ರಾಹುಲ್ ಗಾಂಧಿಗೆ ಕಂಕಣಭಾಗ್ಯ, ಊರೆಲ್ಲಾ ಗುಲ್ಲೋಗುಲ್ಲು!

Written By:
Subscribe to Oneindia Kannada

ಆಷಾಡ ಕಳೆದು ಶ್ರಾವಣ ಮಾಸದಲ್ಲಿ ಅಂದರೆ ಬರುವ ಆಗಸ್ಟ್ ತಿಂಗಳಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಇದಕ್ಕೆ ಕಾರಣ, ನೆಹರೂ ಕುಟುಂಬದ ಕಡು ವಿರೋಧಿ, ಬಿಜೆಪಿ ಮುಖಂಡ ಮತ್ತು ಸದಾ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಸುಬ್ರಮಣಿಯನ್ ಸ್ವಾಮಿಯವರ ಟ್ವೀಟ್ ಸಂದೇಶ.

ಆಗಸ್ಟ್ ತಿಂಗಳಲ್ಲಿ ರಾಹುಲ್ ಗಾಂಧಿ, ಉತ್ತರಪ್ರದೇಶ ಮೂಲದ ಬ್ರಾಹ್ಮಣ ಕುಟುಂಬದ ಯುವತಿಯನ್ನು ಮದುವೆಯಾಗಲಿದ್ದಾರೆ. ಉತ್ತರಪ್ರದೇಶ ಚುನಾವಣೆಯ ಹೊಸ್ತಿಲಲ್ಲಿ ಇದೊಂದು ರೀತಿಯ ಸ್ಟಂಟ್ ಎಂದು ಸ್ವಾಮಿ ಟ್ವೀಟ್ 'ಕಿಚ್ಚು'ಹಚ್ಚಿಸಿ ಬಿಟ್ಟಿದ್ದಾರೆ. ಪತ್ರಕರ್ತೆ ಸಾಗರಿಕ ಘೋಷ್ ಕೂಡಾ ಇದೇ ರೀತಿ ಟ್ವೀಟ್ ಮಾಡಿದ್ದಾರೆ.

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವಗೊಂಡ ನಂತರ ಕಾಂಗ್ರೆಸ್ ಮುಖಂಡರ ವಿರುದ್ದ ಅದರಲ್ಲೂ ಪ್ರಮುಖವಾಗಿ ನೆಹರೂ ಕುಟುಂಬದ ವಿರುದ್ದ ಹರಿಹಾಯುತ್ತಲೇ ಇರುವ ಸ್ವಾಮಿ, ನ್ಯಾಷನಲ್ ಹೆರಾಲ್ಡ್ ಕೇಸಿನ ಮೂಲಕ ಸೋನಿಯಾ ಮತ್ತು ರಾಹುಲ್ ಗಾಂಧಿಯವರನ್ನು ಕೋರ್ಟಿಗೆ ಬರುವಂತೆ ಮಾಡಿದ್ದರು. (ಮುಸ್ಲಿಂ ಹುಡ್ಗಿ ಜೊತೆ ರಾಹುಲ್, ಸ್ವಾಮಿ ಟ್ವೀಟ್)

2015ರಲ್ಲಿ ಫ್ರಾನ್ಸ್ ದೇಶಕ್ಕೆ ರಾಹುಲ್ ಗಾಂಧಿ ಹೋಗಿದ್ದು ಇಟೆಲಿಯಲ್ಲಿ ನೆಲೆಸಿರುವ ಆಫ್ಘಾನ್‌ ಮೂಲದ ಮುಸ್ಲಿಂ ಸಮುದಾಯದ ಯುವತಿಯನ್ನು ಭೇಟಿ ಮಾಡಲು ಎಂದು ಈ ಹಿಂದೆ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದರು.

ಸುಬ್ರಮಣಿಯನ್ ಸ್ವಾಮಿ ಟ್ವೀಟಿಗೆ ಕಾಂಗ್ರೆಸ್ ಪ್ರತ್ಯುತ್ತರ, ಮುಂದೆ ಓದಿ..

ರಾಹುಲ್ ಇನ್ನೂ ಮಗು

ರಾಹುಲ್ ಇನ್ನೂ ಮಗು

2012ರಲ್ಲಿನ ಉತ್ತರಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಸಾಧನೆಯನ್ನು ಉಲ್ಲೇಖಿಸುತ್ತಾ, 38ವರ್ಷದ ಅಖಿಲೇಶ್ ಯಾದವ್ ಈಗ ಮೂರು ಮಕ್ಕಳ ತಂದೆ, 42ವರ್ಷದ ರಾಹುಲ್ ಗಾಂಧಿ ಇನ್ನೂ ಮಕ್ಕಳಿಗಿಂತ ಕಡೆಯೆಂದು ಸ್ವಾಮಿ ಲೇವಡಿ ಮಾಡಿದ್ದರು.

ಸಾಗರಿಕ ಘೋಷ್ ಟ್ವೀಟ್

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಉತ್ತರಪ್ರದೇಶದ, ವಿದ್ಯಾವಂತ ಕುಟುಂಬದ ಯುವತಿಯನ್ನು ಮದುವೆಯಾಗಲಿದ್ದಾರೆ ಎನ್ನುವ ಅನಧಿಕೃತ ಮೂಲಗಳಿಂದ ಬಂದ ಸುದ್ದಿಯಿಂದ ಥ್ರಿಲ್ ಆಗಿದ್ದೇನೆ.

ಸುಬ್ರಮಣಿಯನ್ ಸ್ವಾಮಿ

ಉತ್ತರಪ್ರದೇಶ ಚುನಾವಣೆಗಾಗಿ ಬುದ್ದು ಅಲ್ಲಿನ ಬ್ರಾಹ್ಮಣ ಕುಟುಂಬದ ಹುಡುಗಿಯನ್ನು ಮದುವೆಯಾಗಲಿದ್ದಾರೆ.

ಕಾಂಗ್ರೆಸ್ ನಿರಾಕರಣೆ

ಕಾಂಗ್ರೆಸ್ ನಿರಾಕರಣೆ

ಸುಬ್ರಮಣಿಯನ್ ಸ್ವಾಮಿ ಮತ್ತು ಸಾಗರಿಕ ಘೋಷ್ ಟ್ವೀಟ್ ಸಂದೇಶದ ಬಗ್ಗೆ ಉತ್ತರಿಸುತ್ತಾ ಕಾಂಗ್ರೆಸ್ ಸಂಪರ್ಕ ವಿಭಾಗದ ಮುಖ್ಯಸ್ಥ ರಣದೀಪ್ ಸರ್ಜೇವಾಲ ಈ ಸುದ್ದಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಈ ಹಿಂದೆ ಕೂಡಾ ಸ್ವಾಮಿಯಿಂದ ಟ್ವೀಟ್

ಈ ಹಿಂದೆ ಕೂಡಾ ಸ್ವಾಮಿಯಿಂದ ಟ್ವೀಟ್

ಈ ಹಿಂದೆ ಕೂಡಾ ಎರಡು ಬಾರಿ ರಾಹುಲ್ ಮದುವೆಯ ವಿಚಾರದಲ್ಲಿ ಸ್ವಾಮಿ ಸುಳ್ಳು ಟ್ವೀಟ್ ಮಾಡಿದ್ದರು. ಬ್ರಾಹ್ಮಣರ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ರಾಹುಲ್‌ ಮದ್ವೆ ಆಗ್ತಾರೆ ಎಂದು ಹೇಳಿ ಸ್ವಾಮಿ, ರಾಹುಲ್‌ ಅವರ ವರ್ಚಸ್ಸು ಹಾಳು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress terms AICC Vice President Rahul Gandhi's marriage rumours baseless. The social media was abuzz over reports related to Rahul Gandhi's marriage after BJP leader Subramanian Swamy tweeted that the event was being planned keeping in mind the Uttar Pradesh Assembly polls next year.
Please Wait while comments are loading...