ಮಣಿಪುರ: 40 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್

ಇಂಫಾಲ, ಜನವರಿ 20: ಮಣಿಪುರ ವಿಧಾನಸಭಾ ಚುನಾವಣೆ2022ಗಾಗಿ ಕಾಂಗ್ರೆಸ್ ಪಕ್ಷದ 40 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ ತೌಬಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸಿಂಗ್ 2002 ರಿಂದ 2017 ರವರೆಗೆ ಮಣಿಪುರದ ಮುಖ್ಯಮಂತ್ರಿಯಾಗಿದ್ದರು.

ಮಾಜಿ ಉಪಮುಖ್ಯಮಂತ್ರಿ ಮತ್ತು ಮಣಿಪುರ ಪ್ರದೇಶ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಗೈಖಂಗಮ್ ಅವರು ನುಂಗ್ಬಾ (ಎಸ್‌ಟಿ) ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಣಿಪುರ ವಿಧಾನಸಭೆಯ ಮಾಜಿ ಸ್ಪೀಕರ್ ತೊಕ್ಚೊಮ್ ಲೋಕೇಶ್ವರ್ ಸಿಂಗ್ ಅವರನ್ನು ಪಕ್ಷವು ಅವರ ಖುಂಡ್ರಕ್ಪಾಮ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.

ಇತ್ತೀಚೆಗೆ ಮಣಿಪುರ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ರತನ್‌ಕುಮಾರ್ ಸಿಂಗ್ ಅವರು ಮಯಾಂಗ್ ಇಂಫಾಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

Congress Releases First List of 40 Candidates for Manipur Assembly Polls

ಮಣಿಪುರ ವಿಧಾನಸಭಾ ಚುನಾವಣೆಯು ಫೆಬ್ರವರಿ 27 ಮತ್ತು ಮಾರ್ಚ್ 3 ರಂದು 60 ಸದಸ್ಯರ ರಾಜ್ಯ ವಿಧಾನಸಭೆಯನ್ನು ಆಯ್ಕೆ ಮಾಡಲು ಎರಡು ಹಂತಗಳಲ್ಲಿ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ.

ಕೊರೊನಾ ಸಾಂಕ್ರಾಮಿಕದ ನಡುವೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಐದು ರಾಜ್ಯಗಳ ಪೈಕಿ ಮಣಿಪುರದ 60 ವಿಧಾನಸಭೆ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ಧವಾಗುತ್ತಿದೆ.

Recommended Video

      ಸರಣಿ ಸೋತ ಬಳಿಕ Rahul ಹೇಳಿದ್ದೇನು | Oneindia Kannada

      ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆ ಪ್ರಕಾರ, ಬಿಜೆಪಿಗೆ 31 ರಿಂದ 37 ಸ್ಥಾನಗಳು ಸಿಗುತ್ತವೆ. ಆಡಳಿತ ಪಕ್ಷಕ್ಕೆ ಕಠಿಣ ಪೈಪೋಟಿ ನೀಡದ ಕಾಂಗ್ರೆಸ್ 13-19 ಸ್ಥಾನಗಳನ್ನು ಪಡೆಯಬಹುದು. ಇದರ ಹೊರತಾಗಿ ಎನ್‌ಪಿಪಿ ಪಕ್ಷವು 3 ರಿಂದ 9 ಸ್ಥಾನ, ಎನ್‌ಪಿಎಫ್ ಪಕ್ಷವು 1 ರಿಂದ 5 ಸ್ಥಾನ, ಇತರರು 0 ರಿಂದ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆ ಮೂಲಕ ಮಣಿಪುರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ.

      ಮಣಿಪುರದಲ್ಲಿ ಶೇಕಡಾವಾರು ಮತ ಪ್ರಮಾಣವನ್ನು ಲೆಕ್ಕ ಹಾಕಿದಾಗ ಬಿಜೆಪಿಗೆ ಶೇ. 39.2ರಷ್ಟು ಮತಗಳು ಬೀಳಲಿದ್ದು, ಅದೇ ರೀತಿ ಕಾಂಗ್ರೆಸ್ ಶೇ 28.7ರಷ್ಟು ಗಳಿಸಲಿದ್ದು, 2017ಕ್ಕೆ ಹೋಲಿಸಿದರೆ ಶೇಕಡಾವಾರು ಮತಪ್ರಮಾಣದಲ್ಲೂ ಇಳಿಕೆಯಾಗಿದೆ. 2017ರಲ್ಲಿ ಶೇ.35.10ರಷ್ಟು ಮತಗಳನ್ನು ಗಳಿಸಿತ್ತು. ಮಿಕ್ಕಂತೆ ಎನ್‌ಪಿಪಿ ಪಕ್ಷವು ಶೇ 14.2, ಎನ್‌ಪಿಎಫ್ ಪಕ್ಷವು ಶೇ 6.4, ಇತರರು ಶೇ 11.5ರಷ್ಟು ಗಳಿಸಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+