ಕೊರೊನಾ 3ನೇ ಅಲೆ: ದೇಶಾದ್ಯಂತ ಸಾವಿರಕ್ಕೂ ಅಧಿಕ ವೈದ್ಯರಿಗೆ ಕೊರೊನಾ ಸೋಂಕು

ನವದೆಹಲಿ, ಜನವರಿ 07: ಕೊರೊನಾ ಮೂರನೇ ಅಲೆಯಲ್ಲಿ ದೇಶಾದ್ಯಂತ ಸಾವಿರಕ್ಕೂ ಅಧಿಕ ವೈದ್ಯರಿಗೆ ಕೊರೊನಾ ಸೋಂಕು ತಗುಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಓಮಿಕ್ರಾನ್ ರೂಪಾಂತರಿ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು, ಇದೀಗ ಎಲ್ಲಾ ದೇಶಗಳಲ್ಲೂ ಹರಡಿದ್ದು, ಜನರಲ್ಲಿ ಭಯ ಹುಟ್ಟಿಸಿದೆ. ಬೇರೆಲ್ಲಾ ರೂಪಾಂತರಿಗಿಂತ ವೇಗವಾಗಿ ಹರಡುತ್ತಿದ್ದರೂ ಕೂಡ ಸೋಂಕು ತಗುಲಿದವರಲ್ಲಿ ಸೌಮ್ಯ ಲಕ್ಷಣಗಳು ಕಂಡು ಬಂದಿವೆ. ಕೆಲವರಿಗೆ ಲಕ್ಷಣಗಳೂ ಇಲ್ಲ.

ದೇಶದಲ್ಲಿ ಓಮಿಕ್ರಾನ್ ಶುರುವಾದಾಗಿನಿಂದ ಇಲ್ಲಿಯವರೆಗೆ ಸಾವಿರಕ್ಕೂ ಅಧಿಕ ವೈದ್ಯರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಮಹಾರಾಷ್ಟ್ರ: ಕೇವಲ ಮೂರು ದಿನಗಳಲ್ಲಿ 290ಕ್ಕೂ ಅಧಿಕ ವೈದ್ಯರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ, ಬೇರೆಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲೇ ಹೆಚ್ಚು ಮಂದಿ ವೈದ್ಯರಿಗೆ ಕೊರೊನಾ ಸೋಂಕು ತಗುಲಿದೆ.

Corona Third Wave: Over 1,000 Doctors Test Positive Across Country

ದೆಹಲಿ: ಆರೋಗ್ಯ ಕಾರ್ಯಕರ್ತರು ಸೇರಿದಂತೆ 120 ವೈದ್ಯರಿಗೆ ಕೊರೊನಾ ಸೋಂಕು ತಗುಲಿದೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ 50 ಮಂದಿ ವೈದ್ಯರಿಗೆ ಸೋಂಕು ತಗುಲಿದೆ, ಸಫ್ದರ್‌ಗಂಜ್ ಆಸ್ಪತ್ರೆಯಲ್ಲಿ 26 ವೈದ್ಯರಿಗೆ ಸೋಂಕು ತಗುಲಿದೆ.

ದೆಹಲಿಯ ರಾಮ್‌ ಮನೋಹರ್ ಲೋಹಿಯಾ ಆಸ್ಪತ್ರೆಯ 38 ವೈದ್ಯರು, 45 ಆರೋಗ್ಯ ಕಾರ್ಯಕರ್ತರು, ಹಿಂದೂ ರಾವ್ ಆಸ್ಪತ್ರೆಯ 20 ವೈದ್ಯರು, ಲೋಕನಾಯಕ್ ಆಸ್ಪತ್ರೆಯ 7 ಮಂದಿ ವೈದ್ಯರಿಗೆ ಸೋಂಕು ತಗುಲಿದೆ.

ಪಂಜಾಬ್: ಚಂಡೀಗಢದಲ್ಲಿ ಕೇವಲ ಎರಡು ದಿನಗಳಲ್ಲಿ ಪಿಜಿಐನ 196 ವೈದ್ಯರಿಗೆ ಕೊರೊನಾ ಸೋಂಕು ತಗುಲಿದೆ.

ಜಾರ್ಖಂಡ್: ರಾಂಚಿಯಲ್ಲಿ 180ಕ್ಕೂ ಅಧಿಕ ವೈದ್ಯರಿಗೆ ಕೊರೊನಾ ಸೋಂಕು ತಗುಲಿರುವುದು ತಿಳಿದುಬಂದಿದೆ.

