Women's Reservation Bill: ಮಸೂದೆ ಬೆಂಬಲಿಸಿ ಅಪೂರ್ಣ ಎಂದು ರಾಗಾ ಎಳೆದ 'ರಾಗಾ'
ಬೆಂಗಳೂರು, ಸೆಪ್ಟಂಬರ್ 20: ಕೇಂದ್ರ ಸರ್ಕಾರ ಸೋಮವಾರದಿಂದ ಆರಂಭಿಸಿರುವ ವಿಶೇಷ ಸಂಸತ್ ಅಧಿವೇಶನ ಮುಂದುವರಿದಿದೆ. ಈ ವೇಳೆ ಸದನದಲ್ಲಿ ಸರ್ಕಾರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ತಂದ ಶೇಕಡಾ 33ರಷ್ಟು ಮೀಸಲಾತಿ ಮಸೂದೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೆಂಬಲಿಸಿದ್ದಾರೆ. ಆದರೆ ಇದು ಅಪೂರ್ಣ ಎಂದು 'ರಾಗಾ' ಎಳೆದಿದ್ದಾರೆ. ಕಾರಣವೇನೆಂಬ ಮಾಹಿತಿ ಇಲ್ಲಿದೆ.
ಕೇಂದ್ರುವ ಜಾರಿಗೆ ತಂದ ದಲ್ಲಿ ಮಸೂದೆ ಬಗ್ಗೆ ಅಧಿವೇಶನದಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ ಅವರು, ಮಹಿಳಾ ಮೀಸಲಾತಿ ಮಸೂದೆಯು ಒಬಿಸಿ ಮೀಸಲಾತಿ ಇಲ್ಲದೆ ಅದು ಪೂರ್ಣವಾಗುವುದಿಲ್ಲ ಎಂದು ಹೇಳಿದರು.

ಮಸೂದೆಯನ್ನು 1959 ರಿಂದ ಅನುಷ್ಠಾನಕ್ಕೆ ಬಂದ ಪಂಚಾಯತ್ ರಾಜ್ ಗೆ ಹೋಲಿಸಿದ ಗಾಂಧಿ, ಈ ಮಸೂದೆಯು ಮಹಿಳೆಯರಿಗೆ ಅಧಿಕಾರವನ್ನು ಹಸ್ತಾಂತರಿಸುವ ಮತ್ತೊಂದು ಮಹತ್ವದ ಹಾಗೂ ಪ್ರಮುಖ ಹೆಜ್ಜೆಯಾಗಿದೆ ಎಂದರು.
ಮಸೂದೆ ಬಗ್ಗೆ ಅನೇಕ ವಿರೋಧ ಪಕ್ಷದ ಸಂಸದರ ಕಳವಳ ಪರ ಧ್ವನಿ ಎತ್ತಿದ ರಾಹುಲ್ ಗಾಂಧಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಸ್ಥಾನಗಳನ್ನು ಮೀಸಲಿಡಲು ಪ್ರಸ್ತಾಪಿಸುವ 'ನಾರಿ ಶಕ್ತಿ ವಂದನ್ ಮಸೂದೆ'ಯನ್ನು ಅನುಷ್ಠಾನಗೊಳಿಸುವಲ್ಲಿ ವಿಳಂಬವಾಗಿದ್ದನ್ನು ಅವರು ಪ್ರಶ್ನೆ ಮಾಡಿದರು.
LIVE: Address on Women’s Reservation Bill | Parliament https://t.co/YGPRHkNd6b
— Rahul Gandhi (@RahulGandhi) September 20, 2023
ಬಿಲ್ ಜಾರಿಗೆ ಜನಗಣತಿ-ಡಿಲಿಮಿಟೇಶನ್ ಅಗತ್ಯ
ಈ ಮಸೂದೆಯನ್ನು ಜಾರಿಗೆ ತರಲು ನಿಮಗೆ ಹೊಸ ಜನಗಣತಿ ಮತ್ತು ಡಿಲಿಮಿಟೇಶನ್ ಅಗತ್ಯವಿದೆ ಎಂಬ ಕಲ್ಪನೆಯೇ ವಿಚಿತ್ರವಾಗಿದೆ. ಈ ಮಸೂದೆ ಇಂದೇ ಜಾರಿಗೆ ಬರಬಹುದೇ ಎಂದು ಕೇಳಿದರು.
ಇದೇ ವೇಳೆ ತೃಣಮೂಲ ಕಾಂಗ್ರೆಸ್ (TMC) ಸಂಸದ ಮಹುವಾ ಮೊಯಿತ್ರಾ ಅವರು, ಮಸೂದೆಯ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಉದ್ದೇಶಪೂರ್ವಕವಾಗಿ ಮಹಿಳೆಯರಿಗೆ ಮೀಸಲಾತಿ ಮಸೂದೆ ಜಾರಿಯನ್ನು ವಿಳಂಬವಾಗುವಂತೆ ಮಾಡಲಾಯಿತು. ಈ ಮಸೂದೆಯನ್ನು 'ಮಹಿಳಾ ಮೀಸಲಾತಿ ಮರುಹೊಂದಿಕೆ ಮಸೂದೆ' ಎಂದು ಮರುನಾಮಕರಣ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಮಹಿಳಾ ಮೀಸಲಾತಿ ಮಸೂದೆ ವಿಳಂಬ ಮಾಡಿ ಜಾರಿಗೆ ತಂದ ಕೇಂದ್ರ ಸರ್ಕಾರವು ಗೋವುಗಳನ್ನು ರಕ್ಷಿಸಲು ಬಯಸಿ ಯೋಜನೆ ಜಾರಿಗೆ ತರುವಾಗ ಗೋವುಗಳ ಸಂಖ್ಯೆಯನ್ನು ಎಣಿಸುವವರೆಗೂ ಕಾಯದೇ ತತಕ್ಷಣಕ್ಕೆ ಜಾರಿ ಮಾಡಿತು ಮೊಯಿತ್ರಾ ಬಿಜೆಪಿ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದರು.
ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಈ 2024ರಲ್ಲಿ ಮರೆತುಬಿಡಿ, 2029 ರಲ್ಲೂ ಸಹ ಜಾರಿಗೆ ಸಾಧ್ಯವಾಗದಿರಬಹುದು ಎಂದು ಅವರು ಕೇಂದ್ರದ ವಿರುದ್ಧ ಆರೋಪ ಮಾಡಿದರು. ಸದ್ಯ ಮೂರನೇ ದಿನದ ವಿಶೇಷ ಅಧಿವೇಶನ ನಡೆದಿದ್ದು, ಇನ್ನೆರಡು ದಿನ ನಡೆಯಲಿದ್ದು, ಶುಕ್ರವಾರ ಮುಕ್ತಾಯಗೊಳ್ಳಲಿದೆ.












Click it and Unblock the Notifications