ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಹಣ ವರ್ಗಾವಣೆ ಪ್ರಕರಣ: ಕೋರಿಕೆಯಂತೆ ಸತ್ಯೇಂದ್ರ ಜೈನ್‌ಗೆ ಆಹಾರ ನೀಡಲು ಸೂಚನೆ

|
Google Oneindia Kannada News

ನವದೆಹಲಿ, ನವೆಂಬರ್ 23: ಜೈಲಿನಲ್ಲಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರು ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿ ಸರಿಯಾದ ಆಹಾರ ಪಡೆಯಲು ಅರ್ಹರು ಎಂದು ಸಿಟಿ ಕೋರ್ಟ್ ಇಂದು ಹೇಳಿದೆ. ಈ ವಿಚಾರದಲ್ಲಿ ತೀರ್ಮಾನವಾಗುವವರೆಗೆ ಇದೇ ವ್ಯವಸ್ಥೆ ಮುಂದುವರಿಯಲಿದೆ ಎಂದು ನ್ಯಾಯಾಲಯ ಹೇಳಿದೆ.

ಜೈನ್ ಅವರು ತಮ್ಮ ಧರ್ಮದ ಪ್ರಕಾರ ಆಹಾರವನ್ನು ನೀಡುತ್ತಿಲ್ಲ ಮತ್ತು ಜೈಲು ಆಡಳಿತವು ನಿರ್ಬಂಧಗಳನ್ನು ಹೇರುತ್ತಿದೆ ಎಂದು ನ್ಯಾಯಾಲಯಕ್ಕೆ ದೂರು ನೀಡಿದ್ದರು. ಸತ್ಯೇಂದ್ರ ದೂರಿನ ವಿಚಾರಣೆ ಬಳಿಕ ನ್ಯಾಯಾಲಯ ಈ ಆದೇಶವನ್ನು ನೀಡಿದೆ.

ಜೈನ್ ಅವರು ದೇವಸ್ಥಾನಕ್ಕೆ ಹೋದ ನಂತರವೇ ಊಟ ಮಾಡುತ್ತಾರೆ. ಆದರೆ ಜೈಲಿನಲ್ಲಿರುವ ಕಾರಣ ಅವರಿಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಳೆದ ಐದು ತಿಂಗಳಿನಿಂದ ಅವರು ಹಣ್ಣುಗಳನ್ನು ಮಾತ್ರ ತಿನ್ನುತ್ತಿದ್ದಾರೆ ಎಂದು ಅವರ ವಕೀಲರು ಕೋರ್ಟ್ ಮುಂದೆ ಹೇಳಿದ್ದಾರೆ. ವಿಚಾರಣೆ ಬಳಿಕ ಸತ್ಯೇಂದ್ರ ಜೈನ್ ಕೋರಿಕೆಯಂತೆ ಆಹಾರ ನೀಡಲು ಸೂಚನೆ ನೀಡಿದೆ. ಜೊತೆಗೆ ಮುಂದಿನ ಆದೇಶದವರೆಗೂ ಇದನ್ನು ಮುಂದುವರೆಸಲು ಸೂಚಿಸಿದೆ.

Court agrees to give food as Satyendra Jain requested

ಆಗಸ್ಟ್ 24, 2017 ರಂದು ಸಿಬಿಐ ದಾಖಲಿಸಿದ ಪ್ರಥಮ ಮಾಹಿತಿ ವರದಿ ಅಥವಾ ಎಫ್‌ಐಆರ್ ಆಧಾರದ ಮೇಲೆ ತನಿಖಾ ಸಂಸ್ಥೆಯು ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯ ತನಿಖೆಯನ್ನು ಆರಂಭಿಸಿತ್ತು. ಈ ವೇಳೆ 58 ವರ್ಷದ ದೆಹಲಿ ಸಚಿವ ಸತ್ಯೇಂದ್ರ ಜೈನ್ ರನ್ನು ಜಾರಿ ನಿರ್ದೇಶನಾಲಯ ಮೇ 30 ರಂದು ಬಂಧಿಸಿತ್ತು.

ಜೈನ್ ಜೈಲಿನಲ್ಲಿ ಐಷಾರಾಮಿ ಜೀವನಶೈಲಿಯನ್ನು ಆನಂದಿಸುತ್ತಿದ್ದಾರೆ ಮತ್ತು ಪ್ರಕರಣದ ಸಹ-ಆರೋಪಿಗಳನ್ನು ನಿಯಮಿತವಾಗಿ ಭೇಟಿ ಮಾಡುವ ಮೂಲಕ ತನಿಖೆಯ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಲ್ಲಿಸಿದೆ. ಸತ್ಯೇಂದ್ರ ಜೈನ್ ಅವರ ಪತ್ನಿ ಪೂನಂ ಜೈನ್ ಅವರೂ ಸೆಲ್‌ಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು,.ಇದು ಜೈಲು ನಿಯಮಗಳಿಗೆ ವಿರುದ್ಧವಾಗಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ಆರೋಪದ ಗಂಭೀರತೆಯ ದೃಷ್ಟಿಯಿಂದ ಜೈನ್ ಅವರ ಜಾಮೀನು ಅರ್ಜಿಯನ್ನು ನವೆಂಬರ್ 18 ಹಾಗೂ ಜೂನ್‌ನಲ್ಲಿ ಎರಡು ಬಾರಿ ತಿರಸ್ಕರಿಸಲಾಗಿದೆ.

Court agrees to give food as Satyendra Jain requested

ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ಹಳೆಯ ವಿಡಿಯೋವನ್ನು ಬಿಜೆಪಿ ಕಳೆದ ಶನಿವಾರ ಬಿಡುಗಡೆ ಮಾಡಿತ್ತು. ತಿಹಾರ್ ಜೈಲಿನ ಮೂಲಗಳ ಪ್ರಕಾರ, ವಿಡಿಯೋ ಹಳೆಯದು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜೈಲು ಸಿಬ್ಬಂದಿ ವಿರುದ್ಧ ಜೈಲು ಅಧಿಕಾರಿಗಳು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಸತ್ಯೇಂದ್ರ ಜೈನ್‌ಗೆ ತಿಹಾರ್ ಜೈಲಿನಲ್ಲಿ ವಿಐಪಿ ಚಿಕಿತ್ಸೆ ನೀಡಲಾಗುತ್ತಿದ್ದು, ತಲೆ ಮಸಾಜ್, ಪಾದ ಮಸಾಜ್ ಮತ್ತು ಬೆನ್ನಿನ ಮಸಾಜ್‌ನಂತಹ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿತ್ತು. ಈ ವಿಡಿಯೋವನ್ನು ಬಿಜೆಪಿ ಮೊನ್ನೆಯಷ್ಟೇ ಮತ್ತೆ ಹಂಚಿಕೊಂಡಿತ್ತು.

English summary
Jailed Delhi Minister Satyendra Jain will be directed to get food according to his religious beliefs, the City Court said today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X