Fact Check:ಮೋದಿ ಭಾಷಣ, 4 ದಿನ ಇಡೀ ದೇಶವೇ ಬಂದ್?
ಬೆಂಗಳೂರು, ಮಾರ್ಚ್ 19: ಕೊರೊನಾವೈರಸ್ ಸೋಂಕು ಹರಡುವ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿವೆ. ಕೋವಿಡ್19 ಬಗ್ಗೆ ಆತಂಕ ನಿವಾರಿಸಲು ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರು ಗುರುವಾರದಂದು ಮಾತನಾಡಲಿದ್ದಾರೆ.
ಆದರೆ, ಮೋದಿ ಅವರು ಏನು ಮಾತನಾಡಬಹುದು ಎಂಬುದರ ಬಗ್ಗೆ ಚರ್ಚೆ ಜೋರಾಗಿ ನಡೆದಿದೆ. ಈ ನಡುವೆ ಮೋದಿ ಅವರು ತಮ್ಮ ಭಾಷಣದಲ್ಲಿ ದೇಶವನ್ನು ಮುರ್ನಾಲ್ಕು ದಿನ ಸಂಪೂರ್ಣ ಬಂದ್ ಮಾಡುವಂತೆ ಆದೇಶ ನೀಡಲಿದ್ದಾರೆ ಎಂಬ ಸಂದೇಶ ಹರಿದಾಡುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿದೆ.

Live: ರಾತ್ರಿ 8 ಕ್ಕೆ ದೇಶವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ, ತೀವ್ರ ಕುತೂಹಲ
ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಸಾರ್ ಭಾರತಿ ಸಿಇಒ ಶಶಿಶೇಖರ್, ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಧಾನಿ ಮೋದಿ ಅವರು ಲಾಕ್ ಡೌನ್ ಎಂದು ಆದೇಶಿಸುತ್ತಾರೆ ಎಂಬಂತೆ ಸುದ್ದಿ ಹರಡುತ್ತಿದೆ. ಈ ಮಾಹಿತಿ ಸಂಪೂರ್ಣ ತಪ್ಪು. ಇದರಿಂದ ಸಾರ್ವಜನಿಕರಲ್ಲಿ ಅನಗತ್ಯ ಗೊಂದಲ, ಗಾಬರಿ ಉಂಟು ಮಾಡುತ್ತದೆ. ಇಂಥ ಪರಿಸ್ಥಿತಿಯಲ್ಲಿ ಇಂಥದ್ದೊಂದು ಗೊಂದಲ ಬೇಕಿಲ್ಲ. ಮೋದಿ ಅವರು ದೇಶವನ್ನು ಬಂದ್ ಮಾಡುವ ಬಗ್ಗೆ ಮಾತನಾಡುತ್ತಾರೆ ಎಂಬುದು ಸುಳ್ಳು ಎಂದು ಟ್ವೀಟ್ ಮಾಡಿದ್ದಾರೆ.
Some media outlets are speculating that PM Modi will announce a lock down in his address. This information is incorrect. It will also create unnecessary panic in minds of people, which is the last thing we need in times like this.
— Shashi Shekhar (@shashidigital) March 19, 2020
ಭಾರತದಲ್ಲಿ ಇದುವರೆಗೆ ಒಟ್ಟು 160 ಜನಕ್ಕೆ ಕೊರೊನಾ ವೈರಸ್ ಸೋಂಕು (ಕೋವಿಡ್ 19) ತಗುಲಿರುವುದು ದೃಢಪಟ್ಟಿದೆ. ಭಾರತದಲ್ಲಿ ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಹಾಗೂ ಪಂಜಾಬ್ ನಲ್ಲಿ ತಲಾ ಒಬ್ಬರು ಒಟ್ಟು ನಾಲ್ಕು ಮಂದಿ ಮೃತರಾಗಿದ್ದಾರೆ.












Click it and Unblock the Notifications