ಜಡ್ಜ್‌ ಪೀಠದಲ್ಲಿ ಕುಳಿತು ಸೆಲ್ಫೀ ತೆಗೆದುಕೊಂಡ ಪೇದೆ ಜೈಲು ಪಾಲು

ಭೋಪಾಲ್‌, ಜು.2: ನ್ಯಾಯಾಲಯದಲ್ಲಿ ನ್ಯಾಯಾಧೀಶರು ಹಾಗೂ ಅವರು ಕುಳಿತುಕೊಳ್ಳುವ ಸ್ಥಾನಕ್ಕೆ ಮಹತ್ವವಿದೆ, ಯಾರೂ ಬೇಕಾದರೂ ಬಂದು ಕುಳಿತುಕೊಳ್ಳುವ ಆಸನವಲ್ಲ.

ಹಾಗಿದ್ದಾಗ ಯುವಕನೋರ್ವ ಬಂದು ಜಡ್ಜ್‌ ಸೀಟಿನಲ್ಲಿ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.ಪೊಲೀಸ್‌ ತರಬೇತಿ ಪಡೆಯುತ್ತಿದ್ದ ಯುವಕ ರಾಮ್‌ ಅವತಾರ್ ರಾವತ್‌ ಎನ್ನುವವನು ಜಡ್ಜ್‌ ಸೀಟಿನಲ್ಲಿ ಕುಳಿತು ಫೋಟೊ ಕ್ಲಿಕ್ಕಿಸಿಕೊಂಡಿದ್ದು, ಆತನನ್ನು ಬಂಧಿಸಲಾಗಿದೆ.

ರಾಮ್‌ ಅವತಾರ್‌ ಉಮರಿಯಾ ಕೋರ್ಟ್‌ ರೂಮಿನಲ್ಲಿ ಜ್ಯುಸಿಷಿಯಲ್‌ ಮ್ಯಾಜಿಸ್ಟ್ರೇಟ್‌ ಕೆ.ಪಿ. ಸಿಂಗ್‌ ಅವರ ಆಸನದಲ್ಲಿ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ. ಅಷ್ಟರಲ್ಲಿ ಕಚೇರಿಯ ಸಿಬ್ಬಂದಿ ಒಳಗೆ ಪ್ರವೇಶಿಸಿದ್ದಾರೆ, ದೃಶ್ಯವನ್ನು ನೋಡಿ ಆಕ್ಷೇಪಿಸಿದಿ ಸಿಬ್ಬಂದಿ ಜತೆ ಅಹಂಕಾರದಿಂದ ಯುವ ವರ್ತಿಸಿದ್ದಾನೆ ತಾನು ಪೊಲೀಸ್‌, ಏನು ಬೇಕಾದರೂ ಮಾಡುತ್ತೇನೆ ಎಂಬುದಾಗಿ ತಿರುಗಿ ಉತ್ತರ ನೀಡಿದ್ದಾನೆ.

Constable arrested who took selfie on judge seat

ನಂತರ ಪೊಲೀಸರು ಸ್ಥಳಕ್ಕೆ ಬಂದು ಯುವಕನನ್ನು ಬಂಧಿಸಿದ್ದಾರೆ, ಯುವಕನ ಅಪಾಧ ಸಾಭೀತಾದರೆ ಪೊಲೀಸ್‌ ಕೆಲಸದಿಂದ ವಜಾಗೊಳಿಸುವ ಸಾಧ್ಯತೆ ಇದೆ, ಬಂಧಿತನ ವಿರುದ್ಧ ಅತಿಕ್ರಮ ಪ್ರಕರಣ ದಾಖಲಾಗಿದೆ. ಸಾಮಾನ್ಯವಾಗಿ ಜಡ್ಜ್‌ ಆಸನದಲ್ಲಿ ಕುಳಿತುಕೊಳ್ಳುವಂತಹ ಸಾಹಸಕ್ಕೆ ಯಾರೂ ಕೂಡ ಕೈ ಹಾಕುವುದಿಲ್ಲ, ಅವರ ಆಸನದಲ್ಲಿ ಕುಳಿತುಕೊಳ್ಳುವ ಅರ್ಹತೆ ಇದ್ದರೆ ಮಾತ್ರ ಕುಳಿತುಕೊಳ್ಳಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+