2 ತಿಂಗಳಲ್ಲಿ ಆಸ್ಟ್ರಾಜೆನೆಕಾ ಕೊರೊನಾ ಲಸಿಕೆ ಅಂತಿಮ ಪ್ರಯೋಗದ ವರದಿ
ನವದೆಹಲಿ, ಅಕ್ಟೋಬರ್ 14: ಆಕ್ಸ್‌ಫರ್ಡ್‌ನ ಆಸ್ಟ್ರಾಜೆನೆಕಾ ಕೊರೊನಾ ಲಸಿಕೆಯ ಮೂರನೇ ಹಂತದ ಪ್ರಯೋಗದ ಫಲಿತಾಂಶ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಲಭ್ಯವಾಗಲಿದೆ.
ಕೊವಿಡ್ ಲಸಿಕೆ ತಯಾರಿಕೆಲ್ಲಿ ಮುಂಚೂಣಿಯಲ್ಲಿರುವ ಸೆರಂ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಅಂದುಕೊಂಡದ್ದಕ್ಕಿಂತಲೂ ಬೇಗ ಕೈ ಸೇರಲಿದೆ.
ಮುಂದಿನ ದಿನಗಳಲ್ಲಿ ಹಬ್ಬಗಳು ಹೆಚ್ಚರುವುದರಿಂದ ಹೆಚ್ಚು ಮಂದಿ ಸೇರುವುದನ್ನು ಕಡಿಮೆ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ, ಪದೇ ಪದೇ ಕೈ ತೊಳೆಯಿರಿ ಎಂದು ಹೇಳಿದೆ.

ನೀತಿ ಯೋಗದ ಸದಸ್ಯ ಡಾ. ವಿಕೆ ಪಾಲ್ ಹೇಳುವಂತೆ ಲಸಿಕೆ ತಯಾರಕರು ಕ್ಲಿನಿಕಲ್ ಟ್ರಯಲ್‌ನಲ್ಲಿ ಉತ್ತಮ ಪ್ರಯೋಗ ಮಾಡುತ್ತಿದ್ದಾರೆ. ಭಾರತ್ ಬಯೋಟೆಕ್ ಹಾಗೂ ಕ್ಯಾಡಿಲ್ಲಾ ಹೆಲ್ತ್ ಕೇರ್‌ನ ಲಸಿಕೆಗಳ ಪ್ರಯೋಗದ ವರದಿ ನವೆಂಬರ್ ಆರಂಭದಲ್ಲಿ ಲಭ್ಯವಾಗಲಿದೆ.
ಚಳಿಗಾಲದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಬಹುದು ಎಂದು ನೀತಿ ಆಯೋಗ ಎಚ್ಚರಿಕೆ ನೀಡಿದೆ. ದೇಶದಲ್ಲಿ ಚಳಿಗಾಲದಲ್ಲಿ ಕೊರೊನಾದ ಎರಡನೇ ಅಲೆ ಆರಂಭವಾಗಲಿದೆ ಎಂದು ಹೇಳಿದೆ.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಡಾ. ಪೌಲ್ ಮಾತನಾಡಿ, ಯುರೋಪ್ ಹಾಗೂ ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಎರಡನೇ ಅಲೆ ಆರಂಭವಾಗಿದೆ.
ಉಸಿರಾಟದ ವೈರಸ್ ಚಳಿಗಾಲದಲ್ಲಿ ಅದು ಅಭಿವೃದ್ಧಿ ಹೊಂದುತ್ತದೆ. SARS-Cov-2 ಉಸಿರಾಟದ ವೈರಸ್ ಆಗಿರುವುದರಿಂದ, ಚಳಿಗಾಲದಲ್ಲಿ ಅದರ ಸಾಂಕ್ರಾಮಿಕತೆ ಹೆಚ್ಚಾಗುತ್ತದೆ . ಇನ್ಫ್ಲುಯೆನ್ಸ ವೈರಸ್‌ನ ಸಾಂಕ್ರಾಮಿಕ ರೋಗಗಳ ಅಧ್ಯಯನವು ಚಳಿಗಾಲದ ಹಂತಗಳಲ್ಲಿ ಪ್ರಕರಣಗಳು ಹೆಚ್ಚಾಗಲಿದೆ ಎಂದು ಹೇಳಿದೆ.












Click it and Unblock the Notifications