ಮೋದಿ ಅಲ್ಪಸಾಧನೆಯ ಗರ್ವಿ,ಶೋಕಿಲಾಲ: ರಾಹುಲ್ ವಾಕ್ ಪ್ರಹಾರ
ಮುಂಬೈ, ಅ 21 (ಪಿಟಿಐ) : ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮಗುದೊಮ್ಮೆ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಕ್ ಪ್ರಹಾರ ನಡೆಸಿದ್ದಾರೆ. ಅಲ್ಪಸಾಧನೆ ಮಾಡಿ, ಮಹಾಗರ್ವಿಗಳಂತೆ ಕೆಲವರು ಮೆರೆಯುತ್ತಾರೆಂದು ಪರೋಕ್ಷವಾಗಿ ಮೋದಿ ವಿರುದ್ದ ರಾಹುಲ್ ಕಿಡಿಕಾರಿದ್ದಾರೆ.
ಸ್ಯಾಮ್ ಪಿತ್ರೋಡಾ ಅವರ 'Dreaming Big: My Journey to Connect India' ಪುಸ್ತಕ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ರಾಹುಲ್, ಅಲ್ಪಸಾಧನೆ ಮಾಡಿದವರು ಇತರರಿಗೆ ಮರ್ಯಾದೆಯನ್ನೂ ನೀಡುವುದಿಲ್ಲ, ಕೊಡಬೇಕು ಎನ್ನುವ ಜ್ಞಾನವೂ ಅವರಿಗೆ ಇರುವುದಿಲ್ಲ ಎಂದು ಮೋದಿ ವಿರುದ್ದ ರಾಹುಲ್ ವಾಕ್ ಪ್ರಹಾರ ನಡೆಸಿದ್ದಾರೆ.
ಮುಂಬೈನಲ್ಲಿ ತನ್ನ ಬಯೋಗ್ರಾಫಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸ್ಯಾಮ್ ಪಿತ್ರೋಡಾ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಸಾಧನೆ ಶೂನ್ಯ ಎನ್ನುವ ಆಪಾದನೆ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ. (ಮೋದಿಗೆ ಬಟ್ಟೆ ಬದಲಾಯಿಸುವ ಶೋಕಿ: ರಾಹುಲ್)
ಮೇಕ್ ಇನ್ ಇಂಡಿಯಾ ಯೋಜನೆಗೆ ಮೊದಲು ಒಳ್ಳೆಯ ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳು ಸುಧಾರಿಸಬೇಕಾಗಿದೆ. ಇದಕ್ಕೆ ಕೇಂದ್ರ ಸರಕಾರ ನುರಿತ ಕೆಲಸಗಾರರನ್ನು ನೇಮಿಸುವ ಅಗತ್ಯವಿದೆ ಎಂದು ಸ್ಯಾಮ್ ಪಿತ್ರೋಡ ಕಾರ್ಯಕ್ರಮಲ್ಲಿ ಹೇಳಿದ್ದಾರೆ.
ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರ ದಂಡೇ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ, ನಮ್ಮ ದೇಶದಲ್ಲಿ ಚುನಾವಣೆಯ ವೇಳೆ ರಾಜಕಾರಣಿಗಳು ನೀಡುವ ಸುಳ್ಳಿನ ಆಶ್ವಾಸನೆ ಬಿಸಿಬಿಸಿ ಬೋಂಡಾದಂತೆ ಮಾರಾಟವಾಗುತ್ತೆ ಎಂದು ಪಿತ್ರೋಡ ಹೇಳಿದ್ದಾರೆ.
ಮೋದಿ ವಿರುದ್ದ ಮುಂದುವರಿದ ರಾಹುಲ್ ವಾಗ್ದಾಳಿ, ಮುಂದೆ ಓದಿ..

