• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಗಸ್ಟ್‌ನಲ್ಲೇ ಮೂರನೇ ಅಲೆ, ಅಕ್ಟೋಬರ್‌ನಲ್ಲಿ ಮತ್ತೆ ಉತ್ತುಂಗಕ್ಕೇರಲಿದೆ ಕೊರೊನಾ

By ಒನ್‌ಇಂಡಿಯಾ ಡೆಸ್ಕ್
|
Google Oneindia Kannada News

ನವದೆಹಲಿ, ಆಗಸ್ಟ್‌ 2: ಕೆಲವು ರಾಜ್ಯಗಳಲ್ಲಿ ವಾರದಿಂದೀಚೆಗೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಮೂರನೇ ಅಲೆ ಆತಂಕ ತಂದಿದೆ. ಇದರೊಂದಿಗೆ ಸಂಶೋಧಕರು ಕೂಡ ಇದೇ ತಿಂಗಳು ಮೂರನೇ ಅಲೆ ಕಾಲಿಡಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದೇ ತಿಂಗಳು ದೇಶದಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳಲಿದ್ದು, ದಿನಕ್ಕೆ ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಲಿವೆ. ಅತಿ ಕೆಟ್ಟ ಸನ್ನಿವೇಶದಲ್ಲಿ 150000ರವರೆಗೂ ಪ್ರಕರಣಗಳು ದಾಖಲಾಗಲಿವೆ ಎಂದು ತಿಳಿಸಿದ್ದಾರೆ.

ಹೈದರಾಬಾದ್ ಹಾಗೂ ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾತುಕುಮಲ್ಲಿ ವಿದ್ಯಾಸಾಗರ್ ಹಾಗೂ ಮಣೀಂದ್ರ ಅಗರ್‌ವಾಲ್ ನೇತೃತ್ವದ ಸಂಶೋಧಕರು, ಕೊರೊನಾ ಪ್ರಕರಣಗಳ ಏರಿಕೆಯು ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ ಮೂರನೇ ತರಂಗ ಸೃಸ್ಟಿಸಲಿದೆ ಹಾಗೂ ಇದು ಅಕ್ಟೋಬರ್‌ನಲ್ಲಿ ಉತ್ತುಂಗಕ್ಕೇರಬಹುದು ಎಂದು ತಿಳಿಸಿರುವುದಾಗಿ ಬ್ಲೂಂಬರ್ಗ್ ವರದಿ ಮಾಡಿದೆ.

ಕೋವಿಡ್‌ 3 ನೇ ಅಲೆ ಭೀತಿ: 11 ವಾರಗಳ ಕುಸಿತದ ನಂತರ ದೇಶದಲ್ಲಿ ಪ್ರಕರಣಗಳು ಶೇ.7.5 ಏರಿಕೆಕೋವಿಡ್‌ 3 ನೇ ಅಲೆ ಭೀತಿ: 11 ವಾರಗಳ ಕುಸಿತದ ನಂತರ ದೇಶದಲ್ಲಿ ಪ್ರಕರಣಗಳು ಶೇ.7.5 ಏರಿಕೆ

ಕೇರಳ ಹಾಗೂ ಮಹಾರಾಷ್ಟ್ರದಂಥ ಹೆಚ್ಚಿನ ಕೊರೊನಾ ಪ್ರಕರಣಗಳಿರುವ ರಾಜ್ಯಗಳು ಈ ಚಿತ್ರಣಕ್ಕೆ ಸಾಕ್ಷಿಯಾಗಿವೆ. ಆನಂತರದಲ್ಲಿ ಈ ರಾಜ್ಯಗಳಲ್ಲಿ ಪ್ರಕರಣಗಳು ತಗ್ಗಬಹುದು ಎಂದು ಹೇಳಿದ್ದಾರೆ. ಮುಂದೆ ಓದಿ...

 ಅಕ್ಟೋಬರ್‌ನಲ್ಲಿ ಉತ್ತುಂಗಕ್ಕೇರಲಿವೆ ಕೊರೊನಾ ಪ್ರಕರಣ

ಅಕ್ಟೋಬರ್‌ನಲ್ಲಿ ಉತ್ತುಂಗಕ್ಕೇರಲಿವೆ ಕೊರೊನಾ ಪ್ರಕರಣ

ಕೊರೊನಾ ಮೂರನೇ ತರಂಗವು ಎರಡನೇ ತರಂಗದಷ್ಟು ಭೀಕರವಾಗಿರುವುದಿಲ್ಲ. ಅದು ಅಸಂಭವವಾಗಿದೆ ಎಂದು ಹೇಳಿದ್ದಾರೆ. ಕೊರೊನಾ ಎರಡನೇ ಅಲೆ ಸಮಯದಲ್ಲಿ ಭಾರತದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚಿನ ದಿನನಿತ್ಯದ ಕೊರೊನಾ ಪ್ರಕರಣಗಳು ದಾಖಲಾಗಿದ್ದವು ಹಾಗೂ ಆನಂತರ ಇಳಿಕೆಯಾದವು. ಮೂರನೇ ಅಲೆಯಲ್ಲಿಯೂ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಿದೆ ಅಕ್ಟೋಬರ್‌ನಲ್ಲಿ ಉತ್ತುಂಗಕ್ಕೇರಿ ನಂತರ ತಗ್ಗಲಿದೆ ಎಂದು ತಿಳಿಸಿದ್ದಾರೆ.

