• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇ 31ರ ತನಕ ಲಾಕ್ಡೌನ್ ವಿಸ್ತರಣೆ ಮಾಡಿದ ಗೃಹ ಇಲಾಖೆ

|

ನವದೆಹಲಿ, ಮೇ 17: ಕೊರೊನಾವೈರಸ್ ಸೋಂಕು ಹರಡದಂತೆ ವಿಧಿಸಿದ್ದ ಮೂರನೇ ಲಾಕ್ಡೌನ್ ಅವಧಿ ಮೇ 17ಕ್ಕೆ ಮುಕ್ತಾಯವಾಗಿದೆ. ನಾಲ್ಕನೇ ಅವಧಿ ಲಾಕ್ಡೌನ್ ಮೇ 31ರ ತನಕ ವಿಸ್ತರಿಸಿ ಭಾನುವಾರ (ಮೇ 17)ದಂದು ವಿಸ್ತರಣೆ ಮಾಡಿ ಕೇಂದ್ರ ಗೃಹ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

ಆದರೆ, ಈ ಬಾರಿ ಕೆಂಪು, ಕಿತ್ತಳೆ ಹಾಗೂ ಹಸಿರು ವಲಯ, ಕಂಟೈನ್ಮೆಂಟ್ ಜೋನ್ ಬಗ್ಗೆ ನಿರ್ಧಾರವನ್ನು ಆಯಾ ರಾಜ್ಯಗಳು ತೆಗೆದುಕೊಳ್ಳುವ ಅವಕಾಶವನ್ನು ಗೃಹ ಇಲಾಖೆ ನೀಡಿದೆ. ಭಾರತದಲ್ಲಿ ಕೊರೊನಾಸೋಂಕು ಪೀಡಿತರ ಸಂಖ್ಯೆ 90, 000 ದಾಟಿದೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯಲ್ಲಿ ಏನಿದೆ?

ಏನಿರಲ್ಲ: ಕಾಲೇಜು, ಶಿಕ್ಷಣ ಸಂಸ್ಥೆ, ಸ್ವಿಮ್ಮಿಂಗ್ ಪೂಲ್,ಶಾಪಿಂಗ್ ಮಾಲ್, ಸಾಂಸ್ಕೃತಿಕ, ಧಾರ್ಮಿಕ ಸಭೆ ಸಮಾರಂಭ, ರೈಲು, ಬಸ್, ಮೇಟ್ರೋ ರೈಲು, ವಿಮಾನ ಸಂಚಾರ ಬಂದ್. ಹೋಟೆಲ್ ಮತ್ತು ರೆಸ್ಟೋರೆಂಟ್ ಬಂದ್ ಆಗಿರಲಿದೆ. ಆದರೆ, ಎಂದಿನಂತೆ ಪಾರ್ಸಲ್ ಪಡೆಯಲು ಅವಕಾಶವಿದೆ.

ಓಲಾ, ಊಬರ್ ಟ್ಯಾಕ್ಸಿ ಸಂಚಾರಕ್ಕೂ ಅನುಮತಿ ಸಿಕ್ಕಿಲ್ಲ. ಮಿಕ್ಕಂತೆ ಮೇ 3ರ ಅಧಿಸೂಚನೆಯಂತೆ 8 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಹೊರಗಡೆ ಬರಲು ಅವಕಾಶವಿಲ್ಲ

ಅಂತಾರಾಜ್ಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಎರಡು ರಾಜ್ಯಗಳು ಒಪ್ಪಿದರೆ ಮಾತ್ರ ಸರ್ಕಾರಿ ಸಾರಿಗೆ ಬಸ್ ಸಂಚಾರಕ್ಕೆ ವಕಾಶ ನೀಡಬಹುದು. ಅಂತರ್ ಜಿಲ್ಲಾ ಸಂಚಾರ ಕೂಡಾ ರಾಜ್ಯ ಸರ್ಕಾರ ತೀರ್ಮಾನಿಸಬಹುದಾಗಿದೆ.

English summary
Ministry of Home Affairs (MHA) issues guidelines on measures to be taken by Ministries/Departments of Government of India, State Governments/UT Governments & State/UT authorities for containment of COVID19. #LockDown4 will remain in effect till 31st May 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X