ಮನಮೋಹನ್ ಸಿಂಗ್
ನಾನು ಪಿತ್ರೋಡ ಅವರನ್ನು ಹತ್ತಿರದಿಂದ ಬಲ್ಲೆ. ಒರಿಸ್ಸಾದ ಸಣ್ಣ ಹಳ್ಳಿಯಿಂದ ಬಂದು ದೇಶದ ಹೆಸರಾಂತ ಟೆಕ್ನೋಕಾರ್ಟ್ ಆಗುವುದೆಂದರೆ ಸಾಮಾನ್ಯ ಸಂಗತಿಯಲ್ಲ. ಪಿತ್ರೋಡ ಆ ಸಾಧನೆಯನ್ನು ಮಾಡಿದ್ದಾರೆಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ಸಣ್ಣ ಸಾಧನೆಯ ಗರ್ವಿಗಳು
ನಮ್ಮ ದೇಶದಲ್ಲಿ ಕೆಲವೊಂದು ರಾಜಕೀಯ ನಾಯಕರು ಇರುವುದು ಹೀಗೇ.. ಸಣ್ಣ ಸಾಧನೆ ಮಾಡಿ ಮಹಾಗರ್ವಿಗಳಂತೆ ವರ್ತಿಸುತ್ತಾರೆ. ಇತರರನ್ನು ಗೌರವಿಸುವುದಿಲ್ಲ ಎಂದು ರಾಹುಲ್ ಗಾಂಧಿ ಪರೋಕ್ಷವಾಗಿ ಮೋದಿ ವಿರುದ್ದ ವಾಕ್ ಪ್ರಹಾರ ನಡೆಸಿದ್ದಾರೆ.

ಎಲ್ಲರಿಗೂ ಸ್ಯಾಮ್ ಪಿತ್ರೋಡ ಮಾದರಿಯಾಗಲಿ
ನನ್ನ ತಂದೆ ರಾಜೀವ್ ಗಾಂಧಿ ಜೊತೆ ಸ್ಯಾಮ್ ಪಿತ್ರೋಡ ಕೆಲಸ ಮಾಡಿದ್ದಾರೆ. ಟೆಲಿಕಾಂ ಕ್ಷೇತ್ರದಲ್ಲಿ ಪಿತ್ರೋಡ ಮಹಾನ್ ಸಾಧನೆ ಮಾಡಿದ್ದಾರೆ. ಇಷ್ಟು ದೊಡ್ಡ ಸಾಧನೆ ಮಾಡಿದರೂ ಅವರ ವ್ಯಕ್ತಿತ್ವ ಮತ್ತು ನಡುವಳಿಕೆಯಲ್ಲಿ ಯಾವುದೇ ಬದಲಾವಣೆಯನ್ನು ನಾನು ಕಂಡಿಲ್ಲ, ಇದು ಎಲ್ಲರಿಗೂ ಮಾದರಿಯಾಗಲಿ - ರಾಹುಲ್ ಗಾಂಧಿ.

ಪಿತ್ರೋಡ ಸರಳ ಜೀವನ
ಪಿತ್ರೋಡ ಅವರು ಮೊದಲಿನಂತೆ ಸರಳವಾಗಿದ್ದಾರೆ. ಆದರೆ ನಮ್ಮ ದೇಶದಲ್ಲಿ ಕೆಲವರು ಅಲ್ಪ ಸಾಧನೆ ಮಾಡಿದ ಕೂಡಲೇ ಗರ್ವಿಗಳಾಗುತ್ತಾರೆ. ಇತರರನ್ನು ಗೌರವಿಸುವುದಿಲ್ಲ, ಶೋಕಿ ಮಾಡುತ್ತಾರೆ. ಇಂತವರು ಸ್ಯಾಮ್ ಪಿತ್ರೋಡ ಅವರಿಂದ ಕಲಿಯಲಿ - ರಾಹುಲ್ ಗಾಂಧಿ.

ಮೇಕ್ ಇನ್ ಇಂಡಿಯಾ ರಾಜೀವ್ ಅವರದ್ದು
ಡಿಜಿಟಲ್ ಕ್ಷೇತ್ರದಲ್ಲಿ ಈಗ ನಡೆಯುತ್ತಿರುವ ಕ್ರಾಂತಿ ತನ್ನಿಂದಾಗಿಯೇ ಎಂದು ಮೋದಿ ಹೆಸರು ಮಾಡುತ್ತಿದ್ದಾರೆ. ಡಿಜಿಟಲ್ ಇಂಡಿಯಾ ಕ್ರಾಂತಿಯ ಹರಿಕಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂದು ಪಿತ್ರೋಡ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.











Click it and Unblock the Notifications