ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಸಿಲುಕಿರುವ ವಿದೇಶಿಯರು ಏನು ಮಾಡಬೇಕು? ಇಲ್ಲಿದೆ ಮಾಹಿತಿ

|
Google Oneindia Kannada News

ನವದೆಹಲಿ, ಏಪ್ರಿಲ್ 11: ಭಾರತದಲ್ಲಿ ಕೊರೊನಾ ವೈರಸ್ ಗಾಢವಾಗಿ ಹರಡಿದೆ. ಹೀಗಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾಗಿದೆ.

ಲಾಕ್‌ಡೌನ್‌ಗಿಂತ ಮೊದಲು ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ಹಲವು ವಿದೇಶಿಯರು ಇಲ್ಲೇ ಸಿಲುಕಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯವನ್ನು ನಿಲ್ಲಿಸಿವೆ. ಏಕಾಏಕಿ ಲಾಕ್‌ಡೌನ್ ಮಾಡಿದ್ದರಿಂದ ಅವರು ತಮ್ಮ ದೇಶಗಳಿಗೆ ಮರಳಲು ಸಾಧ್ಯವಾಗಿಲ್ಲ.

ಅಂತವರನ್ನು ಪತ್ತೆ ಹಚ್ಚಲು ಕೇಂದ್ರ ಪ್ರವಾಸೋದ್ಯಮ ಇಲಾಖೆ ಸಹಾಯವಾಣಿಯನ್ನು ತೆರೆದಿದೆ. ಜೊತೆಗೆ strandedindia.com ಎನ್ನುವ ವೆಬ್‌ಸೈಟ್‌ನ್ನು ಕೂಡ ತೆರೆದಿದೆ. ಅದರಲ್ಲಿ ಕೊವಿಡ್ 19 ಸಹಾಯವಾಣಿ, ಇ-ಮೇಲ್ ಐಡಿ ಹಾಗೂ ವಾಟ್ಸಾಪ್ ನಂಬರ್‌ನ್ನು ನೀಡಲಾಗಿದೆ.

Where You Stranded In India

ಅದರಲ್ಲಿ ನಿಮ್ಮ ಹೆಸರು, ಯಾವ ದೇಶದಿಂದ ಭಾರತಕ್ಕೆ ಬಂದಿದ್ದೀರಿ, ಭಾರತದ ಯಾವ ಪ್ರದೇಶದಲ್ಲಿ ನೀವು ಸಿಲುಕಿದ್ದೀರಿ, ಮೊಬೈಲ್ ನಂಬರ್, ಇ-ಮೇಲ್ ಐಡಿ ಹಾಗೂ ನಿಮ್ಮ ಮಾತುಗಳನ್ನು ಅಲ್ಲಿ ನೀಡಿರುವ ಮೆಸೇಜ್ ಬಾಕ್ಸ್‌ನಲ್ಲಿ ತಿಳಿಸಬಹುದಾಗಿದೆ.

ಬಳಿಕ ಸಬ್‌ಮಿಟ್ ನೀಡಬೇಕು. ಕೊವಿಡ್ 19 ಸಹಾಯವಾಣಿ ಸಂಖೆ ಇಂತಿದೆ: +91-11-23978046 ಅಥವಾ 1075ಗೆ ಕರೆ ಮಾಡಿ.
ಹೆಲ್ಪ್‌ಲೈನ್ ಇ-ಮೇಲ್ ವಿಳಾಸ:[email protected]
[email protected]
ವಾಟ್ಸಾಪ್ ನಂಬರ್: +91 9013151515.

English summary
Ministry Of Tourism Started New Website called strandedindia.com To Help Foreigners Who Stranded in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X