ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಡೈರಿ ಮೂಲಕ ಕಾಂಗ್ರೆಸ್ ಹಾಸ್ಯ ಮಾಡುತ್ತಿದೆ ಎಂದ ರಾಜೀವ್ ಚಂದ್ರಶೇಖರ್

|
Google Oneindia Kannada News

ಬೆಂಗಳೂರು, ಮಾರ್ಚ್ 22: ಕಾಂಗ್ರೆಸ್ ರಕ್ಷಣೆಗೆ ಸೃಷ್ಟಿಸಿದ ನಕಲಿ ಡೈರಿ ಮೂಲಕ ಮತ್ತೆ ಕಾಂಗ್ರೆಸ್ ಹಾಸ್ಯ ಮಾಡುತ್ತಿದೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.

2017ರಲ್ಲಿ ಸ್ವಾಧೀನಪಡಿಸಿಕೊಳ್ಳಲಾದ ಸ್ಟೀಲ್ ಫ್ಲೈ ಓವರ್ ನೈಜ ಡೈರಿಗೆ ಬದಲಾಗಿ ಡಿ.ಕೆ.ಶಿವಕುಮಾರ್ ಸೃಷ್ಟಿಸಿದ ಡೈರಿ ಮೂಲಕ ಕಾಂಗ್ರೆಸ್ ಮತದಾರರಿಗೆ ಸುಳ್ಳು ಮಾಹಿತಿ ನೀಡಿ ಮತದಾರರನ್ನು ವಂಚಿಸುತ್ತಿದೆ ಎಂದು ಹೇಳಿದ್ದಾರೆ.

2017ರಲ್ಲಿ ಸ್ವಾಧೀನಪಡಿಸಿಕೊಳ್ಳಲಾದ ಸ್ಟೀಲ್ ಫ್ಲೈಓವರ್ ನೈಜ ಡೈರಿ ಕುರಿತು ಮತದಾರರಿಗೆ ಇನ್ನೂ ನೆನಪಿದೆ. ಈ ಡೈರಿಯು ಎಐಸಿಸಿ ಮೊದಲಾದ ನಿಗೂಢ ಹೆಸರುಗಳಿಗೆ ವರ್ಗಾಯಿಸಲಾದ ಆಶ್ಚರ್ಯಕರ ಎನಿಸುವಷ್ಟು ಮೌಲ್ಯದ ರೂ.600 ಕೋಟಿಯಷ್ಟು ಮೊತ್ತದ ಕುರಿತು ವಿವರಗಳನ್ನೊಳಗೊಂಡಿತ್ತು.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ರಾಹುಲ್ ಗಾಂಧಿ ಅವರ ನಾಚಿಕೆಗೇಡಿನ ಸುಳ್ಳುಗಳ ರಾಜಕೀಯವನ್ನು ಇದು ಬಹಿರಂಗಪಡಿಸುತ್ತಿದೆ. ದಶಕವೊಂದರ ಹಿಂದೆ ತಮ್ಮ ರಾಜಕೀಯ ಜೀವನದ ಮೊದಲ ದಿನದಿಂದ ಈ ವರೆಗೆ ಯಾವೊಂದು ದಿನವೂ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿಲ್ಲ ಮತ್ತು ದೇಶದ ಕುರಿತು ಯಾವೊಂದು ವಿಚಾರಗಳಲ್ಲೂ ಅವರಿಗೆ ಸ್ವಂತಿಕೆ ಇಲ್ಲ, ಗಾಂಧಿ ಕುಟುಂಬದ ದಶಕಗಳ ಭ್ರಷ್ಟಾಚಾರ,ಹಗರಣ,ಲೂಟಿಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕೇವಲ ದಯನೀಯ ನಾಚಿಕೆಗೇಡಿನ ಸುಳ್ಳುಗಳು ಮತ್ತಷ್ಟು ಹೆಚ್ಚು ಹೆಚ್ಚು ಸುಳ್ಳುಗಳ ಸುಳ್ಳಿನ ಕಂತೆ ಇದಾಗಿದೆ ಎಂದು ಹೇಳಿದ್ದಾರೆ.

ಎಂಎಲ್‍ಸಿ ಅವರಿಂದ ವಶಪಡಿಸಿಕೊಂಡ ಡೈರಿಯಲ್ಲಿ ಮುಖ್ಯ ನ್ಯಾಯಾಧೀಶರಿಗೆ ರೂ.250 ಕೋಟಿ ಪಾವತಿಸಲಾಗಿದೆ ಎಂಬ ಕುರಿತೂ ದಾಖಲಿಸಲಾಗಿತ್ತು!

