• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇರಾನ್ ನಲ್ಲಿ ಸಿಲುಕಿದ್ದ 53 ಭಾರತೀಯರು ತಾಯ್ನಾಡಿಗೆ ವಾಪಸ್

|

ಕೊರೊನಾ ಪೀಡಿತ ಇರಾನ್ ನಲ್ಲಿ ಸಿಲುಕಿಕೊಂಡಿದ್ದ 53 ಮಂದಿ ಭಾರತೀಯರು ಇಂದು ತಾಯ್ನಾಡಿಗೆ ವಾಪಸ್ ಆದರು.

ಇರಾನ್ ನ ಟೆಹ್ರಾನ್ ಮತ್ತು ಶಿರಾಜ್ ನಗರಗಳಿಂದ ಓರ್ವ ಟೀಚರ್ ಮತ್ತು 52 ವಿದ್ಯಾರ್ಥಿಗಳನ್ನು (ಒಟ್ಟು 53 ಮಂದಿ) ಹೊತ್ತ ಏರ್ ಇಂಡಿಯಾ ವಿಮಾನ ಇಂದು ಜೈಸಲ್ಮೇರ್ ನಲ್ಲಿ ಬಂದಳಿಯಿತು. ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಎಲ್ಲಾ 53 ಮಂದಿಯನ್ನು ರಾಜಸ್ಥಾನದ ಸೇನಾ ಕೇಂದ್ರಗಳಿಗೆ ಶಿಫ್ಟ್ ಮಾಡಲಾಯಿತು.

ಕೊರೊನಾ ಭೀತಿ: ಇರಾನ್ ನಿಂದ 120 ಭಾರತೀಯರು ಇಂದು ತಾಯ್ನಾಡಿಗೆ ವಾಪಸ್

ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡಿರುವ ಇರಾನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈಗಾಗಲೇ ಮೂರು ಬ್ಯಾಚ್ ಗಳಲ್ಲಿ ಇರಾನ್ ನಿಂದ ಭಾರತೀಯರನ್ನು ಕರೆತರಲಾಗಿದೆ.

ಇಂದು 53 ಮಂದಿಯ ನಾಲ್ಕನೇ ಬ್ಯಾಚ್ ಜೈಸಲ್ಮೇರ್ ನಲ್ಲಿ ಲ್ಯಾಂಡ್ ಆಗಿದ್ದು, ಆ ಮೂಲಕ ಇಲ್ಲಿಯವರೆಗೂ ಇರಾನ್ ನಿಂದ 389 ಮಂದಿ ಭಾರತೀಯರು ತಾಯ್ನೆಲಕ್ಕೆ ಮರಳಿದಂತಾಗಿದೆ.

ಚೀನಾ ಮತ್ತು ಇಟಲಿ ಬಿಟ್ಟರೆ, ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚು ವರದಿ ಆಗಿರುವುದು ಇರಾನ್ ನಲ್ಲಿ. ಇಲ್ಲಿಯವರೆಗೂ ಇರಾನ್ ನಲ್ಲಿ 13,938 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ. ಅದರಲ್ಲಿ 724 ಮಂದಿ ಡೆಡ್ಲಿ ವೈರಸ್ ನಿಂದ ಸಾವನ್ನಪ್ಪಿದ್ದಾರೆ.

English summary
Coronavirus: Another batch of 53 stranded in Iran return India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X