ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಭಾರತದ ಎಲ್ಲಾ ಆಸ್ಪತ್ರೆಗಳಲ್ಲಿ ಅಣುಕು ಪ್ರಯೋಗ

|
Google Oneindia Kannada News

ನವದೆಹಲಿ, ಡಿಸೆಂಬರ್ 26: ಚೀನಾ ಮತ್ತು ವಿಶ್ವದ ಇತರ ಭಾಗಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಮಧ್ಯೆ, ಮಂಗಳವಾರ ಅಂದರೆ ಡಿಸೆಂಬರ್ 27ರಂದು ದೇಶಾದ್ಯಂತ ಆಸ್ಪತ್ರೆಗಳಲ್ಲಿ ತುರ್ತು ಪ್ರತಿಕ್ರಿಯೆಗಾಗಿ ಅಣಕು ಪ್ರಯೋಗವನ್ನು ನಡೆಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.

"ಮಂಗಳವಾರ ಎಲ್ಲಾ ಕೋವಿಡ್ ಆಸ್ಪತ್ರೆಗಳಲ್ಲಿ ದೇಶಾದ್ಯಂತ ಅಣಕು ಡ್ರಿಲ್ ಅನ್ನು ನಡೆಸಲಾಗುತ್ತದೆ. ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರು ಕೂಡ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ," ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.

Corona BF.7 ಸೋಂಕು ವ್ಯಾಪಿಸುತ್ತಿರುವ ಈ 8 ದೇಶಗಳಿಗೆ ತೆರಳದಂತೆ ಸೂಚನೆ, ಆ ದೇಶಗಳ ಬಗ್ಗೆ ತಿಳಿಯಿರಿCorona BF.7 ಸೋಂಕು ವ್ಯಾಪಿಸುತ್ತಿರುವ ಈ 8 ದೇಶಗಳಿಗೆ ತೆರಳದಂತೆ ಸೂಚನೆ, ಆ ದೇಶಗಳ ಬಗ್ಗೆ ತಿಳಿಯಿರಿ

ಆಮ್ಲಜನಕ ಸ್ಥಾವರಗಳು, ವೆಂಟಿಲೇಟರ್‌ಗಳು, ಲಾಜಿಸ್ಟಿಕ್ಸ್ ಮತ್ತು ಮಾನವ ಸಂಪನ್ಮೂಲಗಳ ಮೇಲೆ ನಿರ್ದಿಷ್ಟವಾಗಿ ಗಮನಹರಿಸುವುದರೊಂದಿಗೆ ಕೋವಿಡ್-19 ಸೌಲಭ್ಯಗಳ ಕಾರ್ಯಾಚರಣೆಯ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಅಣಕು ನಡೆಯಲಿದೆ.

Covid-19 News: Mock Drills To Be Conducted At All Government Hospitals in India at Dec 26th

ಕಣ್ಗಾವಲು ಕಾರ್ಯತಂತ್ರ:

ದೇಶದಲ್ಲಿ ಈ ಹಿಂದೆ ಹೊರಡಿಸಲಾದ ಕಾರ್ಯತಂತ್ರಕ್ಕೆ ಅನುಸಾರವಾಗಿ ಕಣ್ಗಾವಲು ಬಲಪಡಿಸಲು ರಾಜ್ಯಗಳನ್ನು ಕೇಳಲಾಗಿತ್ತು. ಈ ಹಂತದಲ್ಲಿ ಆರೋಗ್ಯ ಸೌಲಭ್ಯ-ಆಧಾರಿತ ಸೆಂಟಿನೆಲ್ ಕಣ್ಗಾವಲು; ಪ್ಯಾನ್-ರೆಸ್ಪಿರೇಟರಿ ವೈರಸ್ ಕಣ್ಗಾವಲು; ಸಮುದಾಯ ಆಧಾರಿತ ಕಣ್ಗಾವಲು, ಒಳಚರಂಡಿ / ತ್ಯಾಜ್ಯನೀರಿನ ಕಣ್ಗಾವಲು ಬಲಪಡಿಸುವುದಕ್ಕೆ ಸೂಚಿಸಲಾಗಿದೆ.

ಪ್ರಧಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ:

ಕಳೆದ ವಾರ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವಹಿಸಿದ್ದರು. ಕೋವಿಡ್-19 ಸಂಬಂದಿಸಿದಂತೆ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯ ಸ್ಥಿತಿ ಮತ್ತು ಸನ್ನದ್ಧತೆಯನ್ನು ಪರಿಶೀಲಿಸಿದರು. ಜೀನೋಮ್ ಅನುಕ್ರಮ ಮತ್ತು ಹೆಚ್ಚಿದ ಪರೀಕ್ಷೆಯ ಮೇಲೆ ಕೇಂದ್ರೀಕರಿಸುವ ಮೂಲಕ ಬಲವರ್ಧಿತ ಕಣ್ಗಾವಲು ಅಗತ್ಯವನ್ನು ಒತ್ತಿ ಹೇಳಿದರು.

ಈ ಉನ್ನತ ಮಟ್ಟದ ಪರಿಶೀಲನಾ ಸಭೆಯು ಕೆಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳ ಕಾರ್ಯಾಲಯವು ತಿಳಿಸಿದೆ.

English summary
Covid-19 News: Mock Drills To Be Conducted At All Government Hospitals in India at Dec 26th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X