ದೇಶದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳ: ಕಾರಣವೇನು?

ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ ಜನಜೀವನ ಸಹಜ ಸ್ಥಿತಿಯತ್ತ ಮರುಕಳಿಸುತ್ತಿರುವಾಗ ಏಕಾಏಕಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಏಪ್ರಿಲ್ 14 ರಂದು ಭಾರತ 80 ದಿನಗಳಲ್ಲಿ ಮೊದಲ ಬಾರಿಗೆ ಹೆಚ್ಚು ಕೊರೊನಾ ಪ್ರಕರಣಗಳ ಸಂಖ್ಯೆ ದಾಖಲಿಸಿದೆ. 24 ಗಂಟೆಗಳ ಅವಧಿಯಲ್ಲಿ 10,870 ರಿಂದ 11,058ಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

ದೇಶ ಪ್ರತಿದಿನ 1,007 ಹೊಸ ಕೊರೊನವೈರಸ್ ಪ್ರಕರಣಗಳನ್ನು ವರದಿ ಮಾಡುತ್ತಿದೆ. ದೇಶದಲ್ಲಿ ಸತತ ಎರಡನೇ ದಿನವೂ 1,000 ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿವೆ. ಹೊಸ ಕೊರೊನಾ ಪ್ರಕರಣಗಳೊಂದಿಗೆ ದೇಶದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 4,30,39,023ಕ್ಕೆ ಏರಿಕೆಯಾಗಿದೆ.

ಕೊರೊನಾ ಹೊಸ ಪ್ರಕರಣಗಳು ದೆಹಲಿ, ಗುಜರಾತ್ ಮತ್ತು ಹರಿಯಾಣಗಳಲ್ಲಿ ಹೆಚ್ಚಾಗಿರುವುದು ಕಂಡು ಬಂದಿದೆ. ಈ ರಾಜ್ಯಗಳಲ್ಲಿನ ಅನೇಕ ಆಸ್ಪತ್ರೆಗಳು ಮತ್ತು ವೈದ್ಯರು ಸಹ ಕೋವಿಡ್ ರೋಗಲಕ್ಷಣಗಳೊಂದಿಗೆ OPD ಗಳಿಗೆ ಭೇಟಿ ನೀಡುವ ರೋಗಿಗಳಲ್ಲಿ ಏರಿಕೆ ಕಂಡುಬಂದಿದೆ ಎಂದು ದೃಢಪಡಿಸಿದ್ದಾರೆ. ಆದರೆ ಹೆಚ್ಚಿನ ರೋಗಿಗಳು ಜ್ವರ, ನೆಗಡಿ ಮತ್ತು ಕೆಮ್ಮಿನಿಂದ ಸ್ವಲ್ಪಮಟ್ಟಿಗೆ ರೋಗಲಕ್ಷಣಗಳನ್ನು ಹೊಂದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

corona cases Increasing in the country: 11,058 Corona cases recorded

ಒಟ್ಟಾರೆಯಾಗಿ ಭಾರತದಲ್ಲಿನ 18 ರಾಜ್ಯಗಳು 24 ಗಂಟೆಗಳ ಅವಧಿಯಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳವನ್ನು ವರದಿ ಮಾಡಿದೆ. ಹೀಗಾಗಿ ದೈನಂದಿನ ಪಾಸಿಟಿವಿಟಿ ದರಗಳು ಮಿಜೋರಾಂನಲ್ಲಿ ಶೇಕಡಾ 10.47, ಹರಿಯಾಣದಲ್ಲಿ ಶೇಕಡಾ 3.05, ನಾಗಾಲ್ಯಾಂಡ್‌ನಲ್ಲಿ ಶೇಕಡಾ 2.63 ಮತ್ತು ದೆಹಲಿಯಲ್ಲಿ ಶೇಕಡಾ 2.49ರಷ್ಟು ದಾಖಲಾಗಿದೆ. ಅಲ್ಲದೆ ದೇಶದಲ್ಲಿ 27 ಜಿಲ್ಲೆಗಳು ಸಾಪ್ತಾಹಿಕ ಪಾಸಿಟಿವಿಟಿ ದರ 5 ಪ್ರತಿಶತಕ್ಕಿಂತ ಹೆಚ್ಚು ಹೊಂದಿವೆ ಮತ್ತು ಇವುಗಳಲ್ಲಿ ಕೇರಳದ 23 ಜಿಲ್ಲೆಗಳು ಸೇರಿವೆ.

ಕಾರಣವೇನು?

ಹೆಚ್ಚಿನ ಸಂಖ್ಯೆಯ ಸೋಂಕುಗಳಿಗೆ ಕಾರಣವಾಗಬಹುದಾದ ಯಾವುದೇ ಹೊಸ ರೂಪಾಂತರ ವೈರಸ್‌ಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ದೃಢಪಡಿಸಿಲ್ಲ. ಆದರೆ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಗಮನವನ್ನು ಹರಿಸಿದೆ.

corona cases Increasing in the country: 11,058 Corona cases recorded

ಭಾರತದಲ್ಲಿ Omicron ನ BA.1 ಮತ್ತು BA.2 ಉಪ-ವ್ಯತ್ಯಯಗಳ ಮರುಸಂಯೋಜಕ XE ರೂಪಾಂತರದ ಉಪಸ್ಥಿತಿಯನ್ನು ಇನ್ನೂ ದೃಢಪಡಿಸಲಾಗಿಲ್ಲ. ಆದರೂ ಕೆಲವು ರಾಜ್ಯಗಳು ಕೆಲವು ಶಂಕಿತ ಪ್ರಕರಣಗಳನ್ನು ವರದಿ ಮಾಡಿದೆ. ಈ ಕಾರಣದಿಂದಾಗಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರಬಹುದು ಎಂದು ತಿಳಿದು ಬಂದಿದೆ.

ಸಚಿವಾಲಯ ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, 24 ಗಂಟೆಗಳಲ್ಲಿ ಕೇವಲ ಒಂದು ಹೊಸ ಸಾವು ಮಾತ್ರ ವರದಿಯಾಗಿದೆ. ಇದು ಮಾರ್ಚ್ 28, 2020 ರಿಂದ 747 ದಿನಗಳಲ್ಲಿ ಅತ್ಯಂತ ಕಡಿಮೆ ಸಾವಿನ ಸಂಖ್ಯೆಯಾಗಿದೆ. ಒಟ್ಟಾರೆಯಾಗಿ, ಭಾರತದಲ್ಲಿ 5,21,737 ಜನರು ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದಾರೆ. ಭಾರತ ಜನವರಿ 23 ರಂದು ಓಮಿಕ್ರಾನ್ ಉತ್ತುಂಗದಲ್ಲಿ 22 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+