ನರೇಂದ್ರ ಮೋದಿ ಬೆಂಬಲಿಗರನ್ನು 'ಮೂರ್ಖರು' ಎಂದು ಕರೆದ ರಮ್ಯಾ

ನವದೆಹಲಿ, ಮಾರ್ಚ್ 14: ವಿವಾದಾತ್ಮಕ ಟ್ವೀಟ್ ಮತ್ತು ನಡೆಗಳಿಂದ ಸುದ್ದಿಯಲ್ಲಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ, ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳನ್ನು ಕೆರಳಿಸುವ ಮತ್ತೊಂದು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರ ಬೆಂಬಲಿಗರನ್ನು 'ಮೂರ್ಖರು' ಎಂದು ಲೇವಡಿ ಮಾಡುವ ಮೀಮ್ ಅನ್ನು ರಮ್ಯಾ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ರಮ್ಯಾ ಅವರ ಟ್ವೀಟ್‌ಗೆ ಅಷ್ಟೇ ಖಾರವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಸಾಮಾಜಿಕ ಜಾಲತಾಣದಲ್ಲಿ ಮೋದಿ ಮತ್ತು ಬಿಜೆಪಿ ವಿರುದ್ಧ ಈ ರೀತಿ ಟ್ವೀಟ್‌ಗಳನ್ನು ಮಾಡಿ ಅಭಿಮಾನಿಗಳ ಕೋಪಕ್ಕೆ ತುತ್ತಾಗುವುದು ರಮ್ಯಾಗೆ ಹೊಸತೇನಲ್ಲ. ಮೋದಿ ಅವರ ಚಿತ್ರದ ಮೇಲೆ 'ಚೋರ್' ಎಂದು ಬರೆದು 'ಚೋರ್ ಪ್ರಧಾನಿ ಚುಪ್ ಹೈ' ಎಂದು ಪೋಸ್ಟ್ ಮಾಡುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಕ್ಕೂ ಮೊದಲು, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ ಕೆಳಭಾಗದಲ್ಲಿದ್ದ ಮೋದಿ ಅವರನ್ನು ಹಕ್ಕಿಯ ಹಿಕ್ಕೆಗೆ ಹೋಲಿಸಿದ ರಮ್ಯಾ ಅವರ ಟ್ವೀಟ್‌ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

'ನಿಮಗೆ ಗೊತ್ತೇ? ರಾಹುಲ್ ಗಾಂಧಿ ಅವರ 3ಕ್ಕೆ 3ರಷ್ಟು ಬೆಂಬಲಿಗರು ರಾಹುಲ್ ಅವರಷ್ಟೇ ಮೂರ್ಖರು' ಎಂದು ಮೋದಿ ಬೆಂಬಲಿಗರೊಬ್ಬರು ರಾಹುಲ್ ಗಾಂಧಿ ಅವರ ಫೋಟೊವನ್ನು ಇದೇ ರೀತಿ ಬಳಸಿ ಮೀಮ್ ಸೃಷ್ಟಿಸಿದ್ದಾರೆ.

ಆದರೆ, ಮೋದಿ ಅಭಿಮಾನಿಗಳ ಟೀಕೆಗೆ ರಮ್ಯಾ ತಲೆಕೆಡಿಸಿಕೊಂಡಿಲ್ಲ. ತಮ್ಮ ಟ್ವೀಟ್‌ಗೆ ಬರುವ ಪ್ರತಿಕ್ರಿಯೆಗಳಿಗೆ ಉತ್ತರಿಸುವ ಗೋಜಿಗೆ ಹೋಗದ ಅವರು, ಮೊದಿ ವಿರುದ್ಧದ ಟೀಕೆಗಳನ್ನು ಮುಂದುವರಿಸಿದ್ದಾರೆ.

ಬೆಂಬಲಿಗರು ಮೂರ್ಖರು

ಮೋದಿ ಅವರ ಚಿತ್ರವನ್ನು ಬಳಸಿಕೊಂಡಿರುವ ಅವರು 'ನಿಮಗೆ ಗೊತ್ತೇ? ಮೋದಿ ಅವರ ಬೆಂಬಲಿಗರಲ್ಲಿ 3ನೇ 1ರಷ್ಟು ಮಂದಿ ಉಳಿದ ಎರಡರಷ್ಟು ಬೆಂಬಲಿಗರಷ್ಟೇ ಮೂರ್ಖರು' ಎಂದು ಮೀಮ್ ಪ್ರಕಟಿಸಿದ್ದಾರೆ. ಜತೆಗೆ 'ನನ್ನ ಫೇವರಿಟ್! ಅವರು ಎಷ್ಟು ಮುದ್ದಾಗಿದ್ದಾರಲ್ಲವೇ?' ಎಂದು ವ್ಯಂಗ್ಯವಾದ ಕ್ಯಾಪ್ಷನ್ ಹಾಕಿದ್ದಾರೆ.

ಶೇ 31ರಷ್ಟು ಮಂದಿ ಮೂರ್ಖರೇ?

ಈ ಮೂರ್ಖತನ ನಿಮ್ಮನ್ನು ಮೇ 23ರಂದು 44 ಸೀಟುಗಳಿಂದ 4ಕ್ಕೆ ತರಲಿದೆ. ನೀವು ಹೇಳಲು ಪ್ರಯತ್ನಿಸುತ್ತಿರುವುದೇನು? ಭಾರತದ ಶೇ 31ರಷ್ಟು ಮತದಾರರು ಮೂರ್ಖರೆಂದೇ? ಈ ಹೇಳಿಕೆಯೇ ನಿಮ್ಮ 20-25ರಷ್ಟು ಸೀಟುಗಳಿಗೆ ಎರವಾಗಲಿದೆ ಎಂದು ಸೋನು ಸುರಾನಾ ಪ್ರತಿಕ್ರಿಯಿಸಿದ್ದಾರೆ.

ಮತದಾರರಿಗೆ ಅವಮಾನ

ರಮ್ಯಾ ಅವರ ಹೇಳಿಕೆ ಮೋದಿ ಅವರ ಕಟ್ಟಾ ಬೆಂಬಲಿಗರನ್ನು ಮಾತ್ರವಲ್ಲದೆ, ಕಳೆದ ಚುನಾವಣೆಯಲ್ಲಿ ಮೋದಿ ಅವರಿಗೆ ಮತಚಲಾಯಿಸಿದ ಅನೇಕರಲ್ಲಿಯೂ ಆಕ್ರೋಶ ಉಂಟುಮಾಡಿದೆ. ನೀವು ಭಾರತದ ಮತದಾರರಿಗೆ ಅವಮಾನ ಮಾಡಿದ್ದೀರಿ ಎಂದು ಅನೇಕರು ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಕೂಡ

ರಮ್ಯಾ ಹೇಳಿಕೆಯನ್ನು ಮೋದಿ ಅಭಿಮಾನಿಯೊಬ್ಬರು ಅವರಿಗೇ ತಿರುಗುಬಾಣವಾಗಿ ಬಳಸಿದ್ದಾರೆ. ಮೋದಿ ಅವರಿಂದ ನಾನು ಕಲಿಯುತ್ತಿದ್ದೇನೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ರೋಷನ್ ಕ್ಷತ್ರಿಯ ಎಂಬುವವರು ನೆನಪಿಸಿದ್ದಾರೆ. 'ಅವರೆಲ್ಲರೂ ರಾಹುಲ್ ಗಾಂಧಿ ಅವರಂತೆ ಎಂದು ನೀವು ಹೇಳುತ್ತೀರಾ? ಏಕೆಂದರೆ ತಾವು ನರೇಂದ್ರ ಮೋದಿ ಅವರಿಂದಲೂ ಕಲಿಯುತ್ತಿರುವುದಾಗಿ ರಾಹುಲ್ ಗಾಂಧಿ ನಿನ್ನೆ ಹೇಳಿದ್ದರು ಎಂಬುದಾಗಿ ಟ್ವೀಟ್ ಮಾಡಿದ್ದಾರೆ.

ನೋಬೆಲ್ ಬಹುಮಾನ ಕೊಡಬೇಕು

ಕಾಂಗ್ರೆಸ್‌ನ ಎಲ್ಲ ಕಾರ್ಯಕರ್ತರು ಅವರ ತಾಳ್ಮೆಗಾಗಿ ನೊಬೆಲ್ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಏಕೆಂದರೆ ಅವರು ಯಾವುದೇ ವಿಷಯವಿರಲಿ, ಸಹಿಸಿಕೊಂಡಿದ್ದಾರೆ. ಪಪ್ಪುವನ್ನು ಸಮರ್ಥಿಸಿಕೊಳ್ಳುತ್ತಾರೆ. ನಿಜಕ್ಕೂ ಗ್ರೇಟ್ ಎಂದು ಡಾ. ವೈಭವ ಕೃಷ್ಣ ಲೇವಡಿ ಮಾಡಿದ್ದಾರೆ.

ರಾಹುಲ್ ಗಾಂಧಿಯಂತೆ ಅಂದಿದ್ದಕ್ಕೆ...

'ನೀನು ರಾಹುಲ್ ಗಾಂಧಿಯಂತೆ ಮಾತನಾಡುತ್ತಿ' ಎಂದು ಒಮ್ಮೆ ನನ್ನ ಕಾಂಗ್ರೆಸ್ ಬೆಂಬಲಿಗ ಗೆಳೆಯನಿಗೆ ಹೇಳಿದ್ದೆ. ನಾನು ಆತನನ್ನು ಹೊಗಳಿದ್ದು. ಆದರೆ, ಆತ ಒಂದು ವಾರ ನನ್ನ ಬಳಿ ಮಾತನಾಡುವುದನ್ನೇ ನಿಲ್ಲಿಸಿದ್ದ ಎಂದು ರಾಹುಲ್ ಸಿ.ಕೆ. ಎಂಬುವವರು ವ್ಯಂಗ್ಯದ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+