ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Lockdown ಸಂದರ್ಭದಲ್ಲಿ ಏನೇನು Open ಇರುತ್ತೆ?

|
Google Oneindia Kannada News

ನವದೆಹಲಿ, ಮಾರ್ಚ್ 22: ಕೊರೊನಾವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಠಿಣ ಕ್ರಮಗಳನ್ನು ಅನುಸರಿಸುವ ಪರಿಸ್ಥಿತಿ ಎದುರಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆಗೆ ಓಗೊಟ್ಟು ಜನತಾ ಕರ್ಫ್ಯೂ ಆಚರಿಸಿದ ಜನತೆ ಈಗ ಲಾಕ್ ಡೌನ್ ಪರಿಸ್ಥಿತಿಗೆ ಹೊಂದಿಕೊಳ್ಳಬೇಕ್ದೆ. ಮಾರ್ಚ್ 22ರಂದು ಇಡೀ ಭಾರತದಲ್ಲಿ ಸ್ವಯಂಪ್ರೇರಿತ ಕರ್ಫ್ಯೂ ಆಚರಿಸಲಾಯಿತು. ಈ ನಡುವೆ ಕರ್ನಾಟಕದ 9 ಜಿಲ್ಲೆಗಳು ಸೇರಿದಂತೆ ದೇಶದ 75 ಜಿಲ್ಲೆಗಳನ್ನು ಲಾಕ್ ಡೌನ್ ಮಾಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.

ಖಾಸಗಿ ಲ್ಯಾಬ್ ಗಳಲ್ಲೂ ಪರೀಕ್ಷೆಗೆ ಅನುಮತಿ ನೀಡಲಾಗಿದೆ. ಐಸೋಲೇಷನ್ ತುಂಬಾ ಮುಖ್ಯ, ಒಂದು ವಾರದಲ್ಲಿ 50 ಸಾವಿರ ಸ್ಯಾಂಪಲ್ ಪರೀಕ್ಷೆಗೊಳಪಡಿಸಬಹುದು. ಕಳೆದ ವಾರ 5 ಸಾವಿರ, ಒಟ್ಟು 15 ಸಾವಿರ ಸ್ಯಾಂಪಲ್ ಪರೀಕ್ಷಿಸಲಾಗಿದೆ. ಸೋಂಕಿತ ಹಾಗೂ ಪಾಸಿಟಿವ್, ಮೃತರಾದ ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲು ಸೂಚಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ.

ಬ್ರೇಕಿಂಗ್: ಕರ್ನಾಟಕದ 9 ಜಿಲ್ಲೆಗಳು ಸೇರಿ ಭಾರತದ 75 ಜಿಲ್ಲೆಗಳ ಲಾಕ್!ಬ್ರೇಕಿಂಗ್: ಕರ್ನಾಟಕದ 9 ಜಿಲ್ಲೆಗಳು ಸೇರಿ ಭಾರತದ 75 ಜಿಲ್ಲೆಗಳ ಲಾಕ್!

ಇನ್ನು, ದೇಶದ 75 ಜಿಲ್ಲೆಗಳನ್ನು ಲಾಕ್ ಡೌನ್ ಮಾಡುವ ನಿಟ್ಟಿನಲ್ಲಿ ಆದೇಶವನ್ನು ಹೊರಡಿಸಲಾಗಿದೆ. ಆದರೆ, ಅಗತ್ಯ ವಸ್ತುಗಳಾದ ಹಣ್ಣು-ತರಕಾರಿ, ಮೆಡಿಕಲ್ ಶಾಪ್, ಪೆಟ್ರೋಲ್-ಡೀಸೆಲ್, ಹೋಟೆಲ್ ಹಾಗೂ ಆಹಾರ ಸಾಮಗ್ರಿಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಏನೇನು ಲಭ್ಯವಿರಲಿದೆ?

ಏನೇನು ಲಭ್ಯವಿರಲಿದೆ?

