Breaking: ಭಾರತದಲ್ಲಿ ಒಂದೇ ದಿನ 13,586 ಕೊರೊನಾ ಪ್ರಕರಣ ಪತ್ತೆ

ದೆಹಲಿ, ಜೂನ್ 19: ಭಾರತದಲ್ಲಿ ಒಂದೇ ದಿನ 13,586 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದೆ. ಇದು ಈವರೆಗೂ ದಿನವೊಂದರಲ್ಲಿ ವರದಿಯಾಗಿರುವ ಕೇಸ್‌ಗಳ ಪೈಕಿ ಅತಿ ಹೆಚ್ಚು ಪ್ರಕರಣ.

Recommended Video

      ಸುಶಾಂತ್ ಗೆಳತಿ ಜೊತೆ 10 ಗಂಟೆ ವಿಚಾರಣೆ ನಡೆಸಿದ ಪೊಲೀಸ್ | Rhea Chakraborty | Oneindia Kannada

      ಇಂದಿನ ವರದಿ ನಂತರ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,80,532ಕ್ಕೆ ಏರಿಕೆಯಾಗಿದೆ. ಅದರಲ್ಲಿ 2,04,711 ಮಂದಿ ಸೋಂಕಿನಿಂದ ಗುಣಮುಖರಾಗಿದ್ದರೆ, 1,63,248 ಕೇಸ್‌ಗಳು ಸಕ್ರಿಯವಾಗಿದೆ.

      ಇನ್ನು ಕಳೆದ 24 ಗಂಟೆಯಲ್ಲಿ 336 ಮಂದಿ ಸಾವನ್ನಪ್ಪಿದ್ದಾರೆ. ಈಗ ದೇಶದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 12,573 ಜಿಗಿದಿದೆ.

      ಇನ್ನುಳಿದಂತೆ ರಾಜ್ಯಗಳ ಅಂಕಿ ಅಂಶ ನೋಡುವುದಾರೇ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ನಿನ್ನೆ ಅತಿ ಹೆಚ್ಚು ಕೇಸ್ ವರದಿಯಾಗಿದೆ.

      ಮಹಾರಾಷ್ಟ್ರದಲ್ಲಿ ನಿನ್ನೆ 3752 ಜನರಿಗೆ ಮಹಾಮಾರಿ ಕೊರೊನಾ ವೈರಸ್ ವಕ್ಕರಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,20,504ಕ್ಕೆ ಏರಿದೆ. ತಮಿಳುನಾಡಿನಲ್ಲಿ 2141 ಮಂದಿಗೆ ಕೊವಿಡ್ ಸೋಂಕು ಅಂಟಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 52,334ಕ್ಕೆ ಜಿಗಿದಿದೆ. ಈವರೆಗೂ 625 ಜನರು ತಮಿಳುನಾಡಿನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

      Coronavirus in India: 13,586 New Positive Cases and 336 New Deaths Reported in last 24 hour

      ಕರ್ನಾಟಕದಲ್ಲಿ ನಿನ್ನೆ 210 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7944ಕ್ಕೆ ಏರಿಕೆಯಾಗಿದೆ. ಗುಜರಾತ್‌ನಲ್ಲಿ 510 ಮಂದಿಗೆ ಹಾಗೂ ಪಶ್ಚಿಮ ಬಂಗಾಳದಲ್ಲಿ 435 ಜನರಿಗೆ ನಿನ್ನೆ ಕೊರೊನಾ ವೈರಸ್ ವಕ್ಕರಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+