ಬಿಹಾರ: ಪಾಟ್ನಾದ ಎನ್‌ಎಂಸಿಎಚ್‌ನ 200 ವೈದ್ಯರು ಹಾಗೂ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ.

ಪಶ್ಚಿಮ ಬಂಗಾಳ: ಕೋಲ್ಕತ್ತಾದಲ್ಲಿ 70ಕ್ಕೂ ಅಧಿಕ ನರ್ಸ್ ಹಾಗೂ ವೈದ್ಯರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಉತ್ತರ ಪ್ರದೇಶ: ಮೆದಾಂತಾ ಆಸ್ಪತ್ರೆಯಲ್ಲಿ 25 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.

ಕೇವಲ 10 ದಿನದೊಳಗೆ ಅಂದ್ರೆ ಡಿಸೆಂಬರ್ 28 ರಂದು 9,195 ಪ್ರಕರಣಗಳು ಕಂಡು ಬಂದಿದ್ದವು. ಆದರೆ, ಇಂದು ಲಕ್ಷದ ಹದಿನೇಳು ಸಾವಿರಕ್ಕೆ ತಲುಪಿದೆ. ಅಂದ್ರೆ ಶೇ. 1000ದಷ್ಟು ದೇಶದಲ್ಲಿ ಕೋವಿಡ್​ ಪ್ರಕರಣಗಳ ಜಿಗಿತವು ಕಂಡಿದ್ದು, ಇದು ಹೊಸ ಅಲೆಯ ಸಾಂಕ್ರಾಮಿಕವಾಗಿದೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.

ಮೊದಲ ಅಲೆಯಲ್ಲಿ ಇದೇ ರೀತಿಯ ಹೆಚ್ಚಳ ಕಂಡಿತ್ತು. 10,000 ರಿಂದ 1 ಲಕ್ಷ ಪ್ರಕರಣಗಳು ಸುಮಾರು 100 ದಿನಗಳವರೆಗೆ ದೇಶದಲ್ಲಿ ಕೊರೊನಾ ಪ್ರಕರಣಗಳು ಬರತೊಡಗಿದವು. ಎರಡನೇ ತರಂಗದ ಅವಧಿಯಲ್ಲಿ ಅರ್ಧದಷ್ಟು ಕಡಿಮೆಯಾಯಿತು. ಆದ್ರೂ ಪ್ರಸ್ತುತ ದಿನನಿತ್ಯದ ಸಂಖ್ಯೆಗಳು ಈ ಗರಿಷ್ಠ ಮಟ್ಟಕ್ಕೆ ಏರಲು 10 ದಿನಗಳನ್ನು ಸಹ ತೆಗೆದುಕೊಂಡಿಲ್ಲ.

ಕಳೆದ ತಿಂಗಳ ಕೊನೆಯಲ್ಲಿ, ಭಾರತದ ಕೊರೊನಾ ವೈರಸ್ ಕಾರ್ಯಪಡೆಯ ಮುಖ್ಯಸ್ಥ ಡಾ.ವಿ.ಕೆ. ಪಾಲ್​ ಹೇಳುವ ಪ್ರಕಾರ, ಒಮಿಕ್ರಾನ್ ರೂಪಾಂತರದ ಉಲ್ಬಣವು ನಿಧಾನವಾಗದಿದ್ದರೆ ದೇಶದಲ್ಲಿ ದಿನಕ್ಕೆ 14 ಲಕ್ಷ ಕೋವಿಡ್​ ಪ್ರಕರಣಗಳು ಕಂಡು ಬರುತ್ತವೆ ಎಂದಿದ್ದಾರೆ.

"ನಾವು ಯುಕೆಯಲ್ಲಿ ಹರಡುವಿಕೆಯ ಪ್ರಮಾಣವನ್ನು ನೋಡಿದರೆ ಮತ್ತು ಭಾರತದಲ್ಲಿ ಇದೇ ರೀತಿಯ ಏಕಾಏಕಿ ಏರಿಕೆ ಆದ್ರೆ ನಮ್ಮ ಜನಸಂಖ್ಯೆ ಪ್ರಕಾರ ಪ್ರತಿದಿನ 14 ಲಕ್ಷ ಪ್ರಕರಣಗಳು ಕಂಡುಬರುತ್ತವೆ. ಫ್ರಾನ್ಸ್ 65,000 ಪ್ರಕರಣಗಳನ್ನು ವರದಿ ಮಾಡುತ್ತಿದೆ ಎಂದು ಪಾಲ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+