
Breaking: ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಅಕ್ರಮ: ಪತ್ರ ಬರೆದ ಶಶಿ ತರೂರ್ ತಂಡ
ನವದೆಹಲಿ, ಅ.19: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಮತೆಣಿಕೆ ನಡೆಯುತ್ತಿರುವ ಬೆನ್ನಲ್ಲೇ ಅಭ್ಯರ್ಥಿ ಶಶಿ ತರೂರ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಆಂತರಿಕ ಚುನಾವಣೆ ಒಂದು ಮೈಲಿಗಲ್ಲು ಎಂದು ಪರಿಗಣಿಸುತ್ತಿರುವ ಸಮಯದಲ್ಲಿ ಶಶಿ ತರೂರ್ ಅವರ ತಂಡ ಹಲವಾರು ಸಮಸ್ಯೆಗಳಿವೆ ಎಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿಗೆ ಪತ್ರ ಬರೆದಿದೆ.
ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಮತ ಎಣಿಕೆ: 24 ವರ್ಷಗಳ ಬಳಿಕ ಕಾಂಗ್ರೆಸ್ಗೆ ಗಾಂಧಿಯೇತರ ಅಧ್ಯಕ್ಷ
24 ವರ್ಷಗಳ ನಂತರ ಮೊದಲನೆ ಗಾಂಧಿಯೇತರ ಅಧ್ಯಕ್ಷ ಈ ಬಾರಿ ಆಯ್ಕೆಯಾಗಲಿದ್ದು, ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಮತಗಳ ಎಣಿಕೆ ನಡೆಯುತ್ತಿದೆ. ಎಣಿಕೆ ಪ್ರಾರಂಭವಾದ ಕೂಡಲೇ ಶಶಿ ತರೂರ್ ಅವರ ತಂಡವು ಹಲವಾರು "ಸಮಸ್ಯೆಗಳು" ಇವೆ ಎಂದು ಆರೋಪಿಸಿದೆ. ಸ್ಪರ್ಧೆಯಲ್ಲಿ ಶಶಿ ತರೂರ್ ಅವರ ಪ್ರತಿಸ್ಪರ್ಧಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗಾಂಧಿ ಕುಟುಂಬದ ಅಭ್ಯರ್ಥಿ ಎಂದೇ ಆರೋಪಿಸಲಾಗಿದೆ.
"ನಾವು ಮಧುಸೂದನ್ ಮಿಸ್ತ್ರಿ ಅವರ ಕಚೇರಿಗೆ ನಿರಂತರ ಸಂವಹನ ನಡೆಸಿದ್ದೇವೆ. ವಿವಿಧ ವಿಷಯಗಳ ಬಗ್ಗೆ ಅವರಿಗೆ ತಿಳಿಸಿದ್ದೇವೆ" ಎಂದು ಶಶಿ ತರೂರ್ ಅವರ ಚುನಾವಣಾ ಏಜೆಂಟ್ ಸಲ್ಮಾನ್ ಸೋಜ್ ಹೇಳಿದರು.
ಶಶಿ ತರೂರ್ ಅವರ ಚುನಾವಣಾ ಏಜೆಂಟ್ ಸಲ್ಮಾನ್ ಸೋಜ್, ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂಧನ್ ಮಿಸ್ತ್ರಿ ಅವರಿಗೆ ಪತ್ರ ಬರೆದು, "ಯುಪಿಯಲ್ಲಿ ಚುನಾವಣಾ ನಡವಳಿಕೆಯಲ್ಲಿ ಅತ್ಯಂತ ಗಂಭೀರ ಅಕ್ರಮಗಳು ನಡೆದಿವೆ. ಉತ್ತರ ಪ್ರದೇಶದಲ್ಲಿ ಚಲಾವಣೆಯಾದ ಎಲ್ಲಾ ಮತಗಳನ್ನು ಅಮಾನ್ಯವೆಂದು ಪರಿಗಣಿಸಬೇಕು" ಎಂದು ಒತ್ತಾಯಿಸಿದ್ದಾರೆ.
Election agent to Congress presidential candidate Shashi Tharoor writes letter to Congress Central Election Authority chairman Madhusudhan Mistry, alleging "extremely serious irregularities in conduct of election in UP" & demands "that all votes from UP be deemed invalid". pic.twitter.com/ZEAZVsJAVF
— ANI (@ANI) October 19, 2022
ಸೀಲ್ ಮಾಡಿದ ಮತಪೆಟ್ಟಿಗೆಗಳನ್ನು ದೇಶಾದ್ಯಂತದಿಂದ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಗೆ ತರಲಾಗಿದೆ. ಸೋಮವಾರ ನಡೆದ ಚುನಾವಣೆಯಲ್ಲಿ 9,915 ಅರ್ಹ ನಾಯಕರಲ್ಲಿ 96 ಪ್ರತಿಶತದಷ್ಟು ಜನರು ಮತ ಚಲಾಯಿಸಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಗಾಂಧಿ ಕುಟುಂಬದ ಬಹುಕಾಲದ ನಿಷ್ಠರಾಗಿರುವ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ.