗಲೂ ಮಾಸ್ಕ್​ ಉಪಯೋಗಿಸುವ ಅತ್ಯಂತ ಸುರಕ್ಷಿತ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಒಟ್ಟಿಗೆ ವಾಸಿಸುವ ಕುಟುಂಬ

ಒಟ್ಟಿಗೆ ವಾಸಿಸುವ ಕುಟುಂಬ

ಈ ಡೇಟಾದಲ್ಲಿ ಒಟ್ಟಿಗೆ ವಾಸ ಮಾಡುವ, ಒಂದೇ ವಿಳಾಸದಲ್ಲಿ ವಾಸವಿರದ ಕುಟುಂಬಗಳು ಮತ್ತು ಸಹ ಕೆಲಸಗಾರರು ಹಾಗೂ ಸ್ನೇಹಿತರನ್ನು ಒಳಗೊಂಡ ಕುಟುಂಬೇತರ ವ್ಯಕ್ತಿಗಳಿದ್ದಾರೆ.

Breaking: ಭಾರತದಲ್ಲಿ ಒಂದೇ ದಿನ 13,586 ಕೊರೊನಾ ಪ್ರಕರಣ ಪತ್ತೆBreaking: ಭಾರತದಲ್ಲಿ ಒಂದೇ ದಿನ 13,586 ಕೊರೊನಾ ಪ್ರಕರಣ ಪತ್ತೆ

ರೋಗಿಯ ಪ್ರಾಥಮಿಕ ಸಂಪರ್ಕ

ರೋಗಿಯ ಪ್ರಾಥಮಿಕ ಸಂಪರ್ಕ

ಅಧ್ಯಯನದಿಂದ ಬಹಿರಂಗವಾಗಿದ್ದೇನೆಂದರೆ ಬಹುತೇಕ ಕುಟುಂಬದವರೇ ಕೊರೊನಾ ರೋಗಿಯ ಸೋಂಕಿನ ಪ್ರಾಥಮಿಕ ಸಂಪರ್ಕವೆಂದು ತಿಳಿದುಬಂದಿದೆ. ಹೆಚ್ಚು ವೈರಸ್​ ಸ್ಪೋಟಗೊಂಡಷ್ಟು ಹೆಚ್ಚು ಸೋಂಕಿತರಾಗುತ್ತಾರೆ. ಅದರ ಪ್ರಭಾವವು ಸಹ ಬಹಳಷ್ಟಿರುತ್ತದೆ.

ಗಾಳಿಯಲ್ಲಿ ಉಸಿರಾಟದ ದ್ರವ

ಗಾಳಿಯಲ್ಲಿ ಉಸಿರಾಟದ ದ್ರವ

ಹೀಗಾಗಿ ದೊಡ್ಡ ಕುಟುಂಬಗಳಾಗಿದ್ದರೆ ಉಸಿರಾಟದ ದ್ರವವು ಗಾಳಿಯಲ್ಲಿ ಹೆಚ್ಚು ಕಾಲ ಉಳಿಯುವುದರಿಂದ ಇತರರಿಗೆ ಬೇಗ ಸೋಂಕು ತಗಲುತ್ತದೆ ಎಂದು ಹೈದರಾಬಾದ್​ನ ಇಂಡಿಯನ್​ ಇನ್ಸ್ಟಿಟ್ಯೂಟ್​ ಆಫ್​ ಪಬ್ಲಿಕ್​ ಹೆಲ್ತ್​ನ ಪ್ರಾಧ್ಯಾಪಕರಾದ ಡಾ. ವಿ ರಮಣ ಧಾರ ತಿಳಿಸಿದ್ದಾರೆ. ಅದರಲ್ಲೂ 60 ವರ್ಷ ವಯಸ್ಸಿನವರಿಗೆ ಹೆಚ್ಚು ಅಪಾಯವಿದೆ ಎಂದು ಅಧ್ಯಯನ ತಿಳಿಸಿದೆ. ಲ್ಯಾನ್ಸೆಟ್​ ಸಾಂಕ್ರಾಮಿಕ ರೋಗ ಜನರ್ಲ್​ನಲ್ಲಿ ಅಧ್ಯಯನದ ವರದಿ ಪ್ರಕಟವಾಗಿದೆ.

ಸರಿಯಾದ ಸಮಯಕ್ಕೆ ಪತ್ತೆ ಹಚ್ಚಬೇಕು

ಸರಿಯಾದ ಸಮಯಕ್ಕೆ ಪತ್ತೆ ಹಚ್ಚಬೇಕು

ಸೋಂಕು ಕುಟುಂಬದೊಳಗೆ ಪ್ರಸರಣವಾಗುವ ಸರಪಳಿಯನ್ನು ಸರಿಯಾದ ಸಮಯಕ್ಕೆ ಪತ್ತೆಹಚ್ಚಿ, ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್​ ಮಾಡುವ ಮೂಲಕ ಹೊಸ ವೈರಸ್​ ಹುಟ್ಟನ್ನು ತಡೆಯಬಹುದೆಂದು ಅಧ್ಯಯನದಲ್ಲಿ ಸಲಹೆ ನೀಡಲಾಗಿದೆ.

English summary
The coronavirus disease (Covid-19) spreads easily among people living together even when an infected person is presymptomatic or asymptomatic, according to the first global estimates quantifying symptomless transmission of the infectious disease within homes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X