* ದಿನಸಿ, ಹಾಲು, ಹಣ್ಣು, ತರಕಾರಿ ಅಂಗಡಿ
* ಅಡುಗೆ ಅನಿಲ ಪೂರೈಕೆ
* ಟೆಲಿಕಾಂ ಸೇವೆ.
* ಇ ಕಾರ್ಮ್, ಡಿಜಿಟಲ್ ಬ್ಯಾಂಕಿಂಗ್
* ಬ್ಯಾಂಕ್ ಹಾಗೂ ಎಟಿಎಂ
* ಆಸ್ಪತ್ರೆ ಹಾಗೂ ಔಷಧಿ ಮಳಿಗೆ
* ಸಾರ್ವಜನಿಕ ಸಾರಿಗೆ ವ್ಯವಸ್ಥೆ
* ಪೆಟ್ರೋಲ್, ಡೀಸೆಲ್
* ಮಾಸ್ಕ್ ಹಾಗೂ ಸ್ಯಾನಿಟೈಸರ್ ಮಾರಾಟ
* ಅಂಚೆ ಕಚೇರಿ, ಸರ್ಕಾರಿ ಕಚೇರಿ
* ಆರೋಗ್ಯ ಇಲಾಖೆ ಸಹಾಯಕೇಂದ್ರ

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ

ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ

ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 370 ದಾಟಿದೆ. ಗುಜರಾತ್, ತಮಿಳುನಾಡು, ತೆಲಂಗಾಣ, ಕೇರಳ, ಕರ್ನಾಟಕ ಇನ್ನಿತರ ಕಡೆಗಳಲ್ಲಿ ಹೊಸದಾಗಿ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಮೃತರ ಸಂಖ್ಯೆ 8ಕ್ಕೆರಿದೆ. ಸೂರತ್ ನಲ್ಲಿ 69 ವಯಸ್ಸಿನ ವೃದ್ಧರೊಬ್ಬರು ಕೊವಿಡ್19ನಿಂದ ಮೃತಪಟ್ಟಿದ್ದಾರೆ.

ಕೊರೊನಾ ನಿಗ್ರಹಕ್ಕೆ ರಾಜ್ಯ ಸರ್ಕಾರ ತೆಗೆದುಕೊಂಡ ತುರ್ತು ನಿರ್ಧಾರಗಳ ಪಟ್ಟಿಕೊರೊನಾ ನಿಗ್ರಹಕ್ಕೆ ರಾಜ್ಯ ಸರ್ಕಾರ ತೆಗೆದುಕೊಂಡ ತುರ್ತು ನಿರ್ಧಾರಗಳ ಪಟ್ಟಿ