ರಾಹುಲ್ ಗಾಂಧಿ ರಾಜಕೀಯದ ಕುರಿತು ಅರಿತುಕೊಳ್ಳಲು ಭಾರತೀಯ ನಾಗರಿಕರಿಗೆ ಮತ್ತು ಮತದಾರರಿಗೆ ಇದು ಮತ್ತೊಂದು ಶ್ರೇಷ್ಟ ಉದಾಹರಣೆ.ಜನರ ದಾರಿತಪ್ಪಿಸಲು ಸುಳ್ಳು ಹೇಳುವುದು-ವಿಲಕ್ಷಣ ಭರವಸೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದು ಹಾಗೂ ಮತದಾರರನ್ನು ವಂಚಿಸುವುದರ ಕುರಿತು ಇದೊಂದು ಶ್ರೇಷ್ಟ ಉದಾಹರಣೆ.

 ತೆರಿಗೆ ಹಣ ಸಾಗಾಟದಲ್ಲಿ ಡಿಕೆ ಶಿವಕುಮಾರ್ ಮುಳುಗಿದ್ದೂ ಗೊತ್ತು

ತೆರಿಗೆ ಹಣ ಸಾಗಾಟದಲ್ಲಿ ಡಿಕೆ ಶಿವಕುಮಾರ್ ಮುಳುಗಿದ್ದೂ ಗೊತ್ತು

ರಾಹುಲ್ ಗಾಂಧಿಯವರ ಪರಮಾಪ್ತ ಡಿ.ಕೆ.ಶಿವಕುಮಾರ್ ಆದಾಯ ತೆರಿಗೆ ಮತ್ತು ಅಕ್ರಮ ಹಣ ಸಾಗಾಟ ಪ್ರಕರಣಗಳಲ್ಲಿ ಕಂಠಪೂರ್ತಿ ಮುಳುಗಿರುವುದೂ ಜನರ ನೆನಪಿನಲ್ಲಿದೆ.

- ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯಾವೊಂದು ದಿನವೂ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿಲ್ಲ ಮತ್ತು ಭಾರತಕ್ಕಾಗಿ ತನ್ನದೇ ಆದಂತಹ ಯಾವುದೇ ಸ್ವಂತ ವಿಚಾರಗಳನ್ನೂ ಹೊಂದಿಲ್ಲ. ಕೇವಲ ನಾಚಿಕೆಗೇಡಿ ಸುಳ್ಳುಗಳ ಸರದಾರ.
ಕಾಂಗ್ರೆಸ್ ಬಳಿ ಇರುವುದು ನಕಲಿ ಡೈರಿ

ಕಾಂಗ್ರೆಸ್ ಬಳಿ ಇರುವುದು ನಕಲಿ ಡೈರಿ

ಬಿಜೆಪಿಯ ಜನಪ್ರಿಯ ಮಾಜಿ ಮುಖ್ಯಮಂತ್ರಿಯವರು ಪ್ರಸ್ತುತ ಸಂಪುಟ ದರ್ಜೆ ಸಚಿವರೊಬ್ಬರಿಗೆ 150 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತ ನೀಡಿರುವ ಕುರಿತಾದ ವಿವರಗಳನ್ನೊಳಗೊಂಡ ಡೈರಿಯೊಂದು ಆದಾಯ ತೆರಿಗೆ ಇಲಾಖೆ ಬಳಿ ಇದೆ ಎಂಬ ಮಾಧ್ಯಮವೊಂದರ ಮಸಾಲೆ ಸುದ್ದಿ ಹಾಸ್ಯಾಸ್ಪದವಾಗಿದೆ. ಕಾಂಗ್ರೆಸ್ ಪಕ್ಷದ ನಾಚಿಕೆಗೇಡಿನ ಸುಳ್ಳುಗಳ ಮತ್ತು ಈ ಹಿಂದಿನ ಡೈರಿಯನ್ನು ಮರೆಮಾಚುವ ಕುರಿತು ಹೇಳಿಕೆ ನೀಡಿದ್ದಾರೆ.

ನಕಲಿ ಡೈರಿ ಸೃಷ್ಟಿಸಿದ್ದು ಡಿಕೆ ಶಿವಕುಮಾರ್

ನಕಲಿ ಡೈರಿ ಸೃಷ್ಟಿಸಿದ್ದು ಡಿಕೆ ಶಿವಕುಮಾರ್

ವಿಧಾನಪರಿಷತ್ ಸದಸ್ಯ ಕರ್ನಾಟಕ ಕಾಂಗ್ರೆಸ್‍ನ ಗೋವಿಂದರಾಜ್ ಅವರ ಮನೆಯಲ್ಲಿ 2018ರ ಆರಂಭದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದ ಹಿರಿಯ ಕಾಂಗ್ರೆಸ್ ನಾಯಕರಿಗೆ ಮಾಡಿದ್ದ ಪಾವತಿಗಳ ವಿವರಗಳನ್ನೊಳಗೊಂಡ ಸ್ಟೀಲ್ ಫ್ಲೈಒವರ್ (ಉಕ್ಕಿನ ಸೇತುವೆ) ನೈಜ ಡೈರಿಗೆ ವಿರುದ್ಧವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಪರಮಾಪ್ತ ಡಿ.ಕೆ.ಶಿವಕುಮಾರ್ ಸೃಷ್ಟಿಸಿದ್ದ ನಕಲಿ ಡೈರಿ ಕುರಿತು ಕರ್ನಾಟಕದ ಪ್ರತಿಯೊಬ್ಬರಿಗೂ ತಿಳಿದೇ ಇದೆ.

ಕಾಂಗ್ರೆಸ್‍ನ ನಿಧಿ ಸಂಗ್ರಹಕಾರರೂ ಅನಿಸಿಕೊಂಡಿರುವ ವಿಧಾನಪರಿಷತ್ ಸದಸ್ಯ ಗೋವಿಂದರಾಜ್ ಅವರ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದ್ದ ಡೈರಿ ಎಕೆಜಿ03ಯು ರೂ.600 ಕೋಟಿಯಷ್ಟು ಅಗಾಧ ಮೊತ್ತದ ಹಣವನ್ನು ನಿಗೂಢ ಹೆಸರುಗಳ ಮೂಲಕ ಎಐಸಿಸಿ,ಎಪಿ,ಎಂ.ವೋರಾ,ಆಫೀಸ್, ಆರ್‍ಜಿ ಆಫೀಸ್ ಮತ್ತು ಡಿಜಿಎಸ್ ಮೊದಲಾದ ಹೆಸರುಗಳಲ್ಲಿ ವರ್ಗಾಯಿಸಿರುವುದರ ಕುರಿತು ವಿವರಗಳನ್ನೊಳಗೊಂಡಿತ್ತು.

ಸ್ಟೀಲ್‌ ಬ್ರಿಡ್ಜ್ ಹೆಸರಲ್ಲಿ 65 ಕೋಟಿ ಸ್ವೀಕಾರ

ಸ್ಟೀಲ್‌ ಬ್ರಿಡ್ಜ್ ಹೆಸರಲ್ಲಿ 65 ಕೋಟಿ ಸ್ವೀಕಾರ

ಸ್ಟೀಲ್‍ಬ್ರಿಡ್ಜ್ ಹೆಸರಲ್ಲಿ 65 ಕೋಟಿ ರೂಗಳನ್ನು ಸ್ವೀಕರಿಸಿರುವ ಕುರಿತೂ ಡೈರಿಯಲ್ಲಿ ದಾಖಲಿಸಲಾಗಿತ್ತು. 7 ಕೋಟಿ ರೂಗಳನ್ನು ಬೆಂಗಳೂರು ಮಹಾನಗರಪಾಲಿಕೆ ಚುನಾವಣೆಗಾಗಿ ಮಾಧ್ಯಮವೊಂದಕ್ಕೆ ಪಾವತಿಸಿರುವುದನ್ನೂ ದಾಖಲಿಸಿತ್ತು. ಮೊದಲಕ್ಷರಗಳು(ಇನಿಷಿಯಲ್ಸ್) ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ(ಎಐಸಿಸಿ), ಎಂ.ವೋರಾ(ಮೋತಿಲಾಲ್ ವೋರಾ),ಎಸ್‍ಜಿ ಆಫೀಸ್(ಸೋನಿಯಾ ಗಾಂಧಿ ಆಫೀಸ್) ಆರ್‍ಜಿ ಆಫೀಸ್(ರಾಹುಲ್‍ಗಾಂಧಿ ಆಫೀಸ್) ಹಾಗೂ ದಿಗ್ವಿಜಯ್‍ಸಿಂಗ್ (ಡಿಜಿಎಸ್) ಎಂದೇ ಧ್ವನಿಸುತ್ತಿದ್ದವು.

ನಿಮಗೆ ತಿಳಿದೇ ಇರುವಂತೆ ರಾಹುಲ್‍ಗಾಂಧಿ ಪರಮಾಪ್ತ ಡಿ.ಕೆ.ಶಿವಕುಮಾರ್ ಆದಾಯ ತೆರಿಗೆ ಹಾಗೂ ಅಕ್ರಮ ಹಣ ಸಾಗಾಟ ಪ್ರಕರಣಗಳಲ್ಲಿ ಕಂಠಪೂರ್ತಿ ಮುಳುಗಿದ್ದು 2017,ಮುನ್ನ ದಾಳಿ ನಡೆಸಲಾಗಿತ್ತು ಹಾಗೂ ಇದೀಗ ಸಾಕ್ಷ್ಯ ನಾಶ ಮೊದಲಾದ ಇತರೇ ವಿಚಾರಗಳಲ್ಲಿ ಶಿಕ್ಷೆಗೊಳಪಡುತ್ತಿದ್ದಾರೆ.