 ಡೆಲ್ಟಾ ರೂಪಾಂತರಗಳಿಂದ ಪ್ರಚೋದನೆ

ಡೆಲ್ಟಾ ರೂಪಾಂತರಗಳಿಂದ ಪ್ರಚೋದನೆ

ಮೇ ತಿಂಗಳಿನಲ್ಲಿ ಹೈದರಾಬಾದ್ ಐಐಟಿ ಪ್ರಾಧ್ಯಾಪಕ ವಿದ್ಯಾಸಾಗರ್ ಗಣಿತದ ಮಾದರಿ ಆಧರಿಸಿ ಮುಂಬರುವ ದಿನಗಳಲ್ಲಿ ಭಾರತದ ಕೊರೊನಾ ಸೋಂಕಿನ ಪ್ರಕರಣಗಳು ಉತ್ತುಂಗಕ್ಕೇರಬಹುದು ಎಂದು ಹೇಳಿದ್ದರು. ಅದರಂತೆ ಇದೀಗ ಜುಲೈ ತಿಂಗಳಿನಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಇದರೊಂದಿಗೆ, ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ರೂಪಾಂತರಗಳು ಪ್ರಕರಣಗಳ ಏರಿಕೆಗೆ ಪ್ರಚೋದನೆ ನೀಡಬಹುದು ಎಂದಿದ್ದರು.

ಕೊರೊನಾವೈರಸ್ ಪರಿಚಯಿಸಿದ ಚೀನಾದಲ್ಲಿ ಹೇಗಿದೆ ಡೆಲ್ಟಾ ಹಾವಳಿ!?ಕೊರೊನಾವೈರಸ್ ಪರಿಚಯಿಸಿದ ಚೀನಾದಲ್ಲಿ ಹೇಗಿದೆ ಡೆಲ್ಟಾ ಹಾವಳಿ!?

 ಹತ್ತು ರಾಜ್ಯಗಳಲ್ಲಿ ಕೇಂದ್ರ ತಂಡದ ವಿಶ್ಲೇಷಣೆ

ಹತ್ತು ರಾಜ್ಯಗಳಲ್ಲಿ ಕೇಂದ್ರ ತಂಡದ ವಿಶ್ಲೇಷಣೆ

ದೇಶದಲ್ಲಿ ಕಳೆದ ವಾರದಿಂದಲೂ ದಿನನಿತ್ಯದ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದ್ದು, ಈಗಾಗಲೇ ದೇಶ ಮೂರನೇ ಅಲೆಗೆ ಒಡ್ಡಿಕೊಂಡಿದೆಯೇ ಎಂಬ ಕುರಿತು ವೈದ್ಯಕೀಯ ವಲಯದಲ್ಲಿ ವಿಶ್ಲೇಷಣೆಗಳು ಆರಂಭವಾಗಿವೆ. ಕೆಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸದ್ದಿಲ್ಲದೇ ಏರಿಕೆಯಾಗುತ್ತಿದೆ. ಇನ್ನೊಂದೆಡೆ, ದೇಶದೆಲ್ಲೆಡೆ ಕೊರೊನಾ ಎರಡನೇ ಅಲೆ ಭೀಕರತೆ ತಗ್ಗಿದ ನಂತರವೂ ಕೆಲವು ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ಸದ್ಯಕ್ಕೆ ದೇಶದ ಅರ್ಧದಷ್ಟು ಪ್ರಕರಣಗಳು ಕೇರಳ ಒಂದರಿಂದಲೇ ದಾಖಲಾಗುತ್ತಿದ್ದು, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹತ್ತು ರಾಜ್ಯಗಳ ಪರಿಸ್ಥಿರಿ ಪರಿಶೀಲನೆಗೆ ಕೇಂದ್ರ ಮುಂದಾಗಿದೆ.

ಕೇರಳ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಅಸ್ಸಾಂ, ಮಿಝೋರಾಂ, ಮೇಘಾಲಯ ಹಾಗೂ ಮಣಿಪುರದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಈ ರಾಜ್ಯಗಳಲ್ಲಿನ ಕೊರೊನಾ ಪ್ರಕರಣ ಹಾಗೂ ನಿಯಂತ್ರಣ ಕ್ರಮಗಳ ಕುರಿತು ಕೇಂದ್ರ ವಿಶ್ಲೇಷಣೆಗೆ ಮುಂದಾಗಿದೆ.

 ಭಾರತದಲ್ಲಿ ಪ್ರಸ್ತುತ ಕೊರೊನಾ ಪ್ರಕರಣಗಳು

ಭಾರತದಲ್ಲಿ ಪ್ರಸ್ತುತ ಕೊರೊನಾ ಪ್ರಕರಣಗಳು

ಭಾರತದಲ್ಲಿ ಸೋಮವಾರ, ಆಗಸ್ಟ್ 2ರಂದು 40,134 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಂದು ದಿನದ ಅವಧಿಯಲ್ಲಿ 36,946 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 422 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು 3,16,95,958 ಕೊರೊನಾ ಪ್ರಕರಣಗಳಿದ್ದು, ಇದುವರೆಗೂ 3,08,57,467 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿನಿಂದ 4,24,773 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಜನವರಿ 16ರಿಂದ ಕೊರೊನಾ ಲಸಿಕೆ ಅಭಿಯಾನ ಆರಂಭಗೊಂಡಿದ್ದು, 47,22,23,639 ಮಂದಿಗೆ ಲಸಿಕೆ ನೀಡಲಾಗಿದೆ. ಕೊರೊನಾ ಮೂರನೇ ಅಲೆ ಭೀತಿ ಎದುರಾಗಿರುವ ಕಾರಣ ಲಸಿಕೆ ನೀಡುವಿಕೆ ವೇಗವನ್ನು ಹೆಚ್ಚಿಸಲಿರುವುದಾಗಿ ಕೇಂದ್ರ ತಿಳಿಸಿದೆ.

English summary
India may see another rise in Covid-19 cases in August with the third wave peaking in october, researchers have said,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X