ಪತ್ರಕರ್ತನ ಹತ್ಯೆ ಕೇಸ್: ರಾಮ್ ರಹೀಮ್ ಗೆ ಎಷ್ಟು ವರ್ಷ ಶಿಕ್ಷೆ?

ಸಿರ್ಸಾ, ಜನವರಿ 17: ಪತ್ರಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ನನ್ನು ಪಂಚಕುಳ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ್ದು, ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

ರಾಮ್ ರಹೀಮ್ ನನ್ನು ಜ.11 ರಂದು ಹರ್ಯಾಣದ ಪಂಚಕುಳ ನ್ಯಾಯಲಯ ದೋಷಿ ಎಂದು ಪರಿಗಣಿಸಿ, ಶಿಕ್ಷೆಯ ಪ್ರಮಾಣವನ್ನು ಜ.17 ರಂದು ಪ್ರಕಟಿಸುವುದಾಗಿ ಹೇಳಿತ್ತು. ರಾಮ್ ರಹೀಮ್ ಒಟ್ಟಿಗೆ ಮೂವರನ್ನೂ ದೋಷಿ ಎಂದು ಪರಿಗಣಿಸಿದೆ.

ಪತ್ರಕರ್ತ ರಾಮಚಂದ್ರ ಛತ್ರಪತಿ ಎಂಬುವವರನ್ನು ಪಿತೂರಿ ಮಾಡಿ ಕೊಲೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಾಮ್ ರಹೀಮ್ ಈಗಾಗಲೇ ಇಪ್ಪತ್ತು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

Court to pronounce quantum of sentence to Ram Rahim in journalist murder case

ತೀರ್ಪಿನ ನಿಮಿತ್ತ ಇಂದು ಹರ್ಯಾಣದ ಸಿರ್ಸಾ ಮತ್ತು ಪಂಚಕುಳದಲ್ಲಿ ಬಿಗಿಬಂದೋಬಸ್ತ್ ನಿಯೋಜಿಸಲಾಗಿತ್ತು. 51 ವರ್ಷ ವಯಸ್ಸಿನ ರಾಮ್ ರಹೀಮ್ ಸದ್ಯಕ್ಕೆ ರೋಹ್ಟಕ್ ನ ಸುನಾರಿಯಾ ಜೈಲಿನಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಡೇರಾ ಸಚ್ಛಾ ಸೌಧ ಆಶ್ರಮಗಳಲ್ಲಿ ಪುರುಷತ್ವ ಹರಣ ಮಾಡಲಾಗುತ್ತಿದೆ ಎಂಬ ಆರೋಪ ಹೊರೆಸಿ ಹಾಕಲಾಗಿದ್ದ ಪ್ರಕರಣ(castration case) ದಲ್ಲಿಇತ್ತೀಚೆಗೆ ರಾಮ್ ರಹೀಮ್ ಗೆ ಜಾಮೀನು ಸಿಕ್ಕಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+