ಲಾಕ್ ಡೌನ್ ಆಗಲಿರುವ ಜಿಲ್ಲೆಗಳು

ಲಾಕ್ ಡೌನ್ ಆಗಲಿರುವ ಜಿಲ್ಲೆಗಳು

ರಾಜಸ್ಥಾನ: ಬಿಲ್ವಾರಾ, ಝೂಂಜುನು, ಸಿಕಾರ್ ಹಾಗೂ ಜೈಪುರ
ತಮಿಳನಾಡು: ಚೆನ್ನೈ, ಈರೋಡ್ ಹಾಗೂ ಕಾಂಚಿಪುರಂ
ತೆಲಂಗಾಣ: ಭದ್ರಾದ್ರಿ ಕೊಥಗುಡಂ, ಹೈದರಾಬಾದ್,ಮೆದಾಚಾಯಿ, ರಂಗಾರೆಡ್ಡಿ ಹಾಗೂ ಸಂಗಾರೆಡ್ಡಿ
ಉತ್ತರಪ್ರದೇಶ: ಆಗ್ರಾ, ಜಿಬಿ ನಗರ, ಗಾಜಿಯಾಬಾದ್, ವಾರಣಾಸಿ, ಲಖೀಂಪುರ್ ಖೇರಿ ಹಾಗೂ ಲಕ್ನೋ
ಉತ್ತರಾಖಂಡ್: ಡೆಹ್ರಾಡೂನ್
ಪಶ್ಚಿಮ ಬಂಗಾಳ: ಕೋಲ್ಕತ್ತಾ ಹಾಗೂ ನಾರ್ಥ್ 24 ಪರಾಗಣ
ಕರ್ನಾಟಕ: ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮೈಸೂರು, ಕೊಡಗು, ಕಲಬುರಗಿ, ಧಾರವಾಡ, ದಕ್ಷಿಣ ಕನ್ನಡ ಹಾಗೂ ಬೆಳಗಾವಿ
ಕೇರಳ: ಆಳಪ್ಪುಳ, ಎರ್ನಾಕುಲಂ, ಇಡುಕ್ಕಿ, ಕಣ್ಣೂರು, ಕಾಸರಗೋಡು, ಕೊಟ್ಟಾಯಂ, ಮಲ್ಲಪುರಂ, ಪಥನಮಿಟ್ಟ, ತಿರುವನಂತಪುರಂ ಹಾಗೂ ತ್ರಿಸ್ಸೂರ್.
ಲಡಾಕ್: ಕಾರ್ಗಿಲ್ ಹಾಗೂ ಲೇಹ್
ಮಧ್ಯಪ್ರದೇಶ: ಜಬಲ್ ಪುರ್
ಮಹಾರಾಷ್ಟ್ರ: ಅಹಮದ್ ನಗರ್, ಔರಂಗಾಬಾದ್, ಮುಂಬೈ ಸಬ್ ಅರ್ಬ್, ಪುಣೆ, ರತ್ನಗಿರಿ, ರಾಯ್ ಗಢ, ಥಾಣೆ, ಯಾವತ್ಮಾಲ್
ಒಡಿಶಾ: ಖುರ್ದಾ
ಪುದುಚೇರಿ: ಮಾಹೆ
ಪಂಜಾಬ್: ಹೋಸಿಯಾರ್ ಪುರ್, ಎಸ್ಎಎಸ್ ನಗರ್, ಎಸ್ ಬಿಎಸ್ ನಗರ
ಆಂಧ್ರಪ್ರದೇಶ: ಪ್ರಕಾಶಂ, ವಿಜಯವಾಡ, ವೈಜಾಗ್
ಚಂದೀಗಢ: ಚಂದೀಗಢ ನಗರ
ಚತ್ತೀಸ್ ಗಢ: ರಾಯ್ ಪುರ್
ದೆಹಲಿ: ಸೆಂಟ್ರಲ್, ಪೂರ್ವ ದೆಹಲಿ, ಉತ್ತರ ದೆಹಲಿ, ಈಶಾನ್ಯ, ದಕ್ಷಿಣ, ಪಶ್ಚಿಮ ದೆಹಲಿ
ಗುಜರಾತ್: ಕಛ್, ರಾಜ್ ಕೋಟ್, ಗಾಂಧಿನಗರ, ಸೂರತ್, ವಡೋದರಾ ಹಾಗೂ ಅಹಮದಾಬಾದ್
ಹರ್ಯಾಣ: ಫರಿದಾಬಾದ್, ಸೋನೇಪೇಟೆ, ಪಂಚಕುಲ, ಪಾಣಿಪಟ್
ಹಿಮಾಚಲಪ್ರದೇಶ: ಕಾಂಗ್ರಾ
ಜಮ್ಮು ಮತ್ತು ಕಾಶ್ಮೀರ: ಶ್ರೀನಗರ ಹಾಗೂ ಜಮ್ಮು

ಮೂರು ದಿನ 15 ಜಿಲ್ಲೆಗಳು ಸ್ತಬ್ಧ; ಉತ್ತರ ಪ್ರದೇಶಕ್ಕೆ ಎಂಥಾ ಸ್ಥಿತಿ?ಮೂರು ದಿನ 15 ಜಿಲ್ಲೆಗಳು ಸ್ತಬ್ಧ; ಉತ್ತರ ಪ್ರದೇಶಕ್ಕೆ ಎಂಥಾ ಸ್ಥಿತಿ?

ಏನೇನು ಬಂದ್ ಆಗಲಿದೆ

ಏನೇನು ಬಂದ್ ಆಗಲಿದೆ

ಅಂತಾರಾಜ್ಯ ಬಸ್ ಸಂಚಾರ, ಅಂತಾರಾಜ್ಯ ಗಡಿ, ಪ್ರಯಾಣಿಕರ ರೈಲು, ಮೆಟ್ರೋ ಸೇವೆ, ಮಾಲ್, ಮಳಿಗೆ, ಥಿಯೇಟರ್, ಸಭೆ, ಸಮಾರಂಭ, ಹೋಟೆಲ್ , ರೆಸ್ಟೋರೆಂಟ್, ಪಬ್, ಕ್ಲಬ್ ಬಂದ್ ಆಗಲಿದೆ.

English summary
Coronavirus scare: Here is What will remain open during a lockdown according to government sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X