ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿತ ಟೆಕ್ಕಿ ಬೆಂಗಳೂರಿನಿಂದ ಹೈದರಾಬಾದ್‌ಗೆ ಬಸ್‌ನಲ್ಲಿ ಪ್ರಯಾಣಿಸಿದ್ದ

|
Google Oneindia Kannada News

ಬೆಂಗಳೂರು, ಮಾರ್ಚ್ 2: ತೆಲಂಗಾಣದಲ್ಲಿ ದೃಢಪಟ್ಟಿರುವ ಕೊರೊನಾ ಸೋಂಕಿತ ಟೆಕ್ಕಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಎನ್ನುವ ವಿಷಯ ಬೆಳಕಿಗೆ ಬಂದಿದೆ.

Recommended Video

ದಿನದಿಂದ ದಿನಕ್ಕೆ ಏರುತ್ತಿದೆ ಕೊರೊನ ಸಾವಿನ ಪ್ರಕರಣ | Corona Virus | China | Oneindia Kannada

ದೇಶದಲ್ಲಿ ಮತ್ತೆ ಮೂರು ಕೊರೋನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಮಾರಣಾಂತಿಕ ವೈರಸ್ ಸೋಂಕಿತ ತೆಲಂಗಾಣ ಮೂಲದ ಟೆಕ್ಕಿ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಜಗತ್ತಿನಾದ್ಯಂತ ಕಳವಳ, ಆತಂಕ ಸೃಷ್ಟಿಸಿರುವ ಚೀನಾದ ಕೊರೊನಾ ವೈರಾಣು COVID-19 ಸೋಂಕು ಅಮೆರಿಕದ ನೆಲದ ಮೇಲೂ ಕಾಲಿರಿಸಿದ್ದು, ಮೊದಲ ಸಾವಿನ ಪ್ರಕರಣ ದಾಖಲಾಗಿದೆ.

ಅಮೆರಿಕದ ವಾಷಿಂಗ್ಟನ್ ಸ್ಟೇಟ್​ ಇದನ್ನು ಖಾತರಿ ಪಡಿಸಿದ್ದು, ಮೂಲ ಪತ್ತೆ ಇಲ್ಲದ ನಾಲ್ಕು ಪ್ರಕರಣಗಳನ್ನು ಗುರುತಿಸಲಾಗಿದ್ದು, ದೇಶಾದ್ಯಂತ ಇದು ಹರಡುತ್ತಿರುವ ಲಕ್ಷಣ ಗೋಚರಿಸಿದೆ ಎಂದು ಹೇಳಿಕೊಂಡಿದೆ.

ಅತಿಹೆಚ್ಚು ಜನಸಾಂದ್ರತೆ ಇರುವ ಈ ಕಿಂಗ್ ಕಂಟ್ರಿಯಲ್ಲಿ 7 ಲಕ್ಷ ಜನ ವಾಸವಿದ್ದಾರೆ. ಚೀನಾದಲ್ಲಿ ಸೋಂಕು ತಗುಲಿರುವ ಸಂಖ್ಯೆಗೆ ಹೋಲಿಸಿದರೆ ಅಮೆರಿಕದಲ್ಲಿ ಭಾರಿ ಕಡಿಮೆ. ಆದಾಗ್ಯೂ, ಇದು ಹರಡುವ ಸೋಂಕು ಆಗಿರುವ ಕಾರಣ ಹೆಚ್ಚಿನ ಮುತುವರ್ಜಿವಹಿಸಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಎರಡು ವಾರಗಳ ಬಳಿಕ ಸೋಂಕು ತಗುಲಿದೆ

ಎರಡು ವಾರಗಳ ಬಳಿಕ ಸೋಂಕು ತಗುಲಿದೆ

ಅಲರ್ಟ್: ಭಾರತದಲ್ಲಿ ಇಬ್ಬರಿಗೆ ಕೊರೊನಾ ಅಟ್ಯಾಕ್ಅಲರ್ಟ್: ಭಾರತದಲ್ಲಿ ಇಬ್ಬರಿಗೆ ಕೊರೊನಾ ಅಟ್ಯಾಕ್

ಬೆಂಗಳೂರಿನಿಂದ ಬಸ್ ಮೂಲಕ ತೆರಳಿದ್ದ

ಬೆಂಗಳೂರಿನಿಂದ ಬಸ್ ಮೂಲಕ ತೆರಳಿದ್ದ

ಇನ್ನು ತೆಲಂಗಾಣದಲ್ಲಿ ಪತ್ತೆಯಾದ ಮಾರಕ ವೈರಸ್​ ಪೀಡಿತ ಟೆಕ್ಕಿ ಬೆಂಗಳೂರಿನಿಂದ ಬಸ್​ ಮುಖಾಂತರ ಹೈದರಾಬಾದ್​ಗೆ ತೆರಳಿದ್ದರು. ಹೀಗೆ ಬಸ್​ನಲ್ಲಿ ತೆರಳಿದ್ದಾಗ ಹಲವರ ಜತೆ ಟೆಕ್ಕಿ ಸಂಭಾಷಣೆ ಮಾಡಿದ್ದು, ಈಗ ಬಸ್​ನಲ್ಲಿದ್ದ ಆ ಪ್ರಯಾಣಿಕರನ್ನು ಪತ್ತೆ ಹಚ್ಚಲಾಗುತ್ತಿದೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ

ವೈರಸ್​ ದೃಢಪಟ್ಟಿರುವ ತೆಲಂಗಾಣ ವ್ಯಕ್ತಿ 24 ವರ್ಷದ ಟೆಕ್ಕಿಯಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಈತನನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದ್ದು, ಆತನ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಟೆಕ್ಕಿ ಬೆಂಗಳೂರಿನಿಂದ ಹೈದರಾಬಾದ್ ಗೆ ಬಸ್ ನಲ್ಲಿ ಪ್ರಯಾಣಿಸಿದ್ದರಿಂದ 80 ಮಂದಿಯನ್ನು ತಪಾಸಣೆಗೆ ಒಳಪಡಿಸುತ್ತಿರುವುದಾಗಿ ತೆಲಂಗಾಣ ಸರ್ಕಾರ ತಿಳಿಸಿದೆ.

ದೆಹಲಿ, ತೆಲಂಗಾಣ, ರಾಜಸ್ಥಾನದಲ್ಲಿ ಒಂದು ಪ್ರಕರಣ ದೃಢ

ದೆಹಲಿ, ತೆಲಂಗಾಣ, ರಾಜಸ್ಥಾನದಲ್ಲಿ ಒಂದು ಪ್ರಕರಣ ದೃಢ

ಈ ಪೈಕಿ ದೆಹಲಿಯಲ್ಲಿ ಒಂದು, ತೆಲಂಗಾಣದಲ್ಲಿ ಒಂದು ಹಾಗೂ ರಾಜಸ್ಥಾನದಲ್ಲಿ ಇಟಲಿಯ ಪ್ರವಾಸಿಗನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಂಕು ದೃಢಪಟ್ಟಿರುವ ವ್ಯಕ್ತಿ ಇಟಲಿಯಿಂದ ವಾಪಸಾಗಿದ್ದರೆ. ಮತ್ತೋರ್ವ ವ್ಯಕ್ತಿ ತೆಲಂಗಾಣದವರಾಗಿದ್ದು, ಇತ್ತೀಚೆಗೆ ದುಬೈನಿಂದ ಬೆಂಗಳೂರಿಗೆ ಹಿಂದಿರುಗಿದ್ದರು.

English summary
The man who tested positive for the Covid-19 disease, or coronavirus, in Telangana has been identified as a 24-year-old techie from Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X