ಆಂಧ್ರ ಕೌನ್ಸಿಲರ್ ಸಭೆಯಲ್ಲಿ ಚಪ್ಪಲಿಯಿಂದ ಕಪಾಳಮೋಕ್ಷ ಮಾಡಿಕೊಂಡ ಕೌನ್ಸಿಲರ್!
ಅನಕಾಪಲ್ಲಿ ಆಗಸ್ಟ್ 1: ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸದ ಕಾರಣಕ್ಕೆ ಅನಕಪಲ್ಲಿ ಜಿಲ್ಲೆಯ ಕೌನ್ಸಿಲರ್‌ಯೊಬ್ಬರು ಸೋಮವಾರ ಚಪ್ಪಲಿಯಿಂದ ಹೊಡೆದುಕೊಂಡಿದ್ದಾರೆ. ನರಸೀಪಟ್ಟಣ ಪುರಸಭೆಯ (ವಾರ್ಡ್ 20) ಕೌನ್ಸಿಲರ್ ಮುಲಪರ್ತಿ ರಾಮರಾಜು ಕೌನ್ಸಿಲ್ ಸಭೆಯಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಲಿಕೆ ಸದಸ್ಯನಾಗಿ ಆಯ್ಕೆಯಾಗಿ 31 ತಿಂಗಳು ಕಳೆದರೂ ನನ್ನ ವಾರ್ಡ್‌ನಲ್ಲಿನ ಒಳಚರಂಡಿ, ವಿದ್ಯುತ್, ನೈರ್ಮಲ್ಯ, ರಸ್ತೆ ಮತ್ತಿತರ ನಾಗರಿಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಮರಾಜು ಅವರು ತಮ್ಮ ಕಪಾಳಮೋಕ್ಷಕ್ಕೆ ಕಾರಣ ವಿವರಿಸಿದರು.

ಆಟೋರಿಕ್ಷಾ ಓಡಿಸುವ ಮೂಲಕ ಜೀವನ ಸಾಗಿಸುತ್ತಿರುವ 40 ವರ್ಷ ವಯಸ್ಸಿನ ಕೌನ್ಸಿಲರ್ ಅವರು ಎಲ್ಲಾ ಆಯ್ಕೆಗಳನ್ನು ಪ್ರಯತ್ನಿಸಿದರು. ಆದರೆ ಮತದಾರರಿಗೆ ನೀಡಿದ ಭರವಸೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡು ಅಸಮಧಾನಗೊಂಡರು.
తెలుగుదేశం పార్టీ తరపున గెలిచిన లింగాపురం గ్రామ గిరిజన ప్రజాప్రతినిధి ఆయన. పదవిలో ఉండి కూడా 30 నెలలుగా గ్రామంలో ఒక్క కుళాయి కూడా వేయించలేకపోయానని... దీనికంటే చచ్చిపోవడం నయమని కౌన్సిలర్ల సమావేశంలో కన్నీరు పెట్టుకుని, చెప్పుతో కొట్టుకున్నారాయన.#AndhraPradesh #NalugellaNarakam… pic.twitter.com/u6k4E5KXZy
— Telugu Desam Party (@JaiTDP) July 31, 2023
ಸ್ಥಳೀಯ ಪುರಸಭೆ ಅಧಿಕಾರಿಗಳು 20ನೇ ವಾರ್ಡ್ ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಅವರು ಆರೋಪಿಸಿದರು. ಅವರ ಯಾವುದೇ ಮತದಾರರಿಗೆ ನೀರಿನ ಸಂಪರ್ಕವನ್ನು ಸಹ ಕೊಡಿಸಲು ಸಾಧ್ಯವಾಗಲಿಲ್ಲ. ಈಡೇರದ ಭರವಸೆಗಳನ್ನು ಪೌರಕಾರ್ಮಿಕರು, ಮತದಾರರು ಈಡೇರಿಸುವಂತೆ ಒತ್ತಾಯಿಸುತ್ತಿದ್ದು, ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದೆ ಕೌನ್ಸಿಲ್ ಸಭೆಯಲ್ಲಿ ಸಾಯುವುದೇ ಲೇಸು ಎಂದು ರಾಮರಾಜು ಹೇಳಿ ಬೇಸರಗೊಂಡಿದ್ದಾರೆ.












Click it and Unblock the Notifications