ಇದಕ್ಕೂ ಮುನ್ನ ಅವರು ಈ ನಕಲಿ ಡೈರಿ ಬಳಸಿದ್ದರು ಹಾಗೂ ಎಲ್ಲರಿಗೂ ಈ ಕುರಿತು ಅರಿವಿದ್ದರಿಂದ ಇದು ಫ್ಲಾಪ್ ಆಗಿತ್ತು.

ಲೋಕಾಯುಕ್ತರಿಗೆ ಮನವಿ ಪತ್ರ

ಲೋಕಾಯುಕ್ತರಿಗೆ ಮನವಿ ಪತ್ರ

16 ಫೆಬ್ರವರಿ 2017ರಂದು ನಾನು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿಯವರನ್ನು ಭೇಟಿಯಾಗಿದ್ದು ಸ್ಟೀಲ್ ಫ್ಲೈಓವರ್ ಕಿಕ್‍ಬ್ಯಾಕ್ ಕುರಿತಂತೆ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಮನವಿಪತ್ರ ಸಲ್ಲಿಸಿದ್ದೆ. ಐಟಿ ದಾಳಿಯಲ್ಲಿ ವಶಪಡಿಸಿಕೊಳ್ಳಲಾಗಿದ್ದ ಸ್ಟೀಲ್‍ಫ್ಲೈಓವರ್ ಗುತ್ತಿಗೆ ನೀಡುವಲ್ಲಿನ ಭ್ರಷ್ಟಾಚಾರದ ಕುರಿತಂತೆ ವಿವರಗಳಿದ್ದ ಎಂಎಲ್‍ಸಿ ಡೈರಿಯನ್ನೂ ಬಹಿರಂಗಪಡಿಸುವಂತೆ ವಿನಂತಿಸಿದ್ದೆ.

ಇದು ಕೇಂಬ್ರಿಡ್ಜ್ ಅನಲಿಟಿಕಾದ ವ್ಯರ್ಥ ಪ್ರಯತ್ನದಂತೆ ಮತ್ತು ಯಾವಾಗ ರಾಹುಲ್‍ಗಾಂಧಿಯವರಿಗೆ ಪರಿಸ್ಥಿತಿ ನಿಸ್ತೇಜಗೊಂಡ ಅಥವಾ ಕಳೆಗುಂದಿದ ಸಂದರ್ಭಗಳಲ್ಲಿ ಅನೇಕ ಪ್ರಶ್ನೆಗಳನ್ನು ಕೇಳಿದ್ದಾಗ್ಯೂ ವಿಧೇಯ ವಿದ್ಯಾರ್ಥಿಯಂತೆ ನಡೆದುಕೊಳ್ಳುವ ಪ್ರಯತ್ನವಲ್ಲದೇ ಮತ್ತೇನೂ ಅಲ್ಲ.

ಕಾಂಗ್ರೆಸ್‌ಗೆ ಮತ್ತೊಮ್ಮೆ ಮುಜುಗರ

ಕಾಂಗ್ರೆಸ್‌ಗೆ ಮತ್ತೊಮ್ಮೆ ಮುಜುಗರ

ಮತ್ತೊಮ್ಮೆ ಭಾರೀ ವೈಫಲ್ಯದಿಂದಾಗುವ ಮುಜುಗರವನ್ನು ತಪ್ಪಿಸಲು ಹಾಗೂ ಮತ್ತೆ ಗುಟ್ಟು ರಟ್ಟಾಗುವುದರಿಂದ ರಕ್ಷಿಸಲು ಸ್ನೇಹಿ ಪತ್ರಕರ್ತನಿಂದ ಮತ್ತೊಂದು ಸುಳ್ಳಿನೊಂದಿಗೆ ಪಡೆದ ಸುಳಿವು ಗಾಂಧಿ ಪರಿವಾರದಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಲ್ಲದೇ ಮತ್ತೇನೂ ಅಲ್ಲ.
ಪ್ರಥಮ ಮಾಹಿತಿ ವರದಿ ಅವರಿಗೆ ಸಂಬಂಧಿಸಿದ್ದಲ್ಲ ಎಂದಾಗ ಎಂಎಲ್‍ಸಿ ಗೋವಿಂದರಾಜ್ ಗಾಂಧಿ ಕುಟುಂಬವನ್ನು ಹೇಗೆ ರಕ್ಷಿಸಿದರು ಎಂಬುದನ್ನು ನಾವೆಂದಿಗೂ ಮರೆಯಲಾಗದು.

English summary
Rajya sabha member Rajeev Chandrasekhar alleged that congress leadrs are using fake dairy against BJP to hide his corrupt Face.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X