• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ದಾಂಧಲೆ ಎಬ್ಬಿಸಿರುವ ಕೊರೊನಾ ವೈರಸ್ ಚೀನಾದ್ದಲ್ಲ: ಮೂಲ ಯಾವುದು?

|
Google Oneindia Kannada News

ಬೆಂಗಳೂರು, ಜೂನ್ 9: ಭಾರತದ ವಿವಿಧೆಡೆ ಹಾವಳಿ ಎಬ್ಬಿಸಿರುವ ಕೊರೊನಾ ವೈರಸ್ ಮೂಲ ಚೀನಾವಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧನೆಯಲ್ಲಿ ಬಹಿರಂಗಗೊಂಡಿದೆ.

   Celebrities we lost during the Lockdown | Oneindia Kannada

   ಭಾರತದ ವಿವಿಧ ರಾಜ್ಯಗಳಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ಸೋಂಕಿನ ಮೂಲ ಚೀನಾವಲ್ಲ, ಬದಲಾಗಿ ಯುರೋಪ್, ಮಧ್ಯಪ್ರಾಚ್ಯ, ಓಷಿಯಾನಿಯಾ ಮತ್ತು ದಕ್ಷಿಣ ಪ್ರಾಂತ್ಯದಿಂದ ಹಬ್ಬಿದೆ ಎನ್ನುವುದು ತಿಳಿದುಬಂದಿದೆ.

   ಕೊರೊನಾ ವೈರಸ್ ಬಗ್ಗೆ ಇಡೀ ವಿಶ್ವಕ್ಕೆ ಮತ್ತೊಂದು ಎಚ್ಚರಿಕೆ ಕೊಟ್ಟ WHOಕೊರೊನಾ ವೈರಸ್ ಬಗ್ಗೆ ಇಡೀ ವಿಶ್ವಕ್ಕೆ ಮತ್ತೊಂದು ಎಚ್ಚರಿಕೆ ಕೊಟ್ಟ WHO

   ಪ್ರವಾಸ ಮತ್ತು ಸಂಪಕದ ಮಾಹಿತಿ ಇಲ್ಲದ ಭಾರತೀಯ ಸೋಂಕಿತರಲ್ಲಿ ಪತ್ತೆಯಾಗಿರುವ ಕೊರೊನಾ ವೈರಾಣುವಿನ ಮೂಲವನ್ನು ನಿಖರವಾಗಿ ನಿಷ್ಕರ್ಷಿಸಲು ಸಾಧ್ಯವಾಗಿಲ್ಲ. ತನ್ಮೂಲಕ ಜನರು ಯಾವೆಲ್ಲಾ ರಾಷ್ಟ್ರಗಳಿಗೆ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರೋ, ಆ ರಾಷ್ಟ್ರಗಳಿಂದ ಕೊರೊನಾ ಸೋಂಕು ಭಾರತವನ್ನು ಪ್ರವೇಶಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

   ಸಂಶೋಧಕರು ಏನು ಹೇಳುತ್ತಾರೆ?

   ಸಂಶೋಧಕರು ಏನು ಹೇಳುತ್ತಾರೆ?

   ಪ್ರೊ. ಕುಮಾರವೇಲ್ ಸೋಮಸುಂದರಂ, ಮೈನಾಕ್ ಮಂಡಲ್ ಮತ್ತು ಅಂಕಿತಾ ಲಡಾರ್ಡೆ ಅವರನ್ನು ಒಳಗೊಂಡಿದ್ದ ಐಐಎಸ್ಸಿಯ ಮೈಕ್ರೋ ಬಯಾಲಜಿ ಮತ್ತು ಸೆಲ್ ಬಯಾಲಜಿ ವಿಭಾಗದ ಸಂಶೋಧಕರ ತಂಡ ಈ ಸಂಶೋಧನೆ ಮಾಡಿದೆ. ಕರೆಂಟ್ ಸೈನ್ಸ್ ಎಂಬ ಜರ್ನಲ್‌ನಲ್ಲಿ ಕೊರೊನಾ ವೈರಸ್ ಭಾರತಕ್ಕೆ ಹೇಗೆ ಬಂದಿತ್ತು ಎಂಬ ಕುರಿತು ಮಹಾಪ್ರಬಂಧ ಪ್ರಕಟಿಸಿದೆ.

   ಚೀನಾದ ವೈರಾಣುವಿನೊಂದಿಗೆ ಸಾಮ್ಯತೆ ಇದೆ

   ಚೀನಾದ ವೈರಾಣುವಿನೊಂದಿಗೆ ಸಾಮ್ಯತೆ ಇದೆ

   ಕೆಲವು ಪ್ರದೇಶಗಳಲ್ಲಿ ಚೀನಾ ಮತ್ತು ಪೂರ್ವ ಏಷ್ಯಾ ಮೂಲದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್‌ನೊಂದಿಗೆ ಹೋಲಿಕೆ ಇದೆ. ಬಹುಶಃ ಆ ಪ್ರದೇಶಗಳಿಂದ ಭಾರತಕ್ಕೆ ಬಂದವರಿಂದ ಈ ಸೋಂಕು ಹಬ್ಬಿರುವ ಸಾಧ್ಯತೆ ಇದೆ. ಏಕೆಂದರೆ ಈ ಮಾದರಿಯಲ್ಲಿ ಚೀನಾದ ವುಹಾನ್‌ನಲ್ಲಿ ಪತ್ತೆಯಾಗಿದ್ದ ವೈರಾಣುವಿನೊಂದಿಗೆ ಹೆಚ್ಚಿನ ಸಾಮ್ಯತೆಯನ್ನೂ ಹೊಂದಿದೆ.

   2019ರ ಆಗಸ್ಟ್‌ನಲ್ಲೇ ಕೊರೊನಾ ಸೋಂಕು: ಹಾಸ್ಯಾಸ್ಪದ ಎಂದ ಚೀನಾ2019ರ ಆಗಸ್ಟ್‌ನಲ್ಲೇ ಕೊರೊನಾ ಸೋಂಕು: ಹಾಸ್ಯಾಸ್ಪದ ಎಂದ ಚೀನಾ

   ವೈರಾಣುವಿನ ಪ್ರಬೇಧಗಳ ಪತ್ತೆ

   ವೈರಾಣುವಿನ ಪ್ರಬೇಧಗಳ ಪತ್ತೆ

   ಕೊರೊನಾ ವೈರಸ್‌ನ ಜಿನೋಮ್ ಸೀಕ್ವೆನ್ಸ್ ಅನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಸಂಶೋಧಕರು, ಈ ವೈರಸ್ ಭಾರತಕ್ಕೆ ಎಲ್ಲಿಂದ ಬಂದಿದ್ದು, ಭಾರತದಲ್ಲಿ ಸಾಂಕ್ರಾಮಿಕವಾಗಿ ಹಬ್ಬುತ್ತಿರುವ ಸೋಂಕಿಗೆ ಕಾರಣವಾಗಿರುವ ವೈರಾಣುವಿನ ಪ್ರಬೇಧಗಳು ಯಾವುವು ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ.

   ವರದಿಯಲ್ಲೇನಿದೆ?

   ವರದಿಯಲ್ಲೇನಿದೆ?

   ಕೊರೊನಾ ಸೋಂಕಿಗೆ ಒಳಗಾಗಿರುವ 137 ಭಾರತೀಯರ ಪೈಕಿ 129 ಮಂದಿಯಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್ ನಿರ್ದಿಷ್ಟವಾದ ರಾಷ್ಟ್ರಗಳಲ್ಲಿನ ವೈರಾಣುವಿನ ಹೋಲಿಕೆ ಹೊಂದಿದೆ. ಎ ಕ್ಲಸ್ಟರ್‌ನಲ್ಲಿ ಭಾರತೀಯರ ಮಾದರಿಗಳನ್ನು ಪರಿಶೀಲಿಸಿದಾಗ ಅವು ಓಷಿಯಾನಿಯ, ಕುವೈತ್ ಮತ್ತು ದಕ್ಷಿಣ ಏಷ್ಯಾದಲ್ಲಿ ಪತ್ತೆಯಾಗಿರುವ ವೈರಾಣುವಿನ ಮಾದರಿಗೆ ಹೋಲುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ಬಿ ಕ್ಲಸ್ಟರ್‌ನಲ್ಲಿನ ಮಾದರಿಯಲ್ಲಿ ಪತ್ತೆಯಾಗಿರುವ ವೈರಾಣು ಯುರೋಪಿಯನ್ ಮೂಲವನ್ನು ಹಾಗೂ ಸಣ್ಣ ಪ್ರಮಾಣದಲ್ಲಿ ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ ಮತ್ತು ಓಷಿಯಾನಿಯಾ ಪ್ರದೇಶಗಳಿಂದ ಬಂದಿದ್ದು ಎಂಬುದು ಸ್ಪಷ್ಟವಾಗಿ ತಿಳದುಬಂದಿದೆ.

   English summary
   SARS-CoV2, the virus that causes COVID 19 in all likelyhood came into India from Europe, Middle east, oceania, South Asia Regions rather than China, which strongly implies it spread through countries most travelled, a report from researchers at Indian Institute of Science.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X