ಭಾರತ ಎಲ್ಲಾ ಗೌರವ ಕಳೆದುಕೊಳ್ಳುತ್ತಿದೆ; ರಾಹುಲ್ ಗಾಂಧಿ
ನವದೆಹಲಿ, ಜುಲೈ 15 : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಗಳ ಕುರಿತು ಟೀಕಿಸಿದ್ದಾರೆ. "ದೇಶ ಎಲ್ಲಾ ಕಡೆ ಅಧಿಕಾರ ಮತ್ತು ಗೌರವವನ್ನು ಕಳೆದುಕೊಳ್ಳುತ್ತಿದೆ" ಎಂದು ಅವರು ಆರೋಪಿಸಿದ್ದಾರೆ.
Recommended Video
ಬುಧವಾರ ರಾಹುಲ್ ಗಾಂಧಿ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ. "ಸರ್ಕಾರ ಮುಂದೇನು ಮಾಡಬೇಕು? ಎಂದು ತಿಳಿಯದ ಸ್ಥಿತಿಯಲ್ಲಿದೆ" ಎಂದು ದೂರಿದ್ದಾರೆ.
"ಇರಾನ್ ಛಬಾರ್ ಬಂದರು ರೈಲು ಯೋಜನೆಯಿಂದ ಭಾರತವನ್ನು ಕೈಬಿಟ್ಟಿದೆ. ಭಾರತ ಹಣ ಒದಗಿಸಲು ತಡ ಮಾಡುತ್ತಿರುವುದು ಇದಕ್ಕೆ ಕಾರಣ" ಎಂದು ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸಿರುವ ರಾಹುಲ್ ಗಾಂಧಿ, ಸರ್ಕಾರದ ನೀತಿಗಳು ವಿಫಲವಾಗಿದೆ ಎಂದು ತಿಳಿಸಿದ್ದಾರೆ.
ಒಮನ್ ಕೊಲ್ಲಿಯಲ್ಲಿ ಭಾರತ ಮತ್ತು ಇರಾನ್ ಜಂಟಿಯಾಗಿ ನಿರ್ಮಿಸಿರುವ ಬಂದರು 'ಛಬಾರ್'. ಬಂದರಿನ ಮೊದಲ ಹಂತವನ್ನು ಈಗಾಗಲೇ ಉದ್ಘಾಟಿಸಲಾಗಿದೆ. ಇದರಿಂದಾಗಿ ಪಾಕಿಸ್ತಾನ ಗಡಿಯನ್ನು ಪ್ರವೇಶ ಮಾಡದೇ ಇರಾನ್ ಸೇರಿದಂತೆ ಕೇಂದ್ರ ಏಷ್ಯಾದ ದೇಶಗಳೊಂದಿಗೆ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗಿದೆ.
India’s global strategy is in tatters. We are losing power and respect everywhere and GOI has no idea what to do.https://t.co/rEMuMnJhOx
— Rahul Gandhi (@RahulGandhi) July 15, 2020












Click it and Unblock the Notifications