ಬಿಹಾರ ಚುನಾವಣೆ, ಫಲಿತಾಂಶ ಪ್ರಶ್ನಾರ್ಹ!, 2 ವಾರದಲ್ಲಿ ಪುರಾವೆ ನೀಡುವೆ: KC Venugopal
ನವದೆಹಲಿ, ನವೆಂಬರ್ 15: ಬಹುನಿರೀಕ್ಷೆಯ ಬಿಹಾರ ವಿಧಾನಸಭಾ ಚುನಾವಣೆ 2025 ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ ನಾಯಕರು ಚುನಾವಣೆ ಪ್ರಕ್ರಿಯೆ ಹಾಗೂ ಚುನಾವಣೆ ಆಯೋಗದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಏಕಪಕ್ಷೀಯವಾಗಿ ಒಂದು ಕಡೆ ನಿರ್ಧಾರ ಬರಲು ಹೇಗೆ ಸಾಧ್ಯ ಎಂದೆಲ್ಲ ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ದಾಖಲೆ ಸಂಗ್ರಹಿಸಿ ಎರಡು ವಾರದಲ್ಲಿ ಪುರಾವೆ ಒದಗಿಸುತ್ತೇನೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರತಿಕ್ರಿಯಿಸಿದ್ದಾರೆ.
ದೆಹಲಿಯಲ್ಲಿ ಭಾನುವಾರ ಸುದ್ದಿಗಾರ ಜೊತೆಗೆ ಮಾತನಾಡಿದ ಅವರು, ಬಿಹಾರ ರಾಜ್ಯದಲ್ಲಿ ಈ ಬಾರಿಯ ಚುನಾವಣಾ ಫಲಿತಾಂಶ ನಮಗೆಲ್ಲರಿಗೂ ನಂಬಲಾಗದಂತಿದೆ. ಶೇಕಡಾ 90ರಷ್ಟು ಸ್ಟ್ರೈಕ್ ರೇಟ್ ಒಂದು ಪಕ್ಷದ ಪರ ಇರುವುದು ಭಾರತೀಯ ಇತಿಹಾಸದಲ್ಲಿ ಅಭೂತಪೂರ್ವವಾಗಿದೆ ಎಂದು ಮತದಾರರು ನೀಡಿದ ಅಂತಿಮ ಆದೇಶವನ್ನು ಕೆ.ಸಿ. ವೇಣುಗೋಪಾಲ್ ಅವರು ಪ್ರಶ್ನೆ ಮಾಡಿದ್ದಾರೆ.

ಬಿಹಾರ ಚುನಾವಣೆಯು ಪಾರದರ್ಶಕವಾಗಿ ನಡೆದಿಲ್ಲ ಎಂದು ಅವರು ಆರೋಪಿಸಿದ್ದಾರೆ. ಚುನಾವಣೆ ಆಯೋಗ, ಅಧಿಕಾರಿಗಳೂ ಏಕಪಕ್ಷೀಯವಾಗಿ ನಡೆದುಕೊಂಡಿದೆ. ಈ ಚುನಾವಣೆಯ ಇಡೀ ಪ್ರಕ್ರಿಯೆಯು ಪ್ರಶ್ನಾರ್ಹವಾಗಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ನಾವು ಎಲ್ಲ ಡೇಟಾವನ್ನು ಸಂಗ್ರಹಿಸುತ್ತಿದ್ದೇವೆ. ಸಂಪೂರ್ಣ ವಿಶ್ಲೇಷಣೆ ನಡೆಸುತ್ತೇವೆ. ಮುಂದಿನ 1 ರಿಂದ 2 ವಾರಗಳಲ್ಲಿ, ನಾವು ಕಾಂಕ್ರೀಟ್ ಪುರಾವೆಗಳನ್ನು ಒದಗಿಸುತ್ತೇವೆ.
ಈ ಸಂಪೂರ್ಣ ಚುನಾವಣಾ ಪ್ರಕ್ರಿಯೆಯು ಸಂಪೂರ್ಣವಾಗಿ ನಂಬಲರ್ಹವಾಗಿದೆ. ಚುನಾವಣಾ ಆಯೋಗವು ಸಂಪೂರ್ಣವಾಗಿ ಏಕಪಕ್ಷೀಯವಾಗಿದೆ ಎಂದು ಅವರು ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ 202 ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ. ಆರ್‌ಜೆಡಿ ತೇಜಸ್ವಿ ಯಾದವ್ ಮತ್ತು ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರ ನೇತೃತ್ವದ ಮಹಾಘಟಬಂಧನ್ 34 ಸೀಟು ಗೆದ್ದಿದೆ. ಇತರ ಪಕ್ಷಗಳು 07 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ.
ರಾಹುಲ್ ಗಾಂಧಿ ಅವರು ಈಗಾಗಲೇ ಮತಗಳ್ಳತನ ಆರೋಪ ಮಾಡುತ್ತಲೇ ಬಂದಿದ್ದಾರೆ. ಈ ಸಂಬಂಧ ಅಭಿಯಾನಕ್ಕೆ ಚಾಲನೆ ನೀಡಿದ್ದರು. ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಈವರೆಗೆ ಒಟ್ಟು 95 ಬಾರಿ ಚುನಾವಣೆಯಲ್ಲಿ ಸೋಲು ಕಂಡಿದೆ. ಉತ್ತರ ಪ್ರದೇಶದಲ್ಲಿ 06, ಬಿಹಾರ 06, ಕರ್ನಾಟಕ 03, ಗುಜರಾತ್ ನಲ್ಲಿ 04 ಬಾರಿ ಸೇರಿದಂತೆ ಇತರರ ಕಡೆಗಳಲ್ಲಿ ಪಕ್ಷ ಹೀನಾಯ ಸೋಲು ಕಂಡಿದೆ.
ಬಿಹಾರದಲ್ಲಿ ಕಾಂಗ್ರೆಸ್ ಸೋಲಿನ ಬಳಿಕ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷದ ಸೋಲಿನ ಪಟ್ಟಿ ನೀಡಿದ್ದಾರೆ. ರಾಹುಲ್ ಗಾಂಧಿಗೆ "ಸೋಲಿನ ಸ್ಥಿರತೆ" ಪ್ರಶಸ್ತಿ ನೀಡಬೇಕು ಎಂದು ಕಾಲೆಳೆದಿದ್ದಾರೆ. ಬಿಹಾರದಲ್ಲಿ "ರಾಹುಲ್ ಗಾಂಧಿ ಮತ್ತೊಂದು ಚುನಾವಣೆ ಸೋಲು ಎದುರಿಸಿದ್ದಾರೆ. ಚುನಾವಣೆಯಲ್ಲಿ ಸೋಲಿನ ಸ್ಥಿರತೆಗಾಗಿ ಪ್ರಶಸ್ತಿಗಳನ್ನು ನೀಡಿದಲ್ಲಿ ಎಲ್ಲರನ್ನು ರಾಹುಲ್ ಗಾಂಧಿ ಮೀರಿಸುತ್ತಾರೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.












Click it and Unblock